T20 World Cup 2024 IND vs AFG : ಸೂಪರ್-8ಲ್ಲಿ ಭಾರತಕ್ಕೆ ನಾಳೆ ಅಫ್ಘಾನಿಸ್ತಾನ ಎದುರಾಳಿ, ಇಲ್ಲಿದೆ ಪಂದ್ಯದ ಕಂಪ್ಲೀಟ್ ಡೀಟೇಲ್ಸ್

ICC T20 World Cup Super -8 India vs Afghanistan Playing X! ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC T20 World Cup 2024) ಸೂಪರ್-8 ಹಂತದ ಪಂದ್ಯಗಳಲ್ಲಿ ಭಾರತ (Indian Cricket Team) ದ ಸವಾಲು ನಾಳೆ ಆರಂಭವಾಗಲಿದೆ.

ICC T20 World Cup Super -8 India vs Afghanistan Playing X! ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC T20 World Cup 2024) ಸೂಪರ್-8 ಹಂತದ ಪಂದ್ಯಗಳಲ್ಲಿ ಭಾರತ (Indian Cricket Team) ದ ಸವಾಲು ನಾಳೆ ಆರಂಭವಾಗಲಿದೆ. ಸೂಪರ್-8 ಹಂತದಲ್ಲಿ ಭಾರತ ತಂಡ ಗ್ರೂಪ್-1ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ಜೊತೆ ಸ್ಥಾನ ಪಡೆದಿದೆ. ಭಾರತದ ಮೊದಲ ಪಂದ್ಯ ನಾಳೆ (ಗುರುವಾರ, ಜೂನ್ 20) ಅಫ್ಘಾನಿಸ್ತಾನ ವಿರುದ್ಧ ನಡೆಯಲಿದ್ದು, ಈ ಪಂದ್ಯಕ್ಕೆ ಬಾರ್ಬೆಡೋಸ್’ನ ಬ್ರಿಡ್ಜ್’ಟೌನ್’ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನ ಆತಿಥ್ಯ ವಹಿಸಲಿದೆ.

ICC T20 World Cup Super -8 India vs Afghanistan Playing X! Pitch Report here are the complete details
Image Credit to Original Source

ಎ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರಲ್ಲಿ ಗೆದ್ದಿದ್ದ ಭಾರತ ಗ್ರೂಪ್’ನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಕೆನಡಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಮತ್ತೊಂದೆಡೆ ಅಫ್ಘಾನಿಸ್ತಾನ ತಂಡ ಗ್ರೂಪ್ ‘ಸಿ’ನಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರನ್ನು ಗೆದ್ದು 2ನೇ ಸ್ಥಾನಿಯಾಗಿ ಸೂಪರ್-8 ಹಂತಕ್ಕೇರಿದೆ.

ಜೂನ್ 22ರಂದು ಆ್ಯಂಟಿಗುವಾದಲ್ಲಿ ನಡೆಯುವ 2ನೇ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ. ಜೂನ್ 24ರಂದು ಸೇಂಟ್ ಲೂಸಿಯಾದಲ್ಲಿ ನಡೆಯುವ 3ನೇ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡದ ಸವಾಲಿಗೆ ಉತ್ತರಿಸಲಿದೆ. ಟೀಮ್ ಇಂಡಿಯಾದ ಪ್ರೀಮಿಯರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದು, ಸೂಪರ್-8ನಲ್ಲಿ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಲೀಗ್ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಕೊಹ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಇದನ್ನೂ ಓದಿ : Lockie Ferguson: 4 ಓವರ್, 4 ಮೇಡನ್; ಟಿ20 ವಿಶ್ವದಾಖಲೆ ದಾಖಲೆ ಬರೆದ RCB ಸ್ಟಾರ್!

T20 World Cup 2024 Super-8: ಭಾರತ Vs ಅಫ್ಘಾನಿಸ್ತಾನ ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ
ಸ್ಥಳ: ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂ, ಬ್ರಿಡ್ಜ್’ಟೌನ್; ಬಾರ್ಬೆಡೋಸ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್

ICC T20 World Cup Super -8 India vs Afghanistan Playing X! Pitch Report here are the complete details
Image Credit to Original Source

ಇದನ್ನೂ ಓದಿ : ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಪಟ್ಟಿ : ಬಾಲಿವುಡ್ ತಾರೆಗಳನ್ನೇ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಶಿವಂ ದುಬೆ
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರೀತ್ ಬುಮ್ರಾ
11. ಮೊಹಮ್ಮದ್ ಸಿರಾಜ್

ಇದನ್ನೂ ಓದಿ : India Women Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ ಆರ್’ಸಿಬಿ ಸ್ಟಾರ್ ಆಶಾ ಶೋಭನ !

ICC T20 World Cup Super -8 India vs Afghanistan Playing X! Pitch Report here are the complete details

Comments are closed.