Gautam Gambhir : ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭೀರ್‌ ನೇಮಕ : ಜಯ್‌ ಶಾ

Gautam Gambhir Head Coach Indian Cricket team : ಗ್ರೇಟ್‌ ವಾಲ್‌ ರಾಹುಲ್‌ ದ್ರಾವಿಡ್‌ ಅವರ ಉತ್ತರಾಧಿಕಾರಿ, ರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭೀರ್‌ ಅವರು ನೇಮಕ ಗೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಘೋಷಣೆ ಮಾಡಿದ್ದಾರೆ.

Gautam Gambhir Head Coach Indian Cricket team : ಗ್ರೇಟ್‌ ವಾಲ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರ ಉತ್ತರಾಧಿಕಾರಿ, ಭಾರತ  ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭೀರ್‌ ಅವರು ನೇಮಕ ಗೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಘೋಷಣೆ ಮಾಡಿದ್ದಾರೆ. ಶ್ರೀಲಂಕಾ ಪ್ರವಾಸದ ಮೂಲಕ ಗೌತಮ್‌ ಗಂಭೀರ್‌ ಅವರು ಮುಖ್ಯ ಕೋಚ್‌ ಆಗಿ  ಕಾರ್ಯನಿರ್ವಹಿಸಲಿದ್ದಾರೆ.

Gautam Gambhir Appointed Indian Cricket team Head Coach, Replace Rahul Dravid
Image Credit to Original Source

ಭಾರತ ಕ್ರಿಕೆಟ್‌ ತಂಡ T20 ವಿಶ್ವಕಪ್ 2024 ಗೆಲುವು ಸಾಧಿಸಿದ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ ಅವರು ಮುಖ್ಯ ಕೋಚ್‌ ಹುದ್ದೆಯನ್ನು ತ್ಯೆಜಿಸಿದ್ದರು. ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್‌ ಲಕ್ಷ್ಮಣ್‌ ಅವರು ಭಾರತ ತಂಡದ ಕೋಚ್‌ ಆಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದ್ರೀಗ ಗೌತಮ್‌ ಗಂಭೀರ್‌ ಅವರನ್ನು ಬಿಸಿಸಿಐ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಿದೆ.

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಷ್‌ ಆಗಿ ಗೌತಮ್‌ ಗಂಭೀರ್‌ ಅವರನ್ನು ಸ್ವಾಗತಿಸಲು ನಾನು ಅಪಾರ ಸಂತೋಷ ಹೊಂದಿದ್ದೇನೆ. ಆಧುನಿಕ ಕ್ರಿಕೆಟ್‌ ವಿಕಸನಗೊಂಡಿದೆ. ಗೌತಮ್‌ ಗಂಭೀರ್‌ ಅವರು ತಮ್ಮ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಹಲವು ಪಾತ್ರವನ್ನು ನಿರ್ವಹಿಸಿದ್ದಾರೆ. ಆಟಗಾರನಾಗಿ, ಕೋಚ್‌ ಆಗಿ ಸಕ್ಸಸ್‌ ಕಂಡಿದ್ದಾರೆ. ಅವರನ್ನು ನಾನು ಹತ್ತಿರದಿಂದ ನೋಡಿದ್ದು, ಅವರು ಭಾರತ ತಂಡವನ್ನು ಮುನ್ನೆಡೆಸಲು ಸೂಕ್ತ ವ್ಯಕ್ತಿ ಎಂದಿದ್ದಾರೆ.

ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?

ಗೌತಮ್‌ ಗಂಭೀರ್‌ ಅವರು ತಮ್ಮಲ್ಲಿನ ಅಪಾರವಾದ ಅನುಭವದ ಮೂಲಕ ಕೋಚ್‌ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಹೊಸ ಕೋಚ್‌ ಅಗಿರುವ ಗೌತಮ್‌ ಗಂಭೀರ್‌ ಅವರನ್ನು ಬಿಸಿಸಿಐ ಬೆಂಬಲಿಸಲಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಜಯ್‌ ಶಾ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಜಯ್‌ ಶಾ ಅವರು ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆ ತೊರೆದಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದರು.

Gautam Gambhir Appointed Indian Cricket team Head Coach, Replace Rahul Dravid
Image Credit to Original Source

ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದ ಭೀಮಾರ್ಜುನರು ಇನ್ನೆಂದೂ ಟಿ20ಯಲ್ಲಿ ಜೊತೆಯಾಗಿ ಆಡಲಾರರು..!

ಭಾರತ ಕ್ರಿಕೆಟ್‌ ತಂಡ ಕೋಚ್‌ ಆಗಿ ನೇಮಕಗೊಂಡ ನಂತರದಲ್ಲಿ ರಾಹುಲ್‌ ದ್ರಾವಿಡ್‌ ಅದ್ಬುತ ತಂಡವನ್ನು ಕಟ್ಟಿದ್ದರು. ಟೆಸ್ಟ್‌, ಏಕದಿನ ಹಾಗೂ ಟಿ೨೦ ಕ್ರಿಕೆಟ್‌ನಲ್ಲಿ ಭಾರತ ಅಗ್ರಸ್ಥಾನಕ್ಕೆ ಏರುವಲ್ಲಿ ರಾಹುಲ್‌ ಅವರ ಮಾರ್ಗದರ್ಶನ ಹೆಚ್ಚು ಕೆಲಸ ಮಾಡಿತ್ತು. ಅಷ್ಟೇ ಅಲ್ಲದೇ ಭಾರತ ಕ್ರಿಕೆಟ್‌ ತಂಡ ಈ ಬಾರಿಯ ವಿಶ್ವಕಪ್‌ ಗೆಲುವಿನಲ್ಲಿಯೂ ರಾಹುಲ್‌ ದ್ರಾವಿಡ್‌ ಅವರ ಕೈಚಳವಿದೆ.

ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?

ಗೌತಮ್‌ ಗಂಭೀರ್‌ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿ ತಂಡವನ್ನು ಐಪಿಎಲ್‌ನಲ್ಲಿ ಮುನ್ನೆಡೆಸಿದ್ದರು. ಕಳೆದ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಮೆಂಟರ್‌ ಆಗಿ ಐಪಿಎಲ್‌ನಲ್ಲಿ ಚಾಂಪಿಯನ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗೌತಮ್‌ ಗಂಭೀರ್‌ ಅವರ ಗೆಲುವಿನ ಅಭಿಯಾನ ಭಾರತ ತಂಡದಲ್ಲಿಯೂ ಮುಂದುವರಿಯಲಿ ಎಂದು ಎಂದು ಹಾರೈಸುತ್ತಿದ್ದಾರೆ.

Gautam Gambhir Appointed Indian Cricket team Head Coach, Replace Rahul Dravid

Comments are closed.