ಕೋಟ : ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಭಾರೀ ಆತಂಕವನ್ನೇ ಮೂಡಿಸುತ್ತಿದೆ. ಇದೀಗ ಕೊರೊನಾ ನಿಯಂತ್ರಣಕ್ಕೆ ಭಕ್ತರು ದೇವರು ಮೊರೆ ಹೋಗಿದ್ದಾರೆ.

ಕೊರೊನಾ ತಡೆಗಾಗಿ ಉಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕಾರ್ತಟ್ಟು ಚಿತ್ರಪಾಡಿಯಲ್ಲಿರುವ ಶ್ರೀ ಅಘೋರೇಶ್ವರ ದೇವಸ್ಥಾನದಲ್ಲಿ ಮಾರ್ಚ್ 16ರ ಸೋಮವಾರದಂದು ದೇವಸ್ಥಾನದ ಆಡಳಿತ ಮತ್ತು ಅಘೋರೇಶ್ವರ ಕಲಾರಂಗ(ರಿ) ವತಿಯಿಂದ ರುದ್ರಾಭಿಷೇಕ, ಬೊಂಡಾಭಿಷೇಕ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ 7ಗಂಟೆಗೆ ರುದ್ರಾಭಿಷೇಕ ಹಾಗೂ ಸಂಜೆ 7 ಗಂಟೆಗೆ ರಂಗಪೂಜೆ ನಡೆಯಲಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರಲಿ ಅಂತಾ ದೇವರಲ್ಲಿ ಪ್ರಾರ್ಥಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.