India Vs South Africa: ಶೆಫಾಲಿ ದ್ವಿಶತಕ, ಸ್ಮೃತಿ ಶತಕದಬ್ಬರಕ್ಕೆ ಚೆನ್ನೈನಲ್ಲಿ ಕೊಚ್ಚಿ ಹೋದ ದಕ್ಷಿಣ ಆಫ್ರಿಕಾ  

Shafali Verma Smriti Mandhana : ಚೆನ್ನೈ: ಭಾರತ ಮಹಿಳಾ ಕ್ರಿಕೆಟ್‌ ತಂಡ (Indian Womens Cricket team)  ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡ (South Africa Cricket team)ನಡುವಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ.

Shafali Verma Smriti Mandhana : ಚೆನ್ನೈ: ಭಾರತ ಮಹಿಳಾ ಕ್ರಿಕೆಟ್‌ ತಂಡ (Indian Womens Cricket team)  ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡ (South Africa Cricket team)ನಡುವಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತದ ವನಿತೆಯರು ಧೂಳೆಬ್ಬಿಸಿದ್ದಾರೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ರನ್ ಹೊಳೆಯನ್ನೇ ಹರಿಸಿದೆ.

India w vs South Africa w Shafali Verma Double century, Smriti Irani Century
Image Credit : BCCI

ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ (Shefali Verma) ಬಾರಿಸಿದ ವಿಶ್ವದಾಖಲೆಯ ದ್ವಿಶತಕ ಮತ್ತು ಉಪನಾಯಕಿ ಸ್ಮೃತಿ ಮಂಧನ (Smriti Mandhana) ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ಮೊದಲ ದಿನದಂತ್ಯಕ್ಕೆ 98 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 525 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಇದು ಮಹಿಳಾ ಟೆಸ್ಟ್ ಕ್ರಿಕೆಟ್’ನ ಮೊದಲ ದಿನದಾಟದಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತ.

India w vs South Africa w Shafali Verma Double century, Smriti Irani Century
Image Credit : BCCI

ಈ ಮೂಲಕ 89 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನು ಭಾರತದ ಓಪನರ್’ಗಳಾದ ಶೆಫಾಲಿ ಮತ್ತು ಸ್ಮೃತಿ ಪುಡಿಗಟ್ಟಿದ್ದಾರೆ. 1935ರಲ್ಲಿ ನ್ಯೂಜಿಲೆಂಡ್’ನ ಕ್ರೈಸ್ಟ್ ಚರ್ಚ್’ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನ ದಾಖಲಾಗಿದ್ದ 475 ರನ್’ಗಳ ಮೊತ್ತ ಇದುವರೆಗಿನ ವಿಶ್ವದಾಖಲೆಯಾಗಿತ್ತು.

ಇದನ್ನೂ ಓದಿ : 1983ರ ವಿಶ್ವವಿಕ್ರಮಕ್ಕೆ 42 ವರ್ಷ, ಎರಡೇ ದಿನಗಳಲ್ಲಿ ಮತ್ತೆ ವಿಶ್ವಕಪ್ ಗೆಲ್ಲುತ್ತಾ ಭಾರತ ?

India w vs South Africa w Shafali Verma Double century, Smriti Irani Century
Image Credit : BCCI

https://x.com/ICC/status/1806641708811129086

ಶೆಫಾಲಿ ದ್ವಿಶತಕದ ವಿಶ್ವದಾಖಲೆ:
20 ವರ್ಷದ ಬಲಗೈ ಓಪನರ್ ಶೆಫಾಲಿ ವರ್ಮಾ ಮಹಿಳಾ ಟೆಸ್ಟ್ ಕ್ರಿಕೆಟ್’ನಲ್ಲಿ ಅತ್ಯಂತ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ದಾಳಿಯನ್ನು ಪುಡಿಗಟ್ಟಿದ ಶೆಫಾಲಿ ಕೇವಲ 194 ಎಸೆತಗಳಲ್ಲಿ ದ್ವಿಶತಕ ಪೂರ್ತಿಗೊಳಿಸಿ, ಆಸ್ಟ್ರೇಲಿಯಾದ ಅನಾಬೆಲ್ ಸದರ್ಲೆಂಡ್ ಹೆಸರಲ್ಲಿದ್ದ ವಿಶ್ವದಾಖಲೆಯನ್ನು (248 ಎಸೆತಗಳಲ್ಲಿ ದ್ವಿಶತಕ) ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಚೆಪಾಕ್ ಮೈದಾನದಲ್ಲಿ ಅಕ್ಷರಶಃ ಅಬ್ಬರಿಸಿದ ಶೆಫಾಲಿ 197 ಎಸೆತಗಳಲ್ಲಿ 23 ಬೌಂಡರಿ ಹಾಗೂ 8 ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ 205 ರನ್ ಗಳಿಸಿ ಔಟಾದರು.

ಇದನ್ನೂ ಓದಿ : Last T20I For Virat & Rohit: ರೋಹಿತ್, ಕೊಹ್ಲಿಗೆ ನಾಳೆಯೇ ಕೊನೆ ಟಿ20 ಮ್ಯಾಚ್ 

https://x.com/BCCIWomen/status/1806629978303316392

India w vs South Africa w Shafali Verma Double century, Smriti Irani Century
Image Credit : BCCI

ಸ್ಮೃತಿ ಮಂಧನ ಮತ್ತೊಂದು ಶತಕ:
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಶತಕ ಹಾಗೂ 3ನೇ ಪಂದ್ಯದಲ್ಲಿ 90 ರನ್ ಗಳಿಸಿ ಔಟಾಗಿದ್ದ ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧನ, ತಮ್ಮ ಅಮೋಘ ಫಾರ್ಮ್ ಅನ್ನು ಟೆಸ್ಟ್ ಪಂದ್ಯದಲ್ಲೂ ಮುಂದುವರಿಸಿದರು.
ಶೆಫಾಲಿ ವರ್ಮಾ ಜೊತೆ ಮೊದಲ ವಿಕೆಟ್’ಗೆ 52 ಓವರ್’ಗಳಲ್ಲಿ ದಾಖಲೆಯ 292 ರನ್’ಗಳ ಜೊತೆಯಾಟವಾಡಿದ ಸ್ಮೃತಿ ಟೆಸ್ಟ್ ವೃತ್ತಿಜೀವನದಲ್ಲಿ 2ನೇ ಶತಕ ಸಿಡಿಸಿದರು. ಒಟ್ಟು 161 ಎಸೆತಗಳನ್ನೆದುರಿಸಿದ ಎಡಗೈ ಬ್ಯಾಟರ್ ಮಂಧನ 27 ಆಕರ್ಷಕ ಬೌಂಡರಿಗಳು ಹಾಗೂ ಒಂದು ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರು.

ಇದನ್ನೂ ಓದಿ : Women’s Test: ಹರಿಣ ಬೇಟೆಗೆ ರೆಡಿಯಾದ ಭಾರತದ ವನಿತೆಯರು, ಮಿಂಚುತ್ತಾಳಾ ಮೈಸೂರು ಹುಡುಗಿ ?

https://x.com/BCCIWomen/status/1806594097920291163

India w vs South Africa w Shafali Verma Double century, Smriti Mandhana Century

Comments are closed.