Virat Kohli : ವಿರಾಟ್ ಕೊಹ್ಲಿ ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ..!

Virat Kohli Interesting Story : ಬಾರ್ಬೆಡೋಸ್: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಐಕಾನ್ ಪ್ಲೇಯರ್. ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್’ನ ಬ್ರ್ಯಾಂಡ್ ಅಂಬಾಸಿಡರ್. ಕೊಹ್ಲಿ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕ್ರೀಡಾ ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳೇ ಕೊಹ್ಲಿ ಅವರ ಆಟಕ್ಕೆ, ಅವರ ವ್ಯಕ್ತಿತ್ವಕ್ಕೆ ಫಿದಾ ಆಗಿ ಹೋಗಿದ್ದಾರೆ.

Indian Cricket Team Player Virat Kohli Interesting Story
Image Credit to Original Source

ಇನ್ನು ಕ್ರಿಕೆಟ್ ಮೈದಾನದ ಕಿಂಗ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲೂ ಕಿಂಗ್. ಇತ್ತೀಚೆಗಷ್ಟೇ ಇನ್’ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಹಾಕಿದ್ದ ಪೋಸ್ಟ್ ಒಂದು 20 ಮಿಲಿಯನ್ ಲೈಕ್ಸ್ ಪಡೆದಿತ್ತು. ಸಮಯ ಸಿಕ್ಕಾಗ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುವಲ್ಲಿ ವಿರಾಟ್ ಕೊಹ್ಲಿ ಹಿಂದೆ ಬಿದ್ದವರಲ್ಲ. ಇದಕ್ಕೆ ಮತ್ತೊಂದು ಸಾಕ್ಷಿ ಕೆರಿಬಿಯನ್ ನಾಡಿನಲ್ಲಿ ಸಿಕ್ಕಿದೆ.

ಇದನ್ನೂ ಓದಿ : ರಾಹುಲ್ ದ್ರಾವಿಡ್ ಅದೃಷ್ಟವನ್ನೇ ಬದಲಿಸಿತು ರೋಹಿತ್ ಮಾಡಿದ ಅದೊಂದು ಫೋನ್ ಕಾಲ್ 

ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ನಂತರ ಬಾರ್ಬೆಡೋಸ್’ನಲ್ಲಿ ಬೀಸುತ್ತಿರುವ ಚಂಡಮಾರುತದ ಕಾರಣ ತವರಿಗೆ ಮರಳಲಾಗದೆ ಕೆರಿಬಿಯನ್ ನಾಡಿನಲ್ಲೇ ಸಿಲುಕಿಕೊಂಡಿದೆ. ಚಂಡಮಾರುತದ ತೀವ್ರತೆ ಸ್ವಲ್ಪ ಕಡಿಮೆಯಾದಾಗ ಹೋಟೆಲ್’ನಿಂದ ಹೊರ ಬಂದ ವಿರಾಟ್ ಕೊಹ್ಲಿ ಅವರನ್ನು ಒಂದಷ್ಟು ಮಂದಿ ಮಕ್ಕಳು ಸುತ್ತುವರಿದಿದ್ದಾರೆ. ಎಲ್ಲಾ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿದ ವಿರಾಟ್ ಕೊಹ್ಲಿ, ನಂತರ ಚಿಣ್ಣರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಮಕ್ಕಳ ಖುಷಿಗೆ ಕಾರಣವಾಗಿದ್ದಾರೆ. ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://x.com/matchpoiint/status/1808106675351834858?s=46

ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕೆರಿಬಿಯನ್ ನಾಡು ವೆಸ್ಟ್ ಇಂಡೀಸ್’ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಆರಂಭದಲ್ಲೇ ಮೂರು ವಿಕೆಟ್’ಗಳು ಬಿದ್ದಾಗ ಕ್ರೀಸ್ ಕಚ್ಚಿ ನಿಂತಿದ್ದ ಕೊಹ್ಲಿ 76 ರನ್ ಗಳಿಸಿ ಭಾರತದ ಗೆಲುವಿನಲ್ಲು ನಿರ್ಣಾಯಕ ಪಾತ್ರ ವಹಿಸಿದ್ದರು.

ಇದನ್ನೂ ಓದಿ : Rohit Sharma: 12 ಟಿ20 ಫೈನಲ್, ಒಂದೇ ಸೋಲು, 11 ಕಿರೀಟ.. ರೋಹಿತ್ ಅಪೂರ್ವ ದಾಖಲೆ

Indian Cricket Team Player Virat Kohli Interesting Story
Image Credit to Original Source

https://x.com/matchpoiint/status/1808106675351834858?s=46

ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ ಇಂದು ರಾತ್ರಿ ಅಥವಾ ನಾಳೆ ಮುಂಜಾನೆ ಬಾರ್ಬೊಡೋಸ್’ನಿಂದ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. ವಿಶ್ವ ಚಾಂಪಿಯನ್ ಭಾರತ ತಂಡ ಬಾರ್ಬೆಡೋಸ್’ನಿಂದ ನೇರವಾಗಿ ದೆಹಲಿಗೆ ಬಂದಿಳಿಯಲಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿದೆ. ವಿಶ್ವ ಚಾಂಪಿಯನ್ನರು ಪ್ರಧಾನಿಯವರನ್ನು ಪ್ರಧಾನಿ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಪ್ರಧಾನಿ ಭೇಟಿಯ ನಂತರ ಟೀಮ್ ಇಂಡಿಯಾ ದೆಹಲಿಯಿಂದ ಮುಂಬೈಗೆ ತೆರಳಲಿದೆ.

ಇದನ್ನೂ ಓದಿ : Louis Kimber : 6,6,6,6,6,4,4,4: ಒಂದೇ ಓವರ್’ನಲ್ಲಿ 43 ರನ್ ಚಚ್ಚಿದ ಲೂಯಿಸ್ ಕಿಂಬರ್

Indian Cricket Team Player Virat Kohli Interesting Story

Comments are closed.