US‌ MastersT10: ಯುಎಸ್ ಮಾಸ್ಟರ್ಸ್ ಟಿ10 ಟೂರ್ನಿಯಲ್ಲಿ ಕರ್ನಾಟಕ ಮಾಸ್ಟರ್ಸ್; ಫೋಟೋ ಶೇರ್ ಮಾಡಿದ ಪೀಣ್ಯ ಎಕ್ಸ್’ಪ್ರೆಸ್

ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಯುಎಸ್ ಮಾಸ್ಟರ್ಸ್ ಟಿ10 ಟೂರ್ನಿಯಲ್ಲಿ (US MastersT10) ಕರ್ನಾಟಕದ ಮಾಜಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ, ಅಭಿಮನ್ಯು ಮಿಥುನ್ ಮತ್ತು ಸ್ಟುವರ್ಟ್ ಬಿನ್ನಿ ಆಡುತ್ತಿದ್ದಾರೆ.

ಕರ್ನಾಟಕ ತಂಡದ ಮಾಜಿ ಕೋಚ್ ಜೆ.ಅರುಣ್ ಕುಮಾರ್ ಮತ್ತು ಮಾಜಿ ಮಧ್ಯಮ ವೇಗದ ಬೌಲರ್ ವೆಂಕಟೇಶ್ ಪ್ರಸಾದ್, ಯುಎಸ್ ಮಾಸ್ಟರ್ಸ್ ಟಿ10 ಟೂರ್ನಿಯಲ್ಲಿ ಕೋಚ್’ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುಎಸ್ ಮಾಸ್ಟರ್ಸ್ ಟಿ10 ಟೂರ್ನಿಯಲ್ಲಿ ಕನ್ನಡಿಗರ ಸಮಾಗಮವಾಗಿದ್ದು, ಈ ಫೋಟವನ್ನ ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಯುಎಸ್ ಮಾಸ್ಟರ್ಸ್ ಟಿ10 ಟೂರ್ನಿಯಲ್ಲಿ ಆಡುತ್ತಿರುವ ತಂಡಗಳು (USMastersT10):

  1. ಅಟ್ಲಾಂಟಾ ರೈಡರ್ಸ್ (Atlanta Riders)
  2. ಕ್ಯಾಲಿಫೋರ್ನಿಯಾ ನೈಟ್ಸ್ (California Knights)
  3. ನ್ಯೂಜೆರ್ಸಿ ಟ್ರೈಟನ್ಸ್ (Morrisville Unity)
  4. ಮೊರಿಸ್’ವಿಲ್ಲೆ ಯುನಿಟಿ (New Jersey Triton’s)
  5. ನ್ಯೂಯಾರ್ಕ್ ವಾರಿಯರ್ಸ್ (New York Warriors)
  6. ಟೆಕ್ಸಾಸ್ ಚಾರ್ಜರ್ಸ್ (Texas Chargers )

ಕೊಡಗಿನ ವೀರ, 37 ವರ್ಷದ ರಾಬಿನ್ ಉತ್ತಪ್ಪ ಅಟ್ಲಾಂಟಾ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ.

ಅಭಿಮನ್ಯು ಮಿಥುನ್ ಮತ್ತು ಸ್ಟುವರ್ಟ್ ಬಿನ್ನಿ ನ್ಯೂ ಜೆರ್ಸಿ ಟ್ರೈಟನ್ಸ್ ತಂಡದ ಪರ ಆಡುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಕ್ಯಾಲಿಫೋರ್ನಿಯಾ ನೈಟ್ಸ್ ಪರ ಆಡುತ್ತಿದ್ದಾರೆ.

ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್, ರಾಹುಲ್ ಶರ್ಮಾ ಮತ್ತು ಎಸ್.ಶ್ರೀಶಾಂತ್ ಮೊರಿಸ್’ವಿಲ್ಲೆ ಯುನಿಟಿ ತಂಡದ ಪರ ಮತ್ತು ಗೌತಮ್ ಗಂಭೀರ್, ಯುವರಾಜ್ ಸಿಂಗ್, ನಮನ್ ಓಜಾ, ಯೂಸುಫ್ ಪಠಾಣ್, ನ್ಯೂಜೆರ್ಸಿ ಟ್ರೈಟನ್ಸ್ ಪರ ಆಡುತ್ತಿದ್ದಾರೆ.

ಯುಎಸ್ ಮಾಸ್ಟರ್ಸ್ ಟಿ10 ಟೂರ್ನಿಯ ಪಂದ್ಯಗಳು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್”ನಲ್ಲಿ ನೇರ ಪ್ರಸಾರಗೊಳ್ಳುತ್ತಿವೆ. ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತಿದೆ.

ಇದನ್ನೂ ಓದಿ : Asia Cup 2023: ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕೆ.ಎಲ್. ರಾಹುಲ್, ಶ್ರೇಯಸ್‌ , ಪ್ರಸಿದ್ಧ ಕೃಷ್ಣ ಕಂಬ್ಯಾಕ್

ಇದನ್ನೂ ಓದಿ : Asia Cup 2023: ಕೆ.ಎಲ್ ರಾಹುಲ್ ಕಂಪ್ಲೀಟ್ ಫಿಟ್, ಶ್ರೇಯಸ್ ಅಯ್ಯರ್ ಇನ್ನೂ ಡೌಟ್; ಇಲ್ಲಿದೆ ಸಂಭಾವ್ಯ ಭಾರತ ತಂಡ

US MastersT10: Karnataka Masters in US Masters T10 tournament; Photo shared by Peenya Express

Comments are closed.