Dhoni Vs Kohli : ಇಂದು ತಲಾ Vs ಕಿಂಗ್ ಮುಖಾಮುಖಿ, ಚಿನ್ನಸ್ನಾಮಿಯಲ್ಲಿ ಹೇಗಿದೆ ಗೊತ್ತಾ ದಿಗ್ಗಜ ಬ್ಯಾಟಿಂಗ್ ದರ್ಬಾರ್?

ಬೆಂಗಳೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದು ಐಪಿಎಲ್ ಅಖಾಡದ ಅತೀ ರೋಚಕ ಪಂದ್ಯ. ಕ್ರಿಕೆಟ್ ದಿಗ್ಗಜರಾದ ತಲಾ ಮತ್ತು ಕಿಂಗ್ (Dhoni Vs Kohli ) ಮುಖಾಮುಖಿಯನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ. “ತಲಾ” ಅಂದ್ರೆ ಎಂ.ಎಸ್ ಧೋನಿ, “ಕಿಂಗ್” ಅಂದ್ರೆ ವಿರಾಟ್ ಕೊಹ್ಲಿ . ಈ ಇಬ್ಬರು ದಿಗ್ಗಜರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದ್ದು, ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕರಾಗಿರುವ ಎಂ.ಎಸ್ ಧೋನಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 10 ಐಪಿಎಲ್ ಇನ್ನಿಂಗ್ಸ್”ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 92.60 ಸರಾಸರಿಯಲ್ಲಿ 180.80 ಸ್ಟ್ರೈಕ್’ರೇಟ್’ನಲ್ಲಿ 5 ಅರ್ಧಶತಕಗಳ ಸಹಿತ 463 ರನ್ ಗಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಧೋನಿ ಇಲ್ಲಿಯವರೆಗೆ 39.90ರ ಬ್ಯಾಟಿಂಗ್ ಸರಾಸರಿಯಲ್ಲಿ 140.84ರ ಸ್ಟ್ರೈಕ್’ರೇಟ್’ನಲ್ಲಿ 838 ರನ್ ಕಲೆ ಹಾಕಿದ್ದಾರೆ. ಇದೇ ವೇಳೆ ರಾಯಲ್ ಚಾಲೆಂಜರ್ಸ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 39.16ರ ಸರಾಸರಿಯಲ್ಲಿ 9 ಅರ್ಧಶತಕಗಳೊಂದಿಗೆ 979 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ Vs ಸಿಎಸ್‌ಕೆ
ರನ್: 979, ಸರಾಸರಿ: 39.16, ಅರ್ಧಶತಕ: 09

ಎಂ.ಎಸ್ ಧೋನಿ Vs ಆರ್‌ಸಿಬಿ
ರನ್: 838, ಸರಾಸರಿ: 39.90, ಸ್ಟ್ರೈಕ್’ರೇಟ್: 140.84

ಐಪಿಎಲ್-2023 ಟೂರ್ನಿಯಲ್ಲಿ ಅಮೋಘ ಫಾರ್ಮ್’ನಲ್ಲಿರುವ ವಿರಾಟ್ ಕೊಹ್ಲಿ, ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಚಿನ್ನಸ್ನಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 2ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ 82 ರನ್ ಗಳಿಸಿದ್ದ ಕೊಹ್ಲಿ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 21 ರನ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 61 ರನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Arjun Tendulkar IPL debut : ಅಪ್ಪ ವಿಶ್ವಕಪ್ ಎತ್ತಿ ಹಿಡಿದ ಮೈದಾನದಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್

ಇದನ್ನೂ ಓದಿ : Virat Kohli unfollows Sourav Ganguly : ತಾರಕಕ್ಕೇರಿದ ಕಿಂಗ್ Vs ದಾದಾ ಫೈಟ್, ಗಂಗೂಲಿಯನ್ನು ಇನ್‌ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಕೊಹ್ಲಿ

ಧೋನಿ ಕೂಡ ಉತ್ತಮ ಫಾರ್ಮ್’ನಲ್ಲಿದ್ದು, ಎದುರಿಸಿರುವ 27 ಎಸೆತಗಳಲ್ಲಿ ಆರು ಸಿಕ್ಸರ್’ಗಳ ಸಹಿತ 58 ರನ್ ಗಳಿಸಿ ಆರ್ಭಟಿಸಿದ್ದಾರೆ. ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಮೂರು ಪಂದ್ಯಗಳನ್ನಾಡಿದ್ದು, 2 ಗೆಲುವು ಹಾಗೂ ಒಂದು ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿರುವ ಆರ್’ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲು ಕಂಡಿತ್ತು.

Dhoni Vs Kohli : Today Thala Vs King face off, do you know how is the legendary batting durbar in Chinnasnam?

Comments are closed.