Rohit Sharma : ತನ್ನ 5 ಕೋಟಿಯನ್ನು ಸಪೋರ್ಟ್ ಸ್ಟಾಫ್’ಗೆ ನೀಡಲು ಮುಂದಾಗಿದ್ದ ರೋಹಿತ್ ಶರ್ಮಾ 

Rohit Sharma  : ಮುಂಬೈ: ಐಸಿಸಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿಗಳ ನಗದು ಬಹುಮಾನ ಘೋಷಿಸಿತ್ತು. ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್’ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಭಾರತ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಬಿಸಿಸಿಐ ಈ ಘೋಷಣೆ ಮಾಡಿತ್ತು.

Rohit Sharma  : ಮುಂಬೈ: ಐಸಿಸಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿಗಳ ನಗದು ಬಹುಮಾನ ಘೋಷಿಸಿತ್ತು. ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್’ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಭಾರತ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಬಿಸಿಸಿಐ ಈ ಘೋಷಣೆ ಮಾಡಿತ್ತು. ಅದರಂತೆ ಪ್ರತೀ ಆಟಗಾರನಿಗೆ ತಲಾ 5 ಕೋಟಿ ರೂಪಾಯಿ, ರಾಹುಲ್ ದ್ರಾವಿಡ್ ಸೇರಿದಂತೆ ಕೋಚಿಂಗ್ ಸ್ಟಾಫ್’ಗ 2.50 ಕೋಟಿ ರೂಪಾಯಿ ಹಾಗೂ ಸಪೋರ್ಟಿಂಗ್ ಸ್ಟಾಫ್’ಗೆ ತಲಾ 2 ಕೋಟಿ ರೂಪಾಯಿ ನಗದು ಬಹುಮಾನವನ್ನು ನೀಡಲಾಗಿದೆ.

Rohit Sharma was ready to give his 5 crores to the support staff T20 World Cup 2024 winning Amount
Image Credit to Original Source

ಆದರೆ ಮುಂಬೈ ಮೂಲದ ಭಾರತ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಹೇಳಿರುವ ಪ್ರಕಾರ, ‘’ಸಪೋರ್ಟಿಂಗ್ ಸ್ಟಾಫ್’ಗೆ 2 ಕೋಟಿ ರೂಪಾಯಿಗಳನ್ನು ನೀಡಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಿಂದೇಟು ಹಾಕಿದ್ದರಂತೆ. ಆ ವಿಚಾರ ಗೊತ್ತಾಗುತ್ತಿದ್ದಂತೆ ಜಯ್ ಶಾ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma ) , ತಮ್ಮ ಪಾಲಿಗೆ ಬರಲಿದ್ದ 5 ಕೋಟಿ ರೂಪಾಯಿಗಳನ್ನು ಸಹಾಯಕ ಸಿಬ್ಬಂದಿಗೆ ನೀಡಲು ಮುಂದಾಗಿದ್ದರು.

ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದ ಭೀಮಾರ್ಜುನರು ಇನ್ನೆಂದೂ ಟಿ20ಯಲ್ಲಿ ಜೊತೆಯಾಗಿ ಆಡಲಾರರು..!

ಇದು ತಿಳಿಯುತ್ತಿದ್ದಂತೆ ಎಲ್ಲಾ ಸಹಾಯಕ ಸಿಬ್ಬಂದಿಗೆ 2 ಕೋಟಿ ರೂಪಾಯಿಗಳನ್ನು ನೀಡಲು ಬಿಸಿಸಿಐ ಮುಂದಾಯಿತು’’ ಎಂದು ಹೆಸರು ಹೇಳಲಿಚ್ಛಿಸದ ಸಹಾಯಕ ಸಿಬ್ಬಂದಿಯೊಬ್ಬರು ಹೇಳಿರುವುದಾಗಿ ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ. ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡದ ಜೊತೆ ಒಟ್ಟು 42 ಮಂದಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದರು. ಇದರಲ್ಲಿ 15 ಮಂದಿ ಆಟಗಾರರು, ನಾಲ್ವರು ಮೀಸಲು ಆಟಗಾರರು, ಕೋಚಿಂಗ್ ಸ್ಟಾಫ್, ಸಹಾಯಕ ಸಿಬ್ಬಂದಿ, ಮ್ಯಾನೇಜರ್, ಲಾಜಿಸ್ಟಿಕ್ ಮ್ಯಾನೇಜರ್ ಹಾಗೂ ಮೀಡಿಯಾ ಟೀಮ್’ನ ಸದಸ್ಯರು ಸೇರಿದ್ದಾರೆ.

ಇದನ್ನೂ ಓದಿ : Rahul Dravid: ಬಿಸಿಸಿಐ ತನಗೆ ಕೊಟ್ಟ ಎರಡೂವರೆ ಕೋಟಿಯನ್ನೇ ಬೇಡ ಎಂದ ರಾಹುಲ್ ದ್ರಾವಿಡ್‌ ; ಗ್ರೇಟ್‌ ವಾಲ್‌ ಕಾರ್ಯಕ್ಕೆ ಜನಮೆಚ್ಚುಗೆ

ಟಿ20 ವಿಶ್ವ ಚಾಂಪಿಯನ್ನರಿಗೆ ₹125 ಕೋಟಿ ಬಂಪರ್ ಗಿಫ್ಟ್, ಯಾರಿಗೆಷ್ಟು?
(T20 World Cup Prize Money Breakdown)
* 15 ಮಂದಿ ಆಟಗಾರರಿಗೆ: ತಲಾ ₹5 ಕೋಟಿ
* ರಾಹುಲ್ ದ್ರಾವಿಡ್ (ಕೋಚ್): ₹2.5 ಕೋಟಿ
* ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್): ₹2.5 ಕೋಟಿ
* ಪರಾಸ್ ಮಾಂಬ್ರೆ (ಬೌಲಿಂಗ್ ಕೋಚ್): ₹2.5 ಕೋಟಿ
* ಟಿ.ದಿಲೀಪ್ (ಫೀಲ್ಡಿಂಗ್ ಕೋಚ್): ₹2.5 ಕೋಟಿ

Rohit Sharma was ready to give his 5 crores to the support staff T20 World Cup 2024 winning Amount
Image Credit to Original Source

* 3 ಥ್ರೋಡೌನ್ ಸ್ಪೆಷಲಿಸ್ಟ್ಸ್: ₹2 ಕೋಟಿ
* 3 ಫಿಸಿಯೊಗಳು: ₹2 ಕೋಟಿ
* 2 ಮಸಾಜ್’ಮ್ಯಾನ್: ₹2 ಕೋಟಿ
* 2 ಸ್ಟ್ರೆಂತ್ & ಕಂಡಿಷನಿಂಗ್ ಕೋಚ್’ಗಳಿಗೆ: ₹2 ಕೋಟಿ
* ಮೀಸಲು ಆಟಗಾರರು: ₹1 ಕೋಟಿ

ಇದನ್ನೂ ಓದಿ : KL Rahul Net Worth: ಕನ್ನಡಿಗ ಕೆ.ಎಲ್ ರಾಹುಲ್ ಬಳಿ ಇದೆ ಶತಕೋಟಿ ಆಸ್ತಿ!

Rohit Sharma was ready to give his 5 crores to the support staff T20 World Cup 2024 winning Amount

Comments are closed.