India Vs ZimbabweT20: ಯುವ ಭಾರತಕ್ಕೆ ಜಿಂಬಾಬ್ವೆ ಚಾಲೆಂಜ್, ಇಂದು ಮೊದಲ ಪಂದ್ಯ

India Vs ZimbabweT20: ಹರಾರೆ: ವಿಶ್ವ ಚಾಂಪಿಯನ್ ಭಾರತ ಕ್ರಿಕೆಟ್ ತಂಡ (Indian Cricket Team) ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು, ಮೊದಲ ಪಂದ್ಯ ಇಂದು (ಶನಿವಾರ) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.

India Vs ZimbabweT20: ಹರಾರೆ: ವಿಶ್ವ ಚಾಂಪಿಯನ್ ಭಾರತ ಕ್ರಿಕೆಟ್ ತಂಡ (Indian Cricket Team) ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಜಿಂಬಾಬ್ವೆ (India vs Zimbabwe) ತಂಡವನ್ನು ಎದುರಿಸಲಿದ್ದು, ಮೊದಲ ಪಂದ್ಯ ಇಂದು (ಶನಿವಾರ) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡ ಆಟಗಾರರಿಗೆ ವಿಶ್ರಾಂತಿ ನೀಡಲಾಗಿರುವ ಕಾರಣ, ಯುವ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾ, ಜಿಂಬಾಬ್ವೆ ತಂಡವನ್ನು ಎದುರಿಸುತ್ತಿದೆ.

India vs Zimbabwe Series 1st T20 Match Today Playing XI weather Report Complete details
Image Credit to Original Source

ಯಂಗ್ ಇಂಡಿಯಾವನ್ನು ಯುವ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್’ರಂತಹ ಯುವ ಆಟಗಾರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆತಿಥೇಯ ಜಿಂಬಾಬ್ವೆ ತಂಡವನ್ನು ಪಂಜಾಬ್ ಕಿಂಗ್ಸ್ ತಂಡದ ಆಟಗಾರ, ಅನುಭವಿ ಆಲ್ರೌಂಡರ್ ಸಿಕಂದರ್ ರಾಜಾ ಮುನ್ನಡೆಸಲಿದ್ದಾರೆ.

ಭಾರತ Vs ಜಿಂಬಾಬ್ವೆ ಮೊದಲ ಟಿ20 (India vs Zimbabwe) 
ಪಂದ್ಯ ಆರಂಭ: ಸಂಜೆ 4.30ಕ್ಕೆ
ಸ್ಥಳ: ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network)
ಲೈವ್ ಸ್ಟ್ರೀಮಿಂಗ್: ಸೋನಿ ವಿನ್ (SonyLIV app)

ಇದನ್ನೂ ಓದಿ : Rohit Sharma Retirement Plan: ಟಿ20 ವಿಶ್ವ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ನಿವೃತ್ತಿ ಪ್ಲಾನ್ ರೆಡಿ 

ಮೊದಲೆರಡು ಟಿ20 ಪಂದ್ಯಗಳಿಗೆ ಭಾರತ ತಂಡ :
ಶುಭಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ, ಹರ್ಷಿತ್ ರಾಣಾ.

India vs Zimbabwe Series 1st T20 Match Today Playing XI weather Report Complete details
Image Credit to Original Source

ಜಿಂಬಾಬ್ವೆ ತಂಡ:
ಸಿಕಂದರ್ ರಾಜಾ (ನಾಯಕ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್‌ಬೆಲ್ ಜೊನಾಥನ್, ಚಟಾರಾ ಟೆಂಡೈ, ಜೊಂಗ್ವೆ ಲ್ಯೂಕ್, ಕೈಯಾ ಇನೋಸೆಂಟ್, ಮದಂಡೆ ಕ್ಲೈವ್, ಮಾಧೆವೆರೆ ವೆಸ್ಲಿ, ಮರುಮಣಿ ತಡಿವಾನಾಶೆ, ಮಸಕಡ್ಜಾ ವೆಲ್ಲಿಂಗ್‌ಟನ್, ಮಾವುಟಾ ಬ್ರಾಂಡನ್, ಮುಜರಬಾನಿ ಆಶೀರ್ವಾದ, ನ್ಗರ್‌ವಿಯನ್ಸ್ಟ್, ನಕರ್‌ವಿಯನ್ಸ್ , ಲಯನ್ ಮಿಲ್ಟನ್.

ಇದನ್ನೂ ಓದಿ : Rohit Sharma : ವಿಶ್ವಕಪ್ ಗೆದ್ದು ತಂದ ರೋಹಿತ್ ಶರ್ಮಾಗೆ ಮನೆಯಲ್ಲಿ ಅದ್ಧೂರಿ ಸ್ವಾಗತ 

ಭಾರತ Vs ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ (India tour of Zimbabwe 2024)
ಜುಲೈ 06: ಮೊದಲ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 07: ಎರಡನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 10: ಮೂರನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 13: ನಾಲ್ಕನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 14: ಐದನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)

ಇದನ್ನೂ ಓದಿ : Hardik Pandya: ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..! ಹಾರ್ದಿಕ್‌ ಪಾಂಡ್ಯ ಸಾಧನೆಯ ಹಿಂದೆ ಕನ್ನಡಿಗನ ಶ್ರಮ

India vs Zimbabwe Series 1st T20 Match Today Playing XI weather Report Complete details

Comments are closed.