ಮಾಜಿ ಸಚಿವ ಬಿ.ಸಿ. ಪಾಟೀಲ್‌ ಆಳಿಯನ ಸಾವಿನ ಹಿಂದಿದೆ ನಿಗೂಢ ಕಾರಣ ..!

BC Patil Son in law Prathap Kumar Suicide : ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರ ಅಳಿಯ ಚಲಿಸುತ್ತಿದ್ದ ಕಾರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೃತ ಪ್ರತಾಪ್‌ ಕುಮಾರ್‌ ಅವರಿಗೆ 43 ವರ್ಷ ವಯಸ್ಸಾಗಿತ್ತು.

BC Patil Son in law Prathap Kumar Suicide : ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರ ಅಳಿಯ ಚಲಿಸುತ್ತಿದ್ದ ಕಾರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೃತ ಪ್ರತಾಪ್‌ ಕುಮಾರ್‌ ಅವರಿಗೆ 43 ವರ್ಷ ವಯಸ್ಸಾಗಿತ್ತು. ಶಿವಮೊಗ್ಗ – ಹರಿಹರ ರಾಷ್ಟ್ರೀಯ ಹೆದ್ದಾರಿ ದಾವಣಗೆರೆಯ ಹೊನ್ನಾಳಿ ತಾಲೂಕಿನ ಅರಿಕೆರೆ ಎಂಬಲ್ಲಿ ಈ ಘಟನೆ ನಡೆಇದೆ.

ವಿಷ ಸೇವಿಸಿ ಕಾರಿನಲ್ಲಿ ಒದ್ದಾಡುತ್ತಿದ್ದ ಪ್ರತಾಪ್‌ ಕುಮಾರ್‌ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ, ಚಿಕಿತ್ಸೆ ಫಲಕಾರಿ ಯಾಗದೇ ಅವರು ಸಾವನ್ನಪ್ಪಿದ್ದಾರೆ. ಬಿಸಿ ಪಾಟೀಲ್‌ ಅವರ ಹಿರಿಯ ಪುತ್ರಿ ಸೌಮ್ಯ ಅವರ ಪತಿ ಮೃತ ಕೆಜಿ ಪ್ರತಾಪ್‌ ಕುಮಾರ್.‌ ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡಸುತ್ತಿದ್ದಾರೆ.

Former minister BC Patil the Mysterious Reason Behind Son in law Prathap Kumar
Image Credit to Original Source

ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಆತ್ಮಹತ್ಯೆ ?

ಬಿಸಿ ಪಾಟೀಲ್‌ ಅವರ ಪುತ್ರಿ ಸೌಮ್ಯ ಹಾಗೂ ಪ್ರತಾಪ್‌ ಕುಮಾರ್‌ ಅವರ ಮದುವೆ ಸುಮಾರು 15 ವರ್ಷಗಳ ಹಿಂದೆ ನಡೆದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಪತ್ನಿಗೆ ಪ್ರತಾಪ್‌ ಕುಮಾರ್‌ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಉಡುಪಿ : ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಸೆ ತೋರಿಸಿ 67 ಲಕ್ಷ ರೂಪಾಯಿ ವಂಚನೆ

ಪ್ರತಾಪ್‌ ಕುಮಾರ್‌ ಅವರ ಪತ್ನಿ ಕೂಡಲೇ ತನ್ನ ತಂದೆ ಬಿಸಿ ಪಾಟೀಲ್‌ ಅವರಿಗೆ ವಿಚಾರವನ್ನು ತಿಳಿಸಿದ್ದಾರೆ. ಬಿಸಿ ಪಾಟೀಲ್‌ ಅವರು ದಾವಣಗೆರೆ ಜಿಲ್ಲಾ ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಿ, ತನ್ನ ಅಳಿಯನ ಮೊಬೈಲ್‌ ಸಂಖ್ಯೆ ಹಾಗೂ ಕಾರಿನ ನಂಬರ್‌ ಕೂಡ ನೀಡಿದ್ದರು ಎನ್ನಲಾಗುತ್ತಿದೆ. ದಾವಣೆಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಸ್ಥಳೀಯರು ಪ್ರತಾಪ್‌ ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ : 7ನೇ ವೇತನ ಆಯೋಗ ವರದಿ ಅಗಸ್ಟ್‌ನಿಂದ ಜಾರಿ : ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ನ್ಯೂಸ್‌

ಅಳಿಯ ಸಾವಿನ ವಿಚಾರ ತಿಳಿಯುತ್ತಿದ್ದಂತೆಯೇ ಹಾವೇರಿ ಜಿಲ್ಲೆಯ ಹಿರೆಕೇರೂರಿನಲ್ಲಿರುವ ಬಿಸಿ ಪಾಟೀಲ್‌ ಅವರ ಕುಟುಂಬ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದೆ. ಇನ್ನು ಬಿಸಿ ಪಾಟೀಲ್‌ ಅವರು ಮೆಗ್ಗಾನ್‌ ಆಸ್ಪತ್ರೆಗೆ ದೌಡಾಯಿಸಿದ್ದು, ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರತಾಪ್‌ ಕುಮಾರ್‌ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕರಾವಳಿಯಲ್ಲಿ ಬಾರೀ ಮಳೆ ರೆಡ್‌ ಅಲರ್ಟ್‌ ಘೋಷಣೆ: ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

Former minister BC Patil the Mysterious Reason Behind Son in law Prathap Kumar

Comments are closed.