ನ್ಯೂಜಿಲ್ಯಾಂಡ್ ತಂಡವನ್ನು ಹೊಗಳಿದ್ಯಾಕೆ ರೋಹಿತ್ ಶರ್ಮಾ ?

0

ಹ್ಯಾಮಿಲ್ಟನ್ : ಭಾರತ ನ್ಯೂಜಿಲ್ಯಾಂಡ್ ವಿರುದ್ದ ಅವರದೇ ನೆಲದಲ್ಲಿ ಸರಣಿ ಜಯಿಸಿದೆ. ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಕಮಾಲ್ ಮಾಡಿದ್ರು. ಸೂಪರ್ ಓವರ್ ನಲ್ಲಿ ಸೂಪರ್ ಸಿಕ್ಸರ್ ಸಿಡಿಸೋ ಮೂಲಕ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ರು. ಆದ್ರೀಗ ಅದೇ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ಕ್ರಿಕೆಟಿಗರ ಕ್ರೀಡಾ ಸ್ಪೂರ್ತಿಯನ್ನು ಹಾಡಿಹೊಗಳಿದ್ದಾರೆ.
ಅಷ್ಟಕ್ಕೂ ರೋಹಿತ್ ಶರ್ಮಾ ಹೊಗಳಿದ್ದು ಹಿರಿಯರ ತಂಡವನ್ನಲ್ಲಾ, ಬದಲಾಗಿ ಕಿರಿಯರ ತಂಡವನ್ನು. ಟ್ವೀಟ್ಟರ್ ನಲ್ಲಿ ರೋಹಿತ್ ಶರ್ಮಾ ವಿಡಿಯೋವೊಂದನ್ನು ಟ್ವೀಟ್ ಮಾಡಿ, ಅಂಡರ್ -19 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಎರಡನೇ ಕ್ವಾರ್ಟರ್ ಫೈನಲ್‍ನಲ್ಲಿ ತೋರಿಸಿದ ಹೃದಯಸ್ಪರ್ಶಿ ಸನ್ನಿವೇಶವನ್ನು ಶ್ಲಾಘಿಸಿದ್ದಾರೆ. ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 239 ರನ್ ಪೇರಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಇನ್ನಿಂಗ್ಸ್ 43ನೇ ಓವರಿನ ಕೊನೆಯಲ್ಲಿ ಕಾಲು ನೋವು ಕಾಣಿಸಿಕೊಂಡಿದ್ದರಿಂದ ವಿಂಡೀಸ್‍ನ ಬ್ಯಾಟ್ಸ್‌ಮನ್‌ ಕಿರ್ಕ್ ಮೆಕೆಂಜಿ ನಿವೃತ್ತರಾದರು.ಪಂದ್ಯದಲ್ಲಿ ಪರ ಕಿರ್ಕ್ ಮೆಕೆಂಜಿ 104 ಎಸೆತಗಳಲ್ಲಿ 99 ರನ್ ಗಳಿಸಿದ್ದರು. ಆದರೆ ಇನ್ನಿಂಗ್ಸ್ ನ 48ನೇ ಓವರಿನಲ್ಲಿ ವಿಂಡೀಸ್ ಒಂಬತ್ತು ವಿಕೆಟ್ ಕಳೆದುಕೊಂಡಿದ್ದರಿಂದ ಕಿರ್ಕ್ ಮೆಕೆಂಜಿ ಮತ್ತೆ ಬ್ಯಾಟಿಂಗ್‍ಗೆ ಬಂದರು. ಬಳಿಕ ಕ್ರಿಸ್ಟಿಯನ್ ಕ್ಲಾರ್ಕ್ ಅವರ ಮುಂದಿನ ಎಸೆತದಲ್ಲಿ ಕಿರ್ಕ್ ವಿಕೆಟ್ ಒಪ್ಪಿಸಿದರು.
ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಗುತ್ತಿದ್ದಂತೆ ಮೆಕೆಂಜಿ ಮೈದಾನದಿಂದ ಹೊರನಡೆಯಲು ಹೆಣಗಾಡಿದರು. ಈ ವೇಳೆ ಇಬ್ಬರು ನ್ಯೂಜಿಲೆಂಡ್ ಆಟಗಾರರು ಮೆಕೆಂಜಿಯವರ ರಕ್ಷಣೆಗೆ ಬಂದು ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು. ಈ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ, ಇದು ಅತ್ಯಂತ ಉತ್ತಮ ಕ್ರೀಡಾ ಸ್ಫೂರ್ತಿ. ಇದನ್ನು ನೋಡಲು ಅತ್ಯುತ್ತಮವಾಗಿದೆ ಎಂದು ನ್ಯೂಜಿಲ್ಡ್ಯಾಂಡ್ ತಂಡವನ್ನು ಹೊಗಳಿದ್ದಾರೆ.

https://twitter.com/cricketworldcup/status/1222568945204498433

Leave A Reply

Your email address will not be published.