PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್

ಬೆಂಗಳೂರು: (PLK 2022 Bengaluru Bulls) ಸ್ಟಾರ್ ರೇಡರ್ ಪವನ್ ಸೆಹ್ರಾವತ್ ಅವರ ಅನುಪಸ್ಥಿತಿಯಲ್ಲಿ ಈ ಬಾರಿ ಕಣಕ್ಕಿಳಿದಿರುವ ಬೆಂಗಳೂರು ಬುಲ್ಸ್ ( Bengaluru Bulls) ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್’ನಲ್ಲಿ ಶುಭಾರಂಭ ಮಾಡಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ (Shree Kanteerava Indoor Stadium, Bengaluru) ಶುಕ್ರವಾರ ನಡೆದ ಪಂದ್ಯದಲ್ಲಿ ಮಹೇಂದರ್ ಸಿಂಗ್ ನಾಯಕತ್ವದ ಬುಲ್ಸ್ ಪಡೆ ತೆಲುಗು ಟೈಟನ್ಸ್ (Telugu Titans) ತಂಡವನ್ನು 34-29ರ ಅಂತರದಲ್ಲಿ ಸೋಲಿಸಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು.

ಪ್ರೊ ಕಬಡ್ಡಿ ಲೀಗ್-6 ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ “ಗೂಳಿ” ಖ್ಯಾತಿಯ ಪವನ್ ಸೆಹ್ರಾವತ್ ಈ ವರ್ಷ ತಮಿಳು ತಲೈವಾಸ್ ತಂಡದ ಪರ ಆಡುತ್ತಿದ್ದಾರೆ. ಇದು ಬುಲ್ಸ್ ತಂಡಕ್ಕೆ ಹೊಡೆತ ನೀಡಲಿದೆ ಎನ್ನಲಾಗಿತ್ತು. ಆದ್ರೆ ಮೊದಲ ಪಂದ್ಯದಲ್ಲೇ ಭರ್ಜರಿ ಆಟವಾಡಿದ ಬುಲ್ಸ್ ಆಟಗಾರರು ಅಮೋಘ ಪ್ರದರ್ಶನ ತೋರಿದರು. ಬೆಂಗಲೂರು ಬುಲ್ಸ್’ನ ಹೊಸ ಆಟಗಾರರಾದ ವಿಕಾಸ್ ಖಂಡೋಲ (5 ಪಾಯಿಂಟ್ಸ್) ಮತ್ತು ನೀರಜ್ ನರ್ವಾಲ್ (7 ಪಾಯಿಂಟ್ಸ್) ಗಳಿಸಿ ಬುಲ್ಸ್ ಗೆಲುವಿಗೆ ಕಾರಣರಾದರು. ಸ್ಟಾರ್ ಡಿಫೆಂಡರ್ ಸೌರಭ್ ನಂದಲ್ 4 ಅಂಕ ಕಲೆ ಹಾಕಿದರೆ, ನಾಯಕ ಮಹೇಂದರ್ ಸಿಂಗ್ ಕೂಡ 4 ಪಾಯಿಂಟ್ ಗಳಿಸಿ ಬುಲ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾನುವಾರ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ.

ಶುಕ್ರವಾರ ನಡೆದ ಉಳಿದೆರಡು ಪಂದ್ಯಗಳಲ್ಲಿ ಯು ಮುಂಬಾ (U Mumba) ತಂಡವನ್ನು 41-27ರ ಅಂತರಲ್ಲಿ ಭರ್ಜರಿಯಾಗಿ ಸೋಲಿಸಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi) ಶುಭಾರಂಭ ಮಾಡಿದರೆ, ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾ (UP Yodha) ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡವನ್ನು 34-32ರ ಅಂತರದಲ್ಲಿ ರೋಚಕವಾಗಿ ಮಣಿಸಿತು. ಲೀಗ್’ನ ಎರಡನೇ ದಿನವಾದ ಶನಿವಾರವೂ 3 ಪಂದ್ಯಗಳು ನಡೆಯಲಿವೆ.

ಶನಿವಾರದ ಪಂದ್ಯಗಳು:
ಪಟ್ನಾ ಪೈರೇಟ್ಸ್ Vs ಪುಣೇರಿ ಪಲ್ಟನ್ (ರಾತ್ರಿ 7.30ಕ್ಕೆ)
ಗುಜರಾತ್ ಜೈಂಟ್ಸ್ Vs ತಮಿಳ್ ತಲೈವಾಸ್ (ರಾತ್ರಿ 8.30ಕ್ಕೆ)
ಬೆಂಗಾಲ್ ವಾರಿಯರ್ಸ್ Vs ಹರ್ಯಾಣ ಸ್ಟೀಲರ್ಸ್ (ರಾತ್ರಿ 9.30ಕ್ಕೆ)

ಸ್ಥಳ: ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Pro Kabaddi League: ಮತ್ತೆ ಬಂತು ಪ್ರೊ ಕಬಡ್ಡಿ: ಇಲ್ಲಿದೆ ವೇಳಾಪಟ್ಟಿ, ನೇರಪ್ರಸಾರ, ಟಿಕೆಟ್ ಬುಕ್ಕಿಂಗ್‌ನ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Women’s Asia Cup 2022 : ಮಹಿಳಾ ಏಷ್ಯಾ ಕಪ್ ಟಿ20: ಪಾಕಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡ ಭಾರತದ ವನಿತೆಯರು

PLK 2022 Bengaluru Bulls Vs Dabang Delhi KC Pro Kabaddi League

Comments are closed.