Rohit Sharma: 12 ಟಿ20 ಫೈನಲ್, ಒಂದೇ ಸೋಲು, 11 ಕಿರೀಟ.. ರೋಹಿತ್ ಅಪೂರ್ವ ದಾಖಲೆ

Rohith Sharma Special Record : ಭಾರತಕ್ಕೆ 17 ವರ್ಷಗಳ ನಂತರ ಟಿ20 ವಿಶ್ವಕಪ್, 13 ವರ್ಷಗಳ ನಂತರ ಐಸಿಸಿ ವಿಶ್ವಕಪ್, 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದು ಕೊಟ್ಟ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಇದರ ಜೊತೆಗೆ ರೋಹಿತ್ ಮತ್ತೊಂದು ಅಪೂರ್ವ ದಾಖಲೆ ಮಾಡಿದ್ದಾರೆ. ಅದೇನು ಗೊತ್ತಾ?

Rohith Sharma Special Record : ಬೆಂಗಳೂರು: ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohith Sharma ) ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ದಿಗ್ಗಜ ನಾಯಕರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಭಾರತಕ್ಕೆ 17 ವರ್ಷಗಳ ನಂತರ ಟಿ20 ವಿಶ್ವಕಪ್, 13 ವರ್ಷಗಳ ನಂತರ ಐಸಿಸಿ ವಿಶ್ವಕಪ್, 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದು ಕೊಟ್ಟ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಇದರ ಜೊತೆಗೆ ರೋಹಿತ್ ಮತ್ತೊಂದು ಅಪೂರ್ವ ದಾಖಲೆ ಮಾಡಿದ್ದಾರೆ. ಅದೇನು ಗೊತ್ತಾ?

37 ವರ್ಷದ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಒಟ್ಟು 12 ಟಿ20 ಫೈನಲ್ ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 8 ಫೈನಲ್’ಗಳಲ್ಲಿ ನಾಯಕತ್ವ ವಹಿಸಿದ್ದಾರೆ. 12 ಟಿ20 ಫೈನಲ್ ಪಂದ್ಯಗಳ ಪೈಕಿ ರೋಹಿತ್ ಸೋಲು ಕಂಡಿರುವುದು ಕೇವಲ ಒಂದು ಫೈನಲ್’ನಲ್ಲಿ ಮಾತ್ರ. ಉಳಿದ 11 ಫೈನಲ್’ಗಳಲ್ಲಿ ರೋಹಿತ್ ಶರ್ಮಾ ಪ್ರತಿನಿಧಿಸದ ತಂಡಗಳೇ ಗೆದ್ದಿದ್ದು, ಚಾಂಪಿಯನ್ ಪಟ್ಟಕ್ಕೇರಿವೆ. ಇನ್ನು ನಾಯಕತ್ವ ವಹಿಸಿದ 8 ಫೈನಲ್ ಪಂದ್ಯಗಳಲ್ಲೂ ಅಜೇಯ ಸಾಧನೆ ಮಾಡಿರುವ ರೋಹಿತ್ ಶರ್ಮಾ, ತಮ್ಮ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದಾರೆ.

12 T20 Match Final 1 lost 11 win Rohith Sharma Special Record 
Image Credit to Original Source
ಟಿ20 ಫೈನಲ್’ಗಳಲ್ಲಿ ರೋಹಿತ್ ಶರ್ಮಾ ಸಾಧನೆ
ಟಿ20 ವಿಶ್ವಕಪ್- 2007
ಫಲಿತಾಂಶ: ಚಾಂಪಿಯನ್
ತಂಡ: ಭಾರತ
ಎದುರಾಳಿ: ಪಾಕಿಸ್ತಾನ
ಐಪಿಎಲ್- 2009
ಫಲಿತಾಂಶ: ಚಾಂಪಿಯನ್
ತಂಡ: ಡೆಕ್ಕನ್ ಜಾರ್ಜರ್ಸ್ ಹೈದರಾಬಾದ್ ಚಾಂಪಿಯನ್
ಎದುರಾಳಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಐಪಿಎಲ್-2013
ಫಲಿತಾಂಶ: ಚಾಂಪಿಯನ್
ತಂಡ: ಮಂಬೈ ಇಂಡಿಯನ್ಸ್ (ನಾಯಕ)
ಎದುರಾಳಿ: ಚೆನ್ನೈ ಸೂಪರ್ ಕಿಂಗ್ಸ್
ಚಾಂಪಿಯನ್ಸ್ ಲೀಗ್ ಟಿ20 – 2013
ಫಲಿತಾಂಶ: ಚಾಂಪಿಯನ್
ತಂಡ: ಮುಂಬೈ ಇಂಡಿಯನ್ಸ್ (ನಾಯಕ)
ಎದುರಾಳಿ: ರಾಜಸ್ಥಾನ ರಾಯಲ್ಸ್
ಟಿ20 ವಿಶ್ವಕಪ್ 2014
ಫಲಿತಾಂಶ: ರನ್ನರ್ಸ್ ಅಪ್
ತಂಡ: ಭಾರತ
ಎದುರಾಳಿ: ಶ್ರೀಲಂಕಾ
ಐಪಿಎಲ್-2015
ಫಲಿತಾಂಶ: ಚಾಂಪಿಯನ್
ತಂಡ: ಮುಂಬೈ ಇಂಡಿಯನ್ಸ್ (ನಾಯಕ)
ಎದುರಾಳಿ: ಚೆನ್ನೈ ಸೂಪರ್ ಕಿಂಗ್ಸ್
ಏಷ್ಯಾ ಕಪ್ -2016
ಫಲಿತಾಂಶ: ಚಾಂಪಿಯನ್
ತಂಡ: ಭಾರತ
ಎದುರಾಳಿ: ಬಾಂಗ್ಲಾದೇಶ
ಐಪಿಎಲ್-2017
ಫಲಿತಾಂಶ: ಚಾಂಪಿಯನ್
ತಂಡ: ಮುಂಬೈ ಇಂಡಿಯನ್ಸ್ (ನಾಯಕ)
ಎದುರಾಳಿ: ರೈಸಿಂಗ್ ಪುಣೆ ಸೂಪರ್ ಜಯಂಟ್ಸ್
ನಿದಾಹಸ್ ಟ್ರೋಫಿ-2013
ಫಲಿತಾಂಶ: ಚಾಂಪಿಯನ್
ತಂಡ: ಭಾರತ (ನಾಯಕ)
ಎದುರಾಳಿ: ಬಾಂಗ್ಲಾದೇಶ
ಫಲಿತಾಂಶ: ಚಾಂಪಿಯನ್
ತಂಡ: ಮುಂಬೈ ಇಂಡಿಯನ್ಸ್ (ನಾಯಕ)
ಎದುರಾಳಿ: ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್-2020
ಫಲಿತಾಂಶ: ಚಾಂಪಿಯನ್
ತಂಡ: ಮುಂಬೈ ಇಂಡಿಯನ್ಸ್ (ನಾಯಕ)
ಎದುರಾಳಿ: ಡೆಲ್ಲಿ ಕ್ಯಾಪಿಟಲ್ಸ್
ಟಿ20 ವಿಶ್ವಕಪ್-2024
ಫಲಿತಾಂಶ: ಚಾಂಪಿಯನ್
ತಂಡ: ಭಾರತ (ನಾಯಕ)
ಎದುರಾಳಿ: ದಕ್ಷಿಣ ಆಫ್ರಿಕಾ
12 T20 Match Final 1 lost 11 win Rohith Sharma Special Record 

Comments are closed.