ಕಿವಿಸ್ ನೆಲದಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತ : ನಾಯಕನಾಗಿಯೂ ಗೆದ್ದ ಕನ್ನಡಿಗ ಕೆ.ಎಲ್.ರಾಹುಲ್

0

ಮೌಂಗನುಯಿ : ತನ್ನದೇ ನೆಲದಲ್ಲಿ ನ್ಯೂಜಿಲೆಂಡ್ ತಂಡವನ್ನು ಟಿ20 ಸರಣಿಯಲ್ಲಿ ಬಗ್ಗು ಬಡಿಯೋ ಮೂಲಕ ಟೀಂ ಇಂಡಿಯಾ ಹೊಸ ದಾಖಲೆ ನಿರ್ಮಿಸಿದೆ. ನಾಯಕ ವಿರಾಟ್ ಕೊಯ್ಲಿ ಅನುಪಸ್ಥಿತಿಯಲ್ಲಿಯೂ ಐದು ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ಜಯಿಸೋ ಮೂಲಕ ಭಾರತ ಕಿವಿಸ್ ತಂಡವನ್ನು ವೈಟ್ ವಾಶ್ ಮಾಡಿದೆ. ಬ್ಯಾಟಿಂಗ್, ಕೀಪಿಂಗ್ ನಲ್ಲಿ ಸೈ ಎನಿಸಿಕೊಂಡಿದ್ದ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.ಮೌಂಗನುಯಿಯಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭವೊದಗಿಸಿದ್ರು. ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಸಂಜು ಸ್ಯಾಮ್ಸನ್ ಕೇವಲ 2 ರನ್ ಗೆ ಕಗ್ಗಿಲಜಿನ್ ಗೆ ವಿಕೆಟ್ ಒಪ್ಪಿಸೋ ಮೂಲಕ ನಿರಾಸೆ ಮೂಡಿಸಿದ್ರು. ನಂತರ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿ ಉತ್ತಮ ಬ್ಯಾಟಿಂಗ್ ನಡೆಸಿದ್ರು.ರಾಹುಲ್ 45 ರನ್ ಗಳಿಸಿದ್ರೆ ರೋಹಿತ್ ಶರ್ಮಾ 60 ರನ್ ಗಳಿಸಿ ಸ್ನಾಯು ಸೆಳೆತದಿಂದ ಮೈದಾನದಿಂದ ಹೊರ ನಡೆದ್ರು. ಶ್ರೇಯಸ್ ಐಯ್ಯರ್ 33 ರನ್ ಗಳಿಸಿದ್ರೆ ಮನೀಶ್ ಪಾಂಡೆ 11 ರನ್ ನೆರವಿನಿಂದ ಭಾರತ 3 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರ ಕಗ್ಗಿಲ್ಜಿನ್ 2 ವಿಕೆಟ್ ಪಡೆದ್ರೆ, ಬೆನ್ನೆಟ್ 1 ವಿಕೆಟ್ ಪಡೆದುಕೊಂಡ್ರು. 163 ರನ್ ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ಮಾರ್ಟಿನ್ ಗುಫ್ಟಿಲ್ 2 ರನ್ ಗಳಿಸಿದ್ರೆ, ಕೊಲಿನ್ ಮುನ್ರೋಓ 15 ರನ್ ಗಳಿಸಿ ವಾಷಿಂಗ್ ಟನ್ ಸುಂದರ್ ಬಲೆಗೆ ಬಿದ್ರು.ಇನ್ನು ವಿಕೆಟ್ ಕೀಪರ್ ಸೈಫರ್ಟ್ ಹಾಗೂ ರಾಸ್ ಟೇಲರ್ ಭರ್ಜರಿ ಅರ್ಧ ಶತಕ ಸಿಡಿಸಿದ್ರು. ಸೈಫರ್ಟ್ 50 ರನ್ ಗಳಿಸಿದ್ರೆ ರಾಟ್ ಟೇಲರ್ 53 ರನ್ ಗಳಿಸಿ ಸೈನಿ ಹಾಗೂ ಟಾಕೂರ್ ಗೆ ವಿಕೆಟ್ ಒಪ್ಪಿಸಿದ್ರು. ನಂತರ ನ್ಯೂಜಿಲೆಂಡ್ ಬೌಲರ್ ಗಳನ್ನು ಕಾಡಿದ ಬೂಮ್ರಾ ಹಾಗೂ ಶಾರ್ದೂಲ್ ಠಾಕೂರ್ ಮಿಚೆಲ್, ಸ್ಟನ್ನರ್, ಕಗ್ಗಿಂಜಿಲ್ ಹಾಗೂ ಟೀಮ್ ಸೌಥಿ ಅವರಿಗೆ ಎರಡಂಕಿ ದಾಟುವ ಮೊದಲೇ ಪೆವಿಲಿಯನ್ ದಾರಿ ತೋರಿಸಿದ್ರು. ಇಶಾ ಸೋದಿ ಒಂದಿಷ್ಟು ಹೊತ್ತು ತಂಡವನ್ನು ಗೆಲುವಿನ ದಡ ತಲುಪಿಸೋದಕ್ಕೆ ಯತ್ನಿಸಿದ್ರೂ ಸಫಲವಾಗಲಿಲ್ಲ.ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ನ್ಯೂಜಿಲೆಂಡ್ ಭಾರತ ವಿರುದ್ದ ಭಾರೀ ಮುಖಭಂಗ ಅನುಭವಿಸಿದೆ.

ಸಂಕ್ಷಿಪ್ತ ಸ್ಕೋರ್ :
ಭಾರತ : ರೋಹಿತ್ ಶರ್ಮಾ 60 (41), ಕೆ.ಎಲ್.ರಾಹುಲ್ 45 (33). ಶ್ರೇಯಸ್ ಐಯ್ಯರ್ 33 (31), ಮನೀಶ್ ಪಾಂಡೆ 11 (4). ಶಿವಂ ದುಬೆ 5(6) ಸ್ಕಾಟ್ ಕಗ್ಗಿಂಜಲ್ 25/2, ಹಮೀಶ್ ಬೆನ್ನಿಟ್ 21/1
ನ್ಯೂಜಿಲೆಂಡ್ : ರಾಸ್ ಟೇಲರ್ 53 (47),ಟೀಮ್ ಸೈಫರ್ಟ್ 50 (30). ಇಶಾ ಸೋದಿ 16 (10), ಕೊಲಿನ್ ಮುನ್ರೋ 15 (6), ಬೂಮ್ರಾ 12/3, ನವದೀಪ್ ಸೈನಿ 23/2, ಶಾರ್ದೂಲ್ ಠಾಕೂರ್ 38/2. ವಾಷಿಂಗ್ಟನ್ ಸುಂದರ್ 20/1

Leave A Reply

Your email address will not be published.