ಬೆಂಗಳೂರು: ಬೆಂಗಳೂರು ಬುಲ್ಸ್ ತಂಡದ ಮಾಜಿ ನಾಯಕ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ (Pro Kabaddi League PKL 9 ) ತಮಿಳು ತಲೈವಾಸ್ ತಂಡದ ಪರ ಆಡುತ್ತಿರುವ ಸ್ಟಾರ್ ರೇಡರ್ ಪವರ್ ಸೆಹ್ರಾವತ್ (Pawan Sehrawat Injured ) ಮೊದಲ ಪಂದ್ಯದಲ್ಲಿ ಗಾಯಕ್ಕೀಡಾಗಿದ್ದಾರೆ.
ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪವನ್ ಸೆಹ್ರಾವತ್ ಬಲ ಪಾದದ ಗಾಯಕ್ಕೊಳಗಾದರು. ಗುಜರಾತ್ ಜೈಂಟ್ಸ್ ತಂಡದ ಚಂದ್ರನ್ ರಂಜಿತ್ ಅವರನ್ನು ಟ್ಯಾಕಲ್ ಮಾಡುವ ಪ್ರಯತ್ನದಲ್ಲಿದ್ದಾಗ ಪವನ್ ಸೆಹ್ರಾವತ್ ಅವರ ಬಲ ಪಾದ ಟ್ವಿಸ್ಟ್ ಆಗಿದ್ದರಿಂದ ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಪವನ್ ಅವರನ್ನು ಸ್ಟ್ರೆಚರ್ ಮೂಲಕ ಅಂಗಣದಿಂದ ಹೊರಕ್ಕೆ ಕರೆದೊಯ್ಯಲಾಯಿತು. ನಂತರ ಪವನ್ ಅನುಪಸ್ಥಿತಿಯಲ್ಲಿ ಆಡಿದ ತಮಿಳ್ ತಲೈವಾಸ್ (Tamil Thalaivas) ಪಂದ್ಯವನ್ನು 31-31ರ ಅಂತರದಲ್ಲಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
.
ಪವನ್ ಅವರ ಗಾಯ ಗಂಭೀರ ಸ್ವರೂಪದ್ದಾಗಿದ್ದು, ಮುಂದಿನ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ. ಇತ್ತೀಚೆಗೆ ನಡೆದ ಪಿಕೆಎಲ್ ಹರಾಜಿನಲ್ಲಿ ತಮಿಳು ತಲೈವಾಸ್ ತಂಡ ಪವನ್ ಸೆಹ್ರಾವತ್ ಅವರನ್ನು ದಾಖಲೆಯ 2.26 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಈ ಹಿಂದೆ ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಭರ್ಜರಿ ದಾಳಿಗಳಿಗೆ ಹೆಸರಾಗಿರುವ ಪವನ್ ಸೆಹ್ರಾವತ್ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸುವ ತಾಕತ್ತಿನ ಆಟಗಾರ. ಹೀಗಾಗಿ ಅವರನ್ನು ತಮಿಳು ತಲೈವಾಸ್ ತಂಡ 2.26 ಕೋಟಿಗೆ ಖರೀದಿಸಿ ನಾಯಕ ಪಟ್ಟ ಕಟ್ಟಿತ್ತು. ಆದ್ರೆ ಮೊದಲ ಪಂದ್ಯದಲ್ಲೇ ಪವನ್ ಗಾಯಕ್ಕೊಳಗಾಗಿರುವುದು ತಮಿಳು ತಲೈವಾಸ್ ತಂಡಕ್ಕೆ ಭಾರೀ ಆಘಾತ ತಂದಿದೆ.
ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಒಟ್ಟು ಒಟ್ಟು 105 ಪಂದ್ಯಗಳನ್ನಾಡಿರುವ ಪವನ್ ಸೆಹ್ರಾವತ್ 987 ರೇಡ್ ಪಾಯಿಂಟ್ಸ್ ಗಳಿಸಿದ್ದು ಸಾವಿರದ ಗಡಿ ಮುಟ್ಟಲು ಇನ್ನು ಬೇಕಿರುವುದು ಕೇವಲ 13 ಅಂಕಗಳು ಮಾತ್ರ. ಈಗಾಗಲೇ ಯುಪಿ ಯೋಧಾ ತಂಡದ ನಾಯಕ ಪ್ರದೀಪ್ ನರ್ವಾಲ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ ಸಾವಿರ ರೇಡ್ ಪಾಯಿಂಟ್ಸ್ ಗಳಿಸಿದ್ದಾರೆ. ಪ್ರದೀಪ್ ನರ್ವಾಲ್ 132 ಪಂದ್ಯಗಳಿಂದ 1355 ರೇಡ್ ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಮಣಿಂದರ್ ಸಿಂಗ್ 102 ಪಂದ್ಯಗಳಿಂದ ಭರ್ತಿ 1000 ರೇಡ್ ಪಾಯಿಂಟ್ಸ್ ಗಳಿಸಿದ್ದಾರೆ.
ಇದನ್ನೂ ಓದಿ : Dinesh Karthik retirement : ಕ್ರಿಕೆಟ್ ವೃತ್ತಿ ಬದುಕಿಗೆ ದಿನೇಶ್ ಕಾರ್ತಿಕ್ ನಿವೃತ್ತಿ ?
Pro Kabaddi League PKL 9 Pawan Sehrawat Injured
Comments are closed.