India vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ

India squad for T20I series : ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup 2024) ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆ ಪ್ರವಾಸಕ್ಕೆ (India tour of Zimbabwe) ತೆರಳಲಿದ್ದು, ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಬೆಂಗಳೂರು: ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ (Indian Cricket team) ವನ್ನು ಪ್ರಕಟಿಸಲಾಗಿದ್ದು, ಯುವ ಬಲಗೈ ಓಪನರ್ ಶುಭಮನ್ ಗಿಲ್ ಅವರಿಗೆ ನಾಯಕ ಪಟ್ಟ ಕಟ್ಟಲಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup 2024) ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆ ಪ್ರವಾಸಕ್ಕೆ (India tour of Zimbabwe) ತೆರಳಲಿದ್ದು, ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

India squad for T20I series against Zimbabwe Shubman Gill Captain
Image Credit to Original Source

ಭಾರತ ಕ್ರಿಕೆಟ್‌ ತಂಡದಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ಜಿಂಬಾಬ್ವೆ ಸರಣಿಗೆ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸೂರ್ಯ ಕುಮಾರ್‌, ಯಾದವ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕೆಎಲ್‌ ರಾಹುಲ್‌, ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ ಸೇರಿದಂತೆ ಹಲವು ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ. ಬಹುತೇಕ ಆಟಗಾರರು ಈಗಾಗಲೇ ವಿಶ್ವಕಪ್‌ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ.

ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದ ಶುಭಮನ್‌ ಗಿಲ್‌ ಅವರಿಗೆ ಭಾರತ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಲಾಗಿದೆ. ಯಶಸ್ವಿ ಜೈಸ್ವಾಲ್‌, ರುತುರಾಜ್‌ ಗಾಯಕ್ವಾಡ್‌, ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌ ಸ್ಥಾನ ಪಡೆದಿದ್ದಾರೆ. ವಿಕೆಟ್‌ ಕೀಪರ್‌ ಆಗಿ ಸಂಜು ಸ್ಯಾಮ್ಸನ್‌ ಹಾಗೂ ಧ್ರುವ್‌ ಜುರೆಲ್‌ ಕಾಣಿಸಿಕೊಂಡಿದ್ದರೆ, ಐಪಿಎಲ್‌ ಹಿರೋ ರಿಯಾನ್‌ ಪರಾಗ್‌, ರವಿ ಬಿಷ್ನೋಯಿ, ಆವೇಶ್‌ ಖಾನ್‌ ಕೂಡ ತಂಡದಲ್ಲಿದ್ದಾರೆ.

ಇದನ್ನೂ ಓದಿ: Afghanistan National Cricket Team : ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ..!

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (India’s squad for T20I series against Zimbabwe):
ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ತುಷಾರ್ ದೇಶಪಾಂಡೆ.

India squad for T20I series against Zimbabwe Shubman Gill Captain
Image Credit to Original Source

ಇದನ್ನೂ ಓದಿ : Afghan Beat Australia: ಆಸ್ಟ್ರೇಲಿಯಾಗೆ ಶಾಕ್ ಕೊಟ್ಟ ಅಫ್ಘಾನಿಸ್ತಾನ, Next ಟಾರ್ಗೆಟ್ ವಿಶ್ವಕಪ್ ಸೆಮಿಫೈನಲ್  

ಭಾರತ Vs ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ (India tour of Zimbabwe 2024)
ಜುಲೈ 06: ಮೊದಲ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 07: ಎರಡನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 10: ಮೂರನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 13: ನಾಲ್ಕನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 14: ಐದನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)

ಇದನ್ನೂ ಓದಿ : India Vs Australia : ಟಿ20 ವಿಶ್ವಕಪ್ – ಆಸ್ಟ್ರೇಲಿಯಾ ವಿರುದ್ದ ಸೇಡು ತೀರಿಸಿಕೊಳ್ಳಲು ಭಾರತ ಕ್ರಿಕೆಟ್‌ ತಂಡಕ್ಕೆ ಇದೇ ಗೋಲ್ಡನ್ ಚಾನ್ಸ್ 

India squad for T20I series against Zimbabwe Shubman Gill Captain

Comments are closed.