India Vs West Indies ODI : ಭಾರತ Vs ವಿಂಡೀಸ್ ಪ್ರಥಮ ಏಕದಿನ: ಕೆನ್ನಿಂಗ್ಟನ್ ಓವಲ್ ಪಿಚ್ ರಿಪೋರ್ಟ್, ಲೈವ್ ಟೆಲಿಕಾಸ್ಟ್, ಪ್ಲೇಯಿಂಗ್ XI ಡೀಟೇಲ್ಸ್

ಬಾರ್ಬೆಡೋಸ್: India Vs West Indies ODI : ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿರುವ ಭಾರತ ಕ್ರಿಕೆಟ್ ತಂಡ, ನಾಳೆ (ಗುರುವಾರ) ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆರಿಬಿಯನ್ನರನ್ನು ಎದುರಿಸಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬಾರ್ಬೆಡೋಸ್’ನ ಬ್ರಿಡ್ಜ್’ಟೌನ್’ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯಲ್ಲಿ ಆಡಿದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್ ಸಹಿತ ಕೆಲ ಆಟಗಾರರು ಏಕದಿನ ಸರಣಿಯಲ್ಲೂ ಆಡಲಿದ್ದು, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಲ್, ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್ ಮತ್ತು ಉಮ್ರಾನ್ ಮಲಿಕ್ ಕೆರಿಬಿಯನ್ ನಾಡಿನಲ್ಲಿ ಟೀಮ್ ಇಂಡಿಯಾ ಕ್ಯಾಂಪ್ ಸೇರಿಕೊಂಡಿದ್ದಾರೆ. ಮತ್ತೊಂದೆಡೆ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಸೋತು, ಪ್ರಧಾನ ಹಂತಕ್ಕೇರಲು ವಿಫಲವಾಗಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಇದು ಪ್ರತಿಷ್ಠೆಯ ಸರಣಿಯಾಗಿದೆ.

ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂಡಿಯಾ Vs ವಿಂಡೀಸ್ ಮುಖಾಮುಖಿ
ಪಂದ್ಯ: 03
ಭಾರತ ಗೆಲುವು: 01
ವಿಂಡೀಸ್ ಗೆಲುವು: 02

 • ಭಾರತ Vs ವೆಸ್ಟ್ ಇಂಡೀಸ್ ಪ್ರಥಮ ಏಕದಿನ
 • ಪಂದ್ಯ ಆರಂಭ: ಸಂಜೆ 7ಕ್ಕೆ (ಭಾರತೀಯ ಕಾಲಮಾನ)
 • ಸ್ಥಳ: ಕೆನ್ನಿಂಗ್ಟನ್ ಓವಲ್ ಮೈದಾನ, ಬ್ರಿಡ್ಜ್”ಟೌನ್; ಬಾರ್ಬೆಡೋಸ್
 • ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್ (DD Sports)
 • ಲೈವ್ ಸ್ಟ್ರೀಮಿಂಗ್: ಫ್ಯಾನ್ ಕೋಡ್ ಮತ್ತು ಜಿಯೋ ಸಿನಿಮಾ (Fancode and JioCinema)

ಇದನ್ನೂ ಓದಿ : India’s International Home Season 2023-24 : ಭಾರತದ ಬ್ಲಕ್ ಬಸ್ಟರ್ ತವರು ವೇಳಾಪಟ್ಟಿ ಪ್ರಕಟ, 2023-24ರಲ್ಲಿ ಟೀಮ್ ಇಂಡಿಯಾ ಮುಂದೆ ಬಿಗ್ ಚಾಲೆಂಜ್

ಇದನ್ನೂ ಓದಿ : Rohit Sharma : ನಾಳೆಯಿಂದ ಇಂಡಿಯಾ-ವಿಂಡೀಸ್ ಏಕದಿನ ಸರಣಿ, 193 ರನ್ ಬಾರಿಸಿದ್ರೆ ರೋ”ಹಿಟ್” ಗ್ರೇಟ್ ಓಪನರ್

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:

 1. ರೋಹಿತ್ ಶರ್ಮಾ (ನಾಯಕ)
 2. ಶುಭಮನ್ ಗಿಲ್
 3. ವಿರಾಟ್ ಕೊಹ್ಲಿ
 4. ಸೂರ್ಯಕುಮಾರ್ ಯಾದವ್
 5. ಇಶಾನ್ ಕಿಶನ್ (ವಿಕೆಟ್ ಕೀಪರ್)
 6. ಹಾರ್ದಿಕ್ ಪಾಂಡ್ಯ
 7. ರವೀಂದ್ರ ಜಡೇಜ
 8. ಶಾರ್ದೂಲ್ ಠಾಕೂರ್
 9. ಯುಜ್ವೇಂದ್ರ ಚಹಲ್
 10. ಮೊಹಮ್ಮದ್ ಸಿರಾಜ್
 11. ಕುಲ್ದೀಪ್ ಯಾದವ್

India Vs West Indies ODI : India Vs West Indies 1st ODI: Kennington Oval Pitch Report, Live Telecast, Playing XI Details

Comments are closed.