Virat Kohli 27,000 runs: 27 ಸಾವಿರ ರನ್’ಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್’ನಲ್ಲೇ ದಾಖಲೆ ಬರೆಯಲಿದ್ದಾನೆ ಕಿಂಗ್ !

ICC t20 world cup 2024 Virat Kohli : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತ್ಯಂತ ವೇಗವಾಗಿ 27 ಸಾವಿರ ರನ್ ಪೂರ್ತಿಗೊಳಿಸಲು ವಿರಾಟ್ ಕೊಹ್ಲಿ (Virat Kohli)  ಅವರಿಗೆ ಕೇವಲ 267 ರನ್’ಗಳ ಅವಶ್ಯಕತೆಯಿದೆ.

ICC t20 world cup 2024 Virat Kohli : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಅಸಾಮಾನ್ಯ ದಾಖಲೆ ಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತ್ಯಂತ ವೇಗವಾಗಿ 27 ಸಾವಿರ ರನ್ ಪೂರ್ತಿಗೊಳಿಸಲು ವಿರಾಟ್ ಕೊಹ್ಲಿ (Virat Kohli)  ಅವರಿಗೆ ಕೇವಲ 267 ರನ್’ಗಳ ಅವಶ್ಯಕತೆಯಿದೆ.

Virat Kohli
Image Credit to Original Source

27,00 ರನ್’ಗಳ ಗಡಿಯನ್ನು ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲೇ ತಲುಪುವ ಸಾಧ್ಯತೆಯಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಸಹಿತ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 522 ಪಂದ್ಯಗಳನ್ನಾಡಿದ್ದು 80 ಶತಕ ಹಾಗೂ 139 ಅರ್ಧಶತಗಳ ಸಹಿತ 26,733 ರನ್ ಕಲೆ ಹಾಕಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ಸಾಧನೆ
ಪಂದ್ಯ: 113
ರನ್: 8848
ಸರಾಸರಿ: 49.15
ಬೆಸ್ಟ್: 254*
100/50: 29/30

ವಿರಾಟ್ ಕೊಹ್ಲಿ ಏಕದಿನ ಸಾಧನೆ
ಪಂದ್ಯ: 292
ರನ್: 13848
ಸರಾಸರಿ: 58.67
ಬೆಸ್ಟ್: 183
100/50: 50/72

ವಿರಾಟ್ ಕೊಹ್ಲಿ ಟಿ20 ಸಾಧನೆ
ಪಂದ್ಯ: 117
ರನ್: 4037
ಸರಾಸರಿ: 51.75
ಬೆಸ್ಟ್: 122*
100/50: 01/37

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 522, ರನ್: 26,733, 100/50: 80/139

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ವಿರಾಟ್ ಕೊಹ್ಲಿ ಗುರುವಾರ ಮುಂಬೈನಿಂದ ನ್ಯೂ ಯಾರ್ಕ್’ಗೆ ಪ್ರಯಾಣ ಬೆಳೆಸಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಸೋಮವಾರವೇ ನ್ಯೂ ಯಾರ್ಕ್ ತಲುಪಿದ್ದರೂ, ವೈಯಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ಮುಂಬೈನಲ್ಲೇ ಉಳಿದುಕೊಂಡಿದ್ದರು.

Virat Kohli and Indian Cricket Team
Image Credit to Original Source

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜೂನ್ 2ರಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ : Shubman Gill Marriage: ಲವ್ವಲ್ಲಿ ಬಿದ್ದಿದ್ದಾರಾ ಟೀಮ್ ಇಂಡಿಯಾ ಪ್ರಿನ್ಸ್? ಈ ಬಾಲಿವುಡ್ ಚೆಲುವೆಯನ್ನು ಮದುವೆಯಾಗಲಿದ್ದಾರಾ ಶುಭಮನ್ ಗಿಲ್?

ಐಸಿಸಿ ಟಿ20 ವಿಶ್ವಕಪ್ 2024: ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ (ICC Men’s T20 World Cup 2024)
ಜೂನ್ 05: ಭಾರತ Vs ಐರ್ಲೆಂಡ್ (ನ್ಯೂಯಾರ್ಕ್, ರಾತ್ರಿ 7.30ಕ್ಕೆ)
ಜೂನ್ 09: ಭಾರತ Vs ಪಾಕಿಸ್ತಾನ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 12: ಭಾರತ Vs ಅಮೆರಿಕ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 15: ಭಾರತ Vs ಕೆನಡಾ (ಲಾಡರ್’ಹಿಲ್, ರಾತ್ರಿ 8ಕ್ಕೆ)

ಇದನ್ನೂ ಓದಿ : Kohli Vs Rayudu: ವಿರಾಟ್ ಕೊಹ್ಲಿ ಮೇಲೆ ಅಂಬಾಟಿ ರಾಯುಡುಗೇಕೆ ಈ ಪರಿ ಕೋಪ ? ಇಲ್ಲಿದೆ ಅಸಲಿ ಸತ್ಯ !

ಐಸಿಸಿ ಟಿ20 ವಿಶ್ವಕಪ್-2024 ಟೂರ್ನಿಯಲ್ಲಿ ಆಡಲಿರುವ ಭಾರತ ತಂಡ:
1. ರೋಹಿತ್ ಶರ್ಮಾ (ನಾಯಕ)
2. ಯಶಸ್ವಿ ಜೈಸ್ವಾಲ್
3. ವಿರಾಟ್ ಕೊಹ್ಲಿ
4. ಸೂರ್ಯಕುಮಾರ್ ಯಾದವ್
5. ರಿಷಭ್ ಪಂತ್ (ವಿಕೆಟ್ ಕೀಪರ್)
6. ಹಾರ್ದಿಕ್ ಪಾಂಡ್ಯ
7. ರವೀಂದ್ರ ಜಡೇಜ
8. ಕುಲ್ದೀಪ್ ಯಾದವ್
9. ಜಸ್ಪ್ರೀತ್ ಬುಮ್ರಾ
10. ಮೊಹಮ್ಮದ್ ಸಿರಾಜ್
11. ಅರ್ಷದೀಪ್ ಸಿಂಗ್
12. ಅಕ್ಷರ್ ಪಟೇಲ್
13. ಯುಜ್ವೇಂದ್ರ ಚಹಲ್
14. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
15. ಶಿವಂ ದುಬೆ

ICC t20 world cup 2024 Virat Kohli 27,000 runs

Comments are closed.