Asian Games 2023 : 2023ರ ಏಷ್ಯನ್ ಗೇಮ್ಸ್’ಗೆ ಎಂಟ್ರಿ ಕೊಡಲಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟರ್ಸ್

ಬೆಂಗಳೂರು : ಏಷ್ಯನ್ ಗೇಮ್ಸ್ 2023 (Asian Games 2023) ಇದೇ ವರ್ಷದ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್’ಜೌನಲ್ಲಿ (Hangzhou, China) ನಡೆಯಲಿದ್ದು, ಭಾರತ ಪುರುಷರ (India men’s cricket team) ಮತ್ತು ಮಹಿಳೆಯರ ಕ್ರಿಕೆಟ್ ತಂಡಗಳು (India Women’s cricket team) ಏಷ್ಯನ್ ಗೇಮ್ಸ್’ನಲ್ಲಿ ಭಾಗವಹಿಸಲಿದೆ.

ಏಷ್ಯನ್ ಗೇಮ್ಸ್’ಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳನ್ನ ಕಳುಹಿಸಿಕೊಡಲು ಬಿಸಿಸಿಐ (BCCI) ನಿರ್ಧರಿಸಿದೆ. ಏಷ್ಯನ್ ಗೇಮ್ಸ್’ನಲ್ಲಿ ಕ್ರಿಕೆಟ್ ಪಂದ್ಯಗಳು ಟಿ20 ಫಾರ್ಮ್ಯಾಟ್’ನಲ್ಲಿ ನಡೆಯಲಿವೆ.

ಏಷ್ಯನ್ ಗೇಮ್ಸ್ ನಡೆಯುವ ಹೊತ್ತಲ್ಲೇ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ (ICC World Cup 2023)
ಟೂರ್ನಿ ಕೂಡ ಆರಂಭವಾಗಲಿದೆ. ಹೀಗಾಗಿ ವಿಶ್ವಕಪ್’ಗೆ ಆಯ್ಕೆಯಾಗದ ಯುವ ಆಟಗಾರರನ್ನೊಳಗೊಂಡ ತಂಡವನ್ನು ಏಷ್ಯನ್ ಗೇಮ್ಸ್’ಗೆ ಬಿಸಿಸಿಐ ಆಯ್ಕೆ ಮಾಡಲಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರ ಪೈಕಿ ಬಹುತೇಕರು ಆಡಲಿದ್ದು, ಅಲ್ಲಿ ಅವಕಾಶ ಪಡೆಯದವರು ಏಷ್ಯನ್ ಗೇಮ್ಸ್’ನಲ್ಲಿ ಆಡಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿದೆ.

ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್’ನಲ್ಲಿ ಆಡಲಿರುವ ಭಾರತ ಪುರುಷರ ಹಾಗೂ ಮಹಿಳಾ ತಂಡಗಳನ್ನು ಜೂನ್ 30ರ ಒಳಗಾಗಿ ಬಿಸಿಸಿಐ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಕಳುಹಿಸಿಕೊಡಲಿದೆ. 2010 ಹಾಗೂ 2014ರ ಏಷ್ಯನ್ ಗೇಮ್ಸ್’ನಲ್ಲಿ ಕ್ರಿಕೆಟ್’ಗೆ ಅವಕಾಶ ನೀಡಲಾಗಿತ್ತು. ಆದರೆ ಭಾರತ ತಂಡ ಭಾಗವಹಿಸಿರಲಿಲ್ಲ. 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್’ನಿಂದ ಕ್ರಿಕೆಟ್ ಅನ್ನು ಕೈಬಿಡಲಾಗಿತ್ತು.

ಇದನ್ನೂ ಓದಿ : Cheteshwar Pujara: ಚೇತೇಶ್ವರ್ ಪೂಜಾರ ಟೆಸ್ಟ್ ಕರಿಯರ್’ಗೆ ಬಿಸಿಸಿಐ ಇತಿಶ್ರೀ..ಮುಗಿಯಿತಾ 13 ವರ್ಷಗಳ ಟೆಸ್ಟ್ ವೃತ್ತಿಬದುಕು?

ಇದನ್ನೂ ಓದಿ : India vs west indies : ವಿಂಡೀಸ್ ವಿರುದ್ಧದ ಸರಣಿಗೆ ಭಾರತ ಟೆಸ್ಟ್, ಏಕದಿನ ತಂಡ ಪ್ರಕಟ; ಟೆಸ್ಟ್ ತಂಡದಿಂದ ಪೂಜಾರ ಔಟ್, ಯಾರಿಗೆಲ್ಲಾ ಚಾನ್ಸ್?

ಇದೀಗ ಚೀನಾದ ಹಾಂಗ್’ಜೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್’ಗೆ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲಾಗಿದ್ದು, ಭಾರತ ತಂಡಗಳು ಭಾಗವಹಿಸಲಿವೆ. ಏಷ್ಯನ್ ಗೇಮ್ಸ್ ಸಮಯದಲ್ಲಿ ಭಾರತ ಮಹಿಳಾ ತಂಡಕ್ಕೆ ಯಾವುದೇ ಟೂರ್ನಿಗಳು ನಿಗದಿಯಾಗಿಲ್ಲದಿರುವ ಕಾರಣ, ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಪೂರ್ಣ ಪ್ರಮಾಣದ ತಂಡವೇ ಆಡುವ ನಿರೀಕ್ಷೆಯಿದೆ.

Asian Games 2023 : India Cricket team will participate in Asian Games

Comments are closed.