ಹರಾರೆ: ಭಾರತ ತಂಡದ ಮಾಜಿ ಸ್ಫೋಟಕ ಆಲ್ರೌಂಡರ್ (Yusuf Pathan) ಯೂಸುಫ್ ಪಠಾಣ್, ಪಾಕಿಸ್ತಾನದ ಖ್ಯಾತ ಎಡಗೈ ವೇಗದ ಬೌಲರ್ ಮೊಹಮ್ಮದ್ ಆಮೀರ್ ಅವರಿಗೆ ಹಿಗ್ಗಾಮುಗ್ಗ ಚಚ್ಚಿದ್ದಾರೆ. ಆಮೀರ್ ಬೌಲಿಂಗ್’ನಲ್ಲಿ ಯೂಸುಫ್ ಪಠಾಣ್ ಬೌಂಡರಿ ಸಿಕ್ಸರ್’ಗಳ ಸುರಿಮಳೆಗೈದಿರುವುದು ಜಿಂಬಾಬ್ವೆ ಆಫ್ರೋ ಟಿ10 ಲೀಗ್ (Zimbabwe Afro T10) ಟೂರ್ನಿಯ ಪಂದ್ಯದಲ್ಲಿ.
ಜೋಹಾನ್ಸ್’ಬರ್ಗ್ ಬಫೆಲ್ಲೋಸ್ ಪರ ಆಡುತ್ತಿರುವ ಯೂಸುಫ್ ಪಠಾಣ್, ಕೇವಲ 26 ಎಸೆತಗಳನ್ನೆದುರಿಸಿ 5 ಬೌಂಡರಿಗಳು ಮತ್ತು 8 ಭರ್ಜರಿ ಸಿಕ್ಸರ್’ಗಳ ನೆರವಿನಿಂದ ವಿಸ್ಫೋಟಕ ಅಜೇಯ 80 ರನ್ ಸಿಡಿಸಿ ಡರ್ಬನ್ ಖಲ್ಲಂಡರ್ಸ್ ವಿರುದ್ಧ ಜೋಹಾನ್ಸ್’ಬರ್ಗ್ ಬಫೆಲ್ಲೋಸ್ ತಂಡಕ್ಕೆ 6 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಮೊಹಮ್ಮದ್ ಆಮೀರ್ ಅವರ ಒಂದೇ ಓವರ್’ನಲ್ಲಿ ಯೂಸುಫ್ ಪಠಾಣ್, 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 24 ರನ್ ಚಚ್ಚಿ ತಮ್ಮ ಹಳೇ ಬ್ಯಾಟಿಂಗ್ ವೈಭವವನ್ನು ನೆನಪಿಸಿದರು. ಆಮೀರ್’ಗೆ ಯೂಸುಫ್ ಸಿಕ್ಸರ್’ಗಳನ್ನು ಬಾರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
Yusuf Pathan smashed 6, 6, 0, 6, 2, 4 in a single over against Amir.
— Johns. (@CricCrazyJohns) July 28, 2023
What a beast. 🔥pic.twitter.com/8nCf1H8l8c
ಯೂಸುಫ್ ಪಠಾಣ್ ಅವರ ಆರ್ಭಟಕ್ಕೆ ಬೆಚ್ಚಿದ ಬಿದ್ದ ಎಡಗೈ ವೇಗಿ ಮೊಹಮ್ಮದ್ ಆಮೀರ್ ತಮ್ಮ 2 ಓವರ್’ಗಳಲ್ಲಿ 42 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡರ್ಬನ್ ಖಲಂಡರ್ಸ್ ತಂಡ, ನಿಗದಿತ 10 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಜೋಹಾನ್ಸ್’ಬರ್ಗ್ ಬಫೆಲ್ಲೋಸ್ ತಂಡ ಯೂಸ್ ಫಠಾಣ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 9.5 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ರೋಚಕ ಗೆಲುವು ದಾಖಲಿಸಿತು.
ಇದನ್ನೂ ಓದಿ : R Ashwin : ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್, ಸ್ಪಿನ್ ಮಾಂತ್ರಿಕನನ್ನು ಕಣಕ್ಕಿಳಿಸಲಿದ್ದಾರೆ ದ್ರಾವಿಡ್-ರೋಹಿತ್
ಇದನ್ನೂ ಓದಿ : Arjun Tendulkar : ಕನ್ನಡಿಗರೊಂದಿಗೆ ಒಂದೇ ತಂಡದಲ್ಲಿ ಆಡುತ್ತಿದ್ದಾರೆ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್
ಜೋಹಾನ್ಸ್’ಬರ್ಗ್ ತಂಡದ ಗೆಲುವಿಗೆ 3 ಓವರ್’ಗಳಲ್ಲಿ 64 ರನ್ ಬೇಕಿಸಿದ್ದಾಗ ಸುನಾಮಿಯಂತೆ ಆರ್ಭಟಿಸಿದ ಯೂಸುಫ್ ಪಠಾಣ್, ತಮ್ಮ ಕೊನೆಯ 14 ಎಸೆತಗಳಲ್ಲಿ 61 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೊನೆಯ 14 ಎಸೆತಗಳಲ್ಲಿ ಯೂಸುಫ್ ಪಠಾಣ್ ಬ್ಯಾಟಿಂಗ್ ವೈಭವ:
6,6,0,6,2,4,6,1,6,4,6,4,6,4
ಜಿಂಬಾಬ್ವೆ ಆಫ್ರೋ ಟಿ10 ಲೀಗ್’ನಲ್ಲಿ ಯೂಸುಫ್ ಪಠಾಣ್ ಅಬ್ಬರಕ್ಕೆ ಅವರ ಸಹೋದರ ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಇರ್ಫಾನ್ ಪಠಾಣ್, ಕನ್ನಡಿಗ ರಾಬಿನ್ ಉತ್ತಪ್ಪ ನಾಯಕತ್ವದ ಹರಾರೆ ಹರಿಕೇನ್ಸ್ ಪರ ಆಡುತ್ತಿದ್ದಾರೆ.
Yusuf Pathan: Yusuf Pathan hit Pakistan bowler Mohammad Amir.
Comments are closed.