Dinesh Karthik retirement : ಕ್ರಿಕೆಟ್‌ ವೃತ್ತಿ ಬದುಕಿಗೆ ದಿನೇಶ್‌ ಕಾರ್ತಿಕ್‌ ನಿವೃತ್ತಿ ?

ಬೆಂಗಳೂರು: Dinesh Karthik retirement : ಟೀಮ್ ಇಂಡಿಯಾದ ಕಂಬ್ಯಾಕ್ ಕಿಂಗ್ ದಿನೇಶ್ ಕಾರ್ತಿಕ್ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಫಿನಿಷರ್ ರೋಲ್ ನಿಭಾಯಿಸಲು ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್ ನಂತರ ಡಿಕೆ ಸಾಹೇಬ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ ಕೂಡ ಫಿನಿಷ್ ಆಗುವ ಸಾಧ್ಯತೆಗಳಿವೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ 38 ವರ್ಷದ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ವಿಶ್ವಕಪ್ ಗೆದ್ದುಕೊಟ್ಟು ಅರ್ಥಪೂರ್ಥ ವಿದಾಯ ಹೇಳಲು ಸಜ್ಜಾಗಿರುವ ಡಿಕೆ, ಈಗಾಗಲೇ ವಿಶ್ವಕಪ್’ನಲ್ಲಿ ಆಡಲು ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ತೆರಳಿದ್ದಾರೆ.

2004ರಲ್ಲಿ ಭಾರತ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ದಿನೇಶ್ ಕಾರ್ತಿಕ್, 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದರು. ಆದರೆ ಟೀಮ್ ಇಂಡಿಯಾದಲ್ಲಿ ಧೋನಿ ಅಬ್ಬರದ ಮಧ್ಯೆ ಕಳೆದು ಹೋಗಿದ್ದ ಡಿಕೆ, 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ನಂತರ ಕ್ರಿಕೆಟ್’ನಿಂದ ದೂರವಾಗಿದ್ದ ದಿನೇಶ್ ಕಾರ್ತಿಕ್, ಕಾಮೆಂಟರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಜೊತೆ ಕಾಮೆಂಟೇಟರ್ ಆಗಿ ಡಿಕೆ ಕಾಣಿಸಿಕೊಂಡಿದ್ದರು.

ಕಾಮೆಂಟೇಟರ್ ಆಗಿದ್ದ ದಿನೇಶ್ ಕಾರ್ತಿಕ್ ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದೇ ರೋಚಕ ಕಥೆ. 2022ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಷನ್ ರೋಲ್’ನಲ್ಲಿ ಅಬ್ಬರಿಸಿ ಅಮೋಘ ಪ್ರದರ್ಶನ ತೋರಿದ್ದ ಡಿಕೆ, ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಇದೀಗ ಟಿ20 ವಿಶ್ವಕಪ್’ನಲ್ಲಿ ಆಡಲು ಸಜ್ಜಾಗಿರುವ ಡಿಕೆ, ಫಿನಿಷರ್ ಜವಾಬ್ದಾರಿ ಹೊತ್ತಿದ್ದಾರೆ. ಭಾರತ ಪರ ಇದುವರೆಗೆ 56 ಟಿ20 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 146.40 ಸ್ಟ್ರೈಕ್’ರೇಟ್’ನಲ್ಲಿ 672 ರನ್ ಕಲೆ ಹಾಕಿದ್ದಾರೆ. ಭಾರತ ಪರ 26 ಟೆಸ್ಟ್ ಹಾಗೂ 94 ಏಕದಿನ ಪಂದ್ಯಗಳನ್ನೂ ಆಡಿರುವ ಡಿಕೆ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದು ಶತಕ ಹಾಗೂ 17 ಅರ್ಧಶತಕಗಳ ನೆರವಿನಿಂದ ಒಟ್ಟು 3449 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುವ ಯೋಚನೆಯಲ್ಲಿರುವ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ನಂತರ ಐಪಿಎಲ್ ಟೂರ್ನಿಗಳಲ್ಲಷ್ಟೇ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Deepak Chahar Injured: ವಿಶ್ವಕಪ್ ಹೊಸ್ತಿಲಲ್ಲಿ ಭಾರತಕ್ಕೆ ಮತ್ತೊಂದು ಆಘಾತ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೀಪಕ್ ಚಹರ್ ಔಟ್

ಇದನ್ನೂ ಓದಿ : David Miller daughter : ಕ್ಯಾನ್ಸರ್’ಗೆ ಬಲಿಯಾದ ಡೇವಿಡ್ ಮಿಲ್ಲರ್ ಪುತ್ರಿ, ಭಾವನಾತ್ಮಕ ಸಂದೇಶ ಹಂಚಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

Dinesh Karthik retirement plan for cricket After ICC t20 World Cup 2022

Comments are closed.