World’s richest T20 league : ಇಲ್ಲಿ 13 ಕೋಟಿ, ಅಲ್ಲಿ 82 ಲಕ್ಷ, ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League – IPL) ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ (World’s richest T20 league). ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL), ಪಾಕಿಸ್ತಾನದ ಪಾಕಿಸ್ತಾನ ಸೂಪರ್ ಲೀಗ್ (PSL), ದಕ್ಷಿಣ ಆಫ್ರಿಕಾ ಟಿ20 ಲೀಗ್ (SAT20), ವೆಸ್ಟ್ ಇಂಡೀಸ್’ನ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL), ಬಾಂಗ್ಲಾದೇಶ ಬಾಂಗ್ಲಾ ಪ್ರೀಮಿಯರ್ ಲೀಗ್ (BPL), ಶ್ರೀಲಂಕಾದ ಲಂಕಾ ಪ್ರೀಮಿಯರ್ ಲೀಗ್ (LPL). ಹೀಗೆ ಜಗತ್ತಿನಲ್ಲಿ ಹಲವಾರು ಟಿ20 ಲೀಗ್’ಗಳು ನಡೆಯುತ್ತವೆ. ಆದರೆ ದುಡ್ಡಿನ ವಿಚಾರಕ್ಕೆ ಬಂದರೆ ಯಾವ ಲೀಗ್ ಕೂಡ ನಮ್ಮ ಐಪಿಎಲ್’ಗೆ ಸಾಟಿಯಿಲ್ಲ.
ಐಪಿಎಲ್’ನಲ್ಲಿ ಆಡುತ್ತಿರುವ ಕೆಲ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್’ನಲ್ಲೂ ಆಡುತ್ತಾರೆ. ಆದರೆ ಐಪಿಎಲ್’ನಲ್ಲಿ ಕೋಟಿಗಳ ಲೆಕ್ಕದಲ್ಲಿ ದುಡ್ಡು ಜೇಬಿಗಿಳಿಸುವ ಈ ವಿದೇಶಿ ಆಟಗಾರರಿಗೆ PSLನಲ್ಲಿ ಸಿಗುವ ದುಡ್ಡು ಜುಜುಬಿ ಲಕ್ಷಗಳ ಲೆಕ್ಕದಲ್ಲಿ. ಉದಾಹರಣೆಗೆ ಐಪಿಎಲ್’ನಲ್ಲಿ 13.25 ಕೋಟಿ ಮೊತ್ತಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿರುವ ಇಂಗ್ಲೆಂಡ್’ನ ಯುವ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ (Harry Brook) ಪಾಕಿಸ್ತಾನ ಪ್ರೀಮಿಯರ್ ಲೀಗ್’ನಲ್ಲಿ ಪಡೆಯುವ ಮೊತ್ತ ಕೇವಲ 82.30 ಲಕ್ಷ ಅಷ್ಟೇ. IPL ಮತ್ತು ಮತ್ತು PSLನಲ್ಲಿ ಕೆಲ ವಿದೇಶಿ ಆಟಗಾರರು ಪಡೆಯುವ ಮೊತ್ತದ ವಿವರ ಇಲ್ಲಿದೆ.
ಹ್ಯಾರಿ ಬ್ರೂಕ್ (ಇಂಗ್ಲೆಂಡ್)
IPL ಸಂಬಳ PSL ಸಂಬಳ
13.25 ಕೋಟಿ 82.30 ಲಕ್ಷ
ರಿಲೀ ರೋಸೊ (ದಕ್ಷಿಣ ಆಫ್ರಿಕಾ)
IPL ಸಂಬಳ PSL ಸಂಬಳ
4.60 ಕೋಟಿ 1.4 ಕೋಟಿ
ವಿಲ್ ಜೇಕ್ಸ್ (ಇಂಗ್ಲೆಂಡ್)
IPL ಸಂಬಳ PSL ಸಂಬಳ
3.20 ಕೋಟಿ 41.15 ಲಕ್ಷ
ಫಿಲ್ ಸಾಲ್ಟ್ (ಇಂಗ್ಲೆಂಡ್)
IPL ಸಂಬಳ PSL ಸಂಬಳ
2 ಕೋಟಿ 41.33 ಲಕ್ಷ
ಡೇವಿಡ್ ವೀಸ್ (ನಮೀಬಿಯಾ)
IPL ಸಂಬಳ PSL ಸಂಬಳ
1 ಕೋಟಿ 70.21 ಲಕ್ಷ
ಇದನ್ನೂ ಓದಿ : ICC Women’s T20 World Cup : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತ ತಂಡ ಪ್ರಕಟ, ಟೀಮ್ ಇಂಡಿಯಾದಲ್ಲಿ ಏಕೈಕ ಕನ್ನಡತಿ
ಇದನ್ನೂ ಓದಿ : Team India fixtures 2023: ಮುಂದಿನ ವರ್ಷ ಟೀಮ್ ಇಂಡಿಯಾ ಆಡಲಿರುವ ಸರಣಿಗಳು ಎಷ್ಟು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ
ಇದನ್ನೂ ಓದಿ : Manish Pandey double century: ನಾಯಕ್ವತರಿಂದ ಕೆಳಗಿಳಿದ ನಂತರ ಪವರ್ ತೋರಿಸಿದ ಪಾಂಡೆ, ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ ದ್ವಿಶತಕ
ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆದಿದ್ದ ಐಪಿಎಲ್ 2023 ಆಟಗಾರರ ಹರಾಜಿನಲ್ಲಿ 10 ಫ್ರಾಂಚೈಸಿಗಳು 80 ಆಟಗಾರರನ್ನು ಒಟ್ಟು 167 ಕೋಟಿ ಮೊತ್ತಕ್ಕೆ ಖರೀದಿಸಿದ್ದವು. ಇಂಗ್ಲೆಂಡ್’ನ ಯುವ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಐಪಿಎಲ್ ಇತಿಹಾಸದಲ್ಲೇ ದಾಖಲೆಯ 18.50 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲೇ 2ನೇ ಅತೀ ಹೆಚ್ಚು 17.50 ಕೋಟಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್’ಗೆ ಸೇಲ್ ಆಗಿದ್ದರು. ಇಂಗ್ಲೆಂಡ್’ನ ಮತ್ತೊಬ್ಬ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 16.25 ಕೋಟಿ ಮೊತ್ತಕ್ಕೆ ಖರೀದಿಸಿತ್ತು.
World’s richest T20 league : IPL Vs PSL: 13 Crores Here, 82 Lakhs There, Pakistan Super League Doesn’t Matter Before IPL
Comments are closed.