India victory parade: ಮುಂಬೈನಲ್ಲಿ ಇಂದು ನಡೆಯಲಿದೆ ವಿಶ್ವಕಪ್‌ ಗೆದ್ದ ವಿಶ್ವ ಚಾಂಪಿಯನ್‌ ಭಾರತ ಕ್ರಿಕೆಟ್‌ ತಂಡದ ಭವ್ಯ ಮೆರವಣಿಗೆ 

ಮುಂಬೈ: ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡ (t20 world champion India) ನಾಲ್ಕು ದಿನಗಳ ನಂತರ ತವರಿಗೆ ಮರಳಿದೆ. ಗುರುವಾರ ಮುಂಜಾನೆ ಬಾರ್ಬೆಡೋಸ್’ನಿಂದ ತವರಿಗೆ ಮರಳಿರುವ ಟೀಮ್ ಇಂಡಿಯಾ ಆಟಗಾರರಿಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.

India Win t20 World cup 2024 A grand parade of the World Cup winning Indian cricket team will be held in Mumbai today
Image Credit to Original Source

ಕೆರಿಬಿಯನ್ ನಾಡಿನಲ್ಲಿ ದೆಹಲಿಗೆ ಬಂದಿಳಿದಿರುವ ವಿಶ್ವವಿಜೇತ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಇನ್ನು ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ಇಡೀ ತಂಡವನ್ನು ಪ್ರಧಾನಿ ಮೋದಿ ಅಭಿನಂದಿಸಲಿದ್ದಾರೆ.

ನಂತರ ವಿಶ್ವಚಾಂಪಿಯನ್ನರು ಭಾರತೀಯ ಕ್ರಿಕೆಟ್’ನ ತವರು ಮನೆ ಮುಂಬೈಗೆ ಪ್ರಯಾಣಿಸಲಿದ್ದು, ಸಂಜೆ 5 ಗಂಟೆಯಂದ ಭವ್ಯ ಮೆರವಣಿಗೆ ನಡೆಯಲಿದೆ. ಮುಂಬೈನ ಮರೀನ್ ಡ್ರೈವ್’ನಿಂದ ಹೊರಡಲಿರುವ ಮೆರವಣಿಗೆಯು ವಾಂಖೆಡೆ ಕ್ರೀಡಾಂಗಣದವರೆಗೆ ಸಾಗಲಿದೆ. ಕುರಿತು ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ (Team India captain Rohit Sharma) ತಮ್ಮ ಎಕ್ಸ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ರಾಹುಲ್ ದ್ರಾವಿಡ್ ಅದೃಷ್ಟವನ್ನೇ ಬದಲಿಸಿತು ರೋಹಿತ್ ಮಾಡಿದ ಅದೊಂದು ಫೋನ್ ಕಾಲ್ 

“ಭಾರತೀಯರೇ, ನಾವು ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಸಂಭ್ರಮಿಸಲು ಬಯಸುತ್ತೇವೆ. ಮರೀನ್ ಡ್ರೈವ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ ಐದು ಗಂಟೆಯಿಂದ ವಿಕ್ಟರಿ ಪರೇಡ್ ಮೂಲಕ ಸಂಭ್ರಮಿಸೋಣ” ಎಂದು ಎಕ್ಸ್ ಖಾತೆಯಲ್ಲಿ ರೋಹಿತ್ ಬರೆದುಕೊಂಡಿದ್ದಾರೆ.

India Win t20 World cup 2024 A grand parade of the World Cup winning Indian cricket team will be held in Mumbai today
Image Credit to Original Source

https://x.com/ImRo45/status/1808465514311852222

ಬಾರ್ಬೆಡೋಸ್’ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್’ಗಳಿಂದ ರೋಚಕವಾಗಿ ಸೋಲಿಸಿತ್ತು. ಈ ಮೂಲಕ ಸುದೀರ್ಘ 17 ವರ್ಷಗಳ ನಂತರ ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಬಾರ್ಬೆಡೋಸ್’ನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಚಂಡಮಾರುತ ಬೀಸುತ್ತಿದ್ದ ಕಾರಣ, ಭಾರತ ತಂಡ ಹೋಟೆಲ್’ನಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ : Virat Kohli: ವೀಡಿಯೊ ಕಾಲ್ ಮೂಲಕ ಪತ್ನಿ ಅನುಷ್ಕಾ ಶರ್ಮಾಗೆ ಚಂಡಮಾರುತ ಲೈವ್ ದೃಶ್ಯ ತೋರಿಸಿದ ವಿರಾಟ್ ಕೊಹ್ಲಿ

https://x.com/BCCI/status/1808666655045587254

ಭಾರತ ಕ್ರಿಕೆಟ್‌ ತಂಡದ ಎಲ್ಲಾ ಆಟಗಾರರು ಮತ್ತು ತಂಡದ ಸಹಾಯಕ ಸಿಬ್ಬಂದಿ ಬಾರ್ಬೆಡೋಸ್’ನ ಹೋಟೆಲ್’ನಲ್ಲಿ ಗೃಹಬಂಧನದಲ್ಲಿದ್ದರು. ಚಂಡಮಾರುತದ ಅಬ್ಬರ ಕಡಿಮೆಯಾಗುತ್ತಿದ್ದಂತೆ ವಿಶೇಷ ವಿಮಾನದ ಮೂಲಕ ಭಾರತ ತಂಡದ ಆಟಗಾರರು ಬುಧವಾರ ಬಾರ್ಬೆಡೋಸ್’ನಿಂದ ಹೊರಟು, ಗುರುವಾರ ಬೆಳಗ್ಗೆ ತವರಿಗೆ ಬಂದಿಳಿದಿದ್ದಾರೆ.

ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ..!

India Win t20 World cup 2024 A grand parade of the World Cup winning Indian cricket team will be held in Mumbai today

Comments are closed.