Pro Kabaddi 2021 Bengaluru Bulls vs U Mumba: ದೇಸಿ ಆಟದ ಗತ್ತು ಗಮ್ಮತ್ತು ಇಂದು ಸಂಜೆ 7:30ರಿಂದಲೇ ಆರಂಭ

Pro Kabaddi 2021 : ಅದಾಗಲೇ ಐಪಿಎಲ್ ಅರ್ಥಾತ್ ಇಂಡಿಯನ್ ಪ್ರೀಮಿಯರ್ ಲೀಗ್ ದೇಶದ ಕ್ರೀಡಾಭಿಮಾನಿಗಳ ಉತ್ಸಾಹವನ್ನು ಕೊಳ್ಳೆ ಹೊಡೆದಿತ್ತು. ಕ್ರಿಕೆಟ್‌ನ ಹೊಸ ಅವತಾರ ಐಪಿಎಲ್‌ಗೆ ಸಿಕ್ಕ ಪ್ರಚಾರ ಗಮನಿಸಿದ ಕೆಲವರು ಅಪ್ಪಟ ದೇಸೀ ಆಟ ಕಬಡ್ಡಿಯನ್ನು ಮುನ್ನೆಲೆಗೆ ತರುವ ಯೋಜನೆ ರೂಪಿಸಿದರು. ಅದೇ ಬುಧವಾರ ಡಿಸೆಂಬರ್ 22, ಅಂದರೆ ಇಂದು ಸಂಜೆಯಿಂದ ಆರಂಭವಾಗಲಿರುವ ಪ್ರೊ ಕಬಡ್ಡಿ (Bengaluru Bulls vs U Mumba).

ಕಬಡ್ಡಿ ಕಬಡ್ಡಿ ಎಂದು ಉಸಿರು ಸೆರೆಹಿಡಿದು ಎದುರಾಳಿಯ ಕಣದಲ್ಲಿ ಅಬ್ಬರಿಸುವ ಆಟಕ್ಕೆ ಇಂದು ಮರುಳಾಗದವರಿಲ್ಲ. ಅಪ್ಪದ ದೇಸಿ ಆಟಕ್ಕೆ ಹೊಸ ಸ್ವರೂಪ, ಥಳುಕು ಬಳುಕು, ಲೈಟು, ಹೈ ಎಚ್‌ಡಿ ಕ್ಯಾಮರಾ, ಕಮೆಂಟರಿ, ಪಕ್ಕಾ ಪಕ್ಕಾ ವಿಶ್ಲೇಷಣೆ ಕಬಡ್ಡಿಯ ಹೊಸ ಜಗತ್ತಿಗೆ ಜನರಿಗೆ ಪ್ರವೇಶ ನೀಡಿತು. ಕಬಡ್ಡಿ ಬಗ್ಗೆ ಗೊತ್ತಿಲ್ಲದವರೂ ಲೈವ್ ಮ್ಯಾಚ್ ನೋಡಲಾರಂಭಿಸಿದರು.

8ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ (Bengaluru Bulls vs U Mumba) ಮುಖಾಮುಖಿಯಾಗಲಿದೆ. ಇಂದಿನಿಂದ ಟೂರ್ನಿ ಆರಂಭವಾಗಲಿದ್ದು ಪ್ರತಿದಿನ ಮೂರು ಪಂದ್ಯಗಳು ನಡೆಯಲಿವೆ. ಅಂದಹಾಗೆ ಇಡೀ ಟೂರ್ನಿ ಬೆಂಗಳೂರಿನಲ್ಲಿಯೇ ನಡೆಯಲಿದೆ. ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾಗುತ್ತದೆ. ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಕೊನೆ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಯಾವೆಲ್ಲ ತಂಡಗಳು ಅಖಾಡಕ್ಕಿಳಿಯಲಿವೆ?
ಬೆಂಗಾಲ್ ವಾರಿಯರ್ಸ್
ದಬಾಂಗ್ ದೆಹಲಿ
ಯುಪಿ ಯೋಧಾ
ಯು ಮುಂಬಾ
ತಮಿಳು ತಲೈವಾಸ್
ಬೆಂಗಳೂರು ಬುಲ್ಸ್
ಹರಿಯಾಣ ಸ್ಟೀಲರ್ಸ್
ಜೈಪುರ ಪಿಂಕ್ ಪ್ಯಾಂಥರ್ಸ್
ಪಾಟ್ನಾ ಪೈರೇಟ್ಸ್
ಗುಜರಾತ್ ಜೈಂಟ್ಸ್
ಪುಣೇರಿ ಪಲ್ಟನ್
ತೆಲುಗು ಟೈಟಾನ್ಸ್


ಬೆಂಗಳೂರು ಬುಲ್ಸ್ ಬಲವೇನು?
ಈ ಬಾರಿಯ ಟೂರ್ನಿಯಲ್ಲಿ ಕರ್ನಾಟಕದ ಸಾಂಕೇತಿಕ ತಂಡ  ಬೆಂಗಳೂರು ಬುಲ್ಸ್ ಗೆಲ್ಲುವ ಕುದುರೆಯಾಗಿ ಹೊರಹೊಮ್ಮಿದೆ.  2019 ರಲ್ಲಿ ನಡೆದ ಸೀಸನ್ 6ರ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಸೋಲಿಸಿ ಬೆಂಗಳೂರು ಬುಲ್ಸ್ ಗೆಲುವು ಸಾಧಿಸಿತ್ತು.  ಸೋಲಿಸುವ ಮೂಲಕ ಸೀಸನ್ 6 ರಲ್ಲಿ ಚಾಂಪಿಯನ್ ಆಗಿತ್ತು.  ಸೀಸನ್ 1 ಮತ್ತು 7 ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.ಅಲ್ಲದೇ 2ನೇ ಸೀಸನ್ ನಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು.

ಬೆಂಗಳೂರು ಬುಲ್ಸ್ ತಂಡ ಹೀಗಿದೆ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್.

ಇದನ್ನೂ ಓದಿ: Kirti Azad : ಗ್ರೆಗ್ ಚಾಪೆಲ್ ಕೋಚ್ ಆಗಿದ್ದಾಗ ನಾನು ಗಂಗೂಲಿಯ ಬೆಂಬಲಕ್ಕೆ ನಿಂತಿದ್ದೆ: ಮಾಜಿ ಆಯ್ಕೆದಾರ ಕೀರ್ತಿ ಆಝಾದ್

(Pro Kabaddi 2021 starts today at 7 30 PM Bengaluru Bulls versus U Mumba match begins)

Comments are closed.