Gruha Lakshmi Scheme : ಗೃಹಲಕ್ಷ್ಮೀ ನೋಂದಣಿಗೆ ಫಲಾನುಭವಿಗಳು SMSಗೆ ಕಾಯಬೇಕಾಗಿಲ್ಲ : ಜಾರಿಯಾಯ್ತು ಹೊಸ ರೂಲ್ಸ್‌

ಉಡುಪಿ : ರಾಜ್ಯ ಸರಕಾರ ಮನೆಯೊಡತಿಗೆ ಪ್ರತೀ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಇಷ್ಟು ದಿನ ಎಸ್‌ಎಂಎಸ್‌ಗಾಗಿ ಕಾಯಬೇಕಾಗಿತ್ತು. ಆದರೆ ರಾಜ್ಯ ಸರಕಾರ ಹೊಸ ರೂಲ್ಸ್‌ ಜಾರಿಗೆ ತಂದಿದ್ದು, ಎಸ್‌ಎಂಎಸ್‌ ಇಲ್ಲದೇ ನೋಂದಣಿ ಮಾಡಲು ಅವಕಾಶ ಕಲ್ಪಿಸಿದೆ.

ಕಾಂಗ್ರೆಸ್‌ ಸರಕಾರ ಚುನಾವಣಾ ಪೂರ್ವದಲ್ಲೇ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ರಾಜ್ಯದಲ್ಲಿ ಈಗಾಗಲೇ ಜಾರಿಗೆ ಬಂದಿದೆ. ರೇಷನ್‌ ಕಾರ್ಡ್‌ನಲ್ಲಿ ಮನೆಯೊಡತಿ ಎಂದು ನಮೂದಾಗಿರುವ ಮಹಿಳೆಯ ಬ್ಯಾಂಕ್‌ ಖಾತೆಗೆ ರಾಜ್ಯ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ 2000 ರೂಪಾಯಿ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಿದೆ.

ಇದನ್ನೂ ಓದಿ : Toilet video case : ಉಡುಪಿ : ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ : 3 ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲು

ಇದನ್ನೂ ಓದಿ : KCET Counselling 2023 : ಕೆಸಿಇಟಿ 2023 ಕೌನ್ಸೆಲಿಂಗ್ : ಆಯ್ಕೆಯ ಪ್ರವೇಶ, ಕಾಲೇಜು ಆಯ್ಕೆ ಪ್ರಕ್ರಿಯೆಗಾಗಿ ಇಲ್ಲಿ ಪರಿಶೀಲಿಸಿ

ಇಷ್ಟು ದಿನ ಫಲಾನುಭವಿಗಳ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಬಂದ ನಂತರವಷ್ಟೇ ಯೋಜನೆಗೆ ನೋಂದಣಿ ಮಾಡಲು ಅವಕಾಶವಿತ್ತು. ಆದ್ರೀಗ ಹೊಸ ನಿಯಮದ ಪ್ರಕಾರ ಎಲ್ಲರೂ ನೇರವಾಗಿ ತಮಗೆ ಹತ್ತಿರ ಇರುವ ಗ್ರಾಮ ಒನ್‌, ಗ್ರಾಮ ಪಂಚಾಯತ್‌ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್‌, ನಗರದ ವಾರ್ಡ್‌ ಕಚೇರಿಗಳಲ್ಲಿ ಯೋಜನೆಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಉಡುಪಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gruha Lakshmi Scheme: Beneficiaries need not wait for SMS for Gruha Lakshmi Yojana registration: New Rules implemented

Comments are closed.