Karnataka Budget 2022 : ರಾಜ್ಯ ಬಜೆಟ್ ಮಂಡನೆ ಆರಂಭಿಸಿದ ಸಿಎಂ ಬೊಮ್ಮಾಯಿ : Live
Karnataka Budget 2022 Live : 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆರಂಭಿಸಿದ್ದಾರೆ. ಆರಂಭಿಸಿದ ಸಿಎಂ ಬೊಮ್ಮಾಯಿ. ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ, ಯಾವೆಲ್ಲಾ ಹೊಸ ಯೋಜನೆಗಳು ಜಾರಿಯಾಗಲಿವೆ ಅನ್ನೋ ಮಾಹಿತಿ ಇಲ್ಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಬಜೆಟ್‌ನ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಸ್ವಸಹಾಯ ಸಂಘಗಳ ಮಹಿಳೆಯರಿಗೆ ತಲಾ 1.5 ಲಕ್ಷ ರೂ. ಸಾಲ ಸೌಲಭ್ಯ
ಸ್ವಸಹಾಯ ಸಂಘಗಳ ಅನುಕೂಲ ಕಲ್ಪಿಸುವ ಸಲುವಾಗಿ ಆಯ್ದ ಸ್ವ-ಸಹಾಯ ಸಂಘಗಳಿಗೆ ತಲಾ 1.5 ಲಕ್ಷ ರೂ. ನೆರವು ನೀಡಲು ಮುಂದಾಗಿದ್ದು, ಇದಕ್ಕೆ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗುಂಪುಗಳಿಗೆ ವಿಶೇಷ ಆದ್ಯತೆ, 3.9 ಲಕ್ಷ ಮಹಿಳೆಯರಿಗೆ ಅನುಕೂಲ, ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲು ಯೋಜನೆಯನ್ನು ರೂಪಿಸಲಾಗಿದೆ.
ಮೀನುಗಾರಿಕೆಗೆ ಬಂಪರ್, ಬಂದರು ಅಭಿವೃದ್ದಿಗೆ 1,880 ಕೋಟಿ ರೂ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ಬಂದರುಗಳ ಅಭಿವೃದ್ಧಿ ಹಾಗೂ ಕಡಲು ವ್ಯಾಪಾರಕ್ಕೆ 1,880 ಕೋಟಿ ರೂ. ಮೀಸಲು ಇಡಲಾಗಿದೆ. 250 ಕೋಟಿರೂ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿ್ರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಬಂದರು ನಿರ್ಮಾಣ, 350 ಕೋಟಿ ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ, ಕಾರವಾರದಲ್ಲಿ ಜಲಸಾರಿಗೆ, ಮೀನುಗಾರಿಕಾ ಸಂಸ್ಥೆ ಸ್ಥಾಪನೆ, ತದಡಿ-ಅಘನಾಶಿನಿ ಮಧ್ಯೆ ದೋಣಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
Karnataka Budget 2022 : ರಾಜ್ಯದಲ್ಲಿ ತೆರಿಗೆ ಹೆಚ್ಚಳ ಇಲ್ಲ : ಬೊಮ್ಮಾಯಿ
ರಾಜ್ಯದ ಬಜೆಟ್‌ನಲ್ಲಿ ಈ ಬಾರಿ ಯಾವುದೇ ತೆರಿಗೆಯನ್ನು ಹೆಚ್ಚಳ ಮಾಡದಿರಲು ತೀರ್ಮಾನಿಸಲಾಗಿದೆ. ರಾಜಸ್ವ ಕೊರತೆ ಅಂದಾಜು 14,699 ಕೋಟಿ, ವಿತ್ತೀಯ ಕೊರತೆ ಅಂದಾಜು 61,564 ಕೋಟಿ. ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ತೆರಿಗೆ ಸಂಗ್ರಹ ಗುರಿ, ಅಬಕಾರಿ ಇಲಾಖೆಯಿಂದ ರಾಜಸ್ವ ಸಂಗ್ರಹದಿಂದ 29,000 ಕೋಟಿ, ಸಾರಿಗೆ ಇಲಾಖೆಯಿಂದ 8,007 ಕೋಟಿ ರಾಜಸ್ವ ಸಂಗ್ರಹಣೆ ಗುರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ ರಾಜಸ್ವ ಗುರಿಯನ್ನು ಹೊಂದಲಾಗಿದೆ.
Karnataka Budget 2022 : ಕಾಶಿ ಯಾತ್ರಾರ್ಥಿಗಳಿಗೆ 5000 ರೂ ಸಹಾಯಧನ
ರಾಜ್ಯದಲ್ಲಿರುವ ಪ್ರಮುಖ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್ ಮರವತ್ತೂರು ಗಳಿಗೆ ಕೆಎಸ್ ಟಿಡಿಸಿ ವತಿಯಿಂದ ಪ್ಯಾಕೇಜ್ ಟ್ರಿಪ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅಲ್ಲದೇ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5000 ರೂ ಸಹಾಯಧನ ನೀಡಲಾಗುತ್ತದೆ. 85 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಶೈಲದಲ್ಲಿ ಯಾತ್ರಿ ನಿಮಾಸವನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಅಂಜನಾದ್ರಿ ಬೆಟ್ಟದ ಅಭಿವೃದ್ದಿಗೆ 100 ಕೋಟಿ ರೂ, ಹಂಪಿ, ಬಾದಾಮಿ, ಐಹೊಳೆ- ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತ, ಮೈಸೂರು-ಶ್ರೀರಂಗಪಟ್ಟಣ-ಹಾನ-ಬೇಲೂರು- -ಹಳೆಬೀಡು ಅಭಿವೃದ್ದಿ ಕ್ರಮ. ಬೇಲೂರು, ಹಳೆಬೀಡು, ಸೋಮನಾಥಪುರ ಸೇರಿ ಹೊಯ್ಸಳರ ಸ್ಮಾರಕ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೆ ಕ್ರಮ.
.
Karnataka Budget 2022 : ರಾಜ್ಯದ ಹಾಲು ಉತ್ಪಾದಕರಿಗೆ ಭರ್ಜರಿ ಗುಡ್ ನ್ಯೂಸ್
ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ. ಅಲ್ಲದೇ ಹಾಲು ಉತ್ಪಾದಕರಿಗೆ ಸರಳ ನಿಬಂಧನೆಗಳೊಂದಿಗೆ ಸಾಲ ಸೌಲಭ್ಯ ನೀಡಲು, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಬ್ಯಾಂಕಿಗೆ ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿ ರೂ ಮತ್ತು ರಾಜ್ಯ ಸರ್ಕಾರವು 100 ಕೋಟಿ ರೂ ಗಳ ಷೇರು ಬಂಡವಾಳವನ್ನು ಒದಗಿಸಲಿದೆ.
ಅಂಗನವಾಡಿ ಕಾರ್ಯಕರ್ತೆ ಗೌರವಧನ 1,500 ರೂ. ಹೆಚ್ಚಳ
ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಲಾಗಿದೆ. 20 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ 1,500 ರೂ. 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,200 ರೂ. ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ಗೌರವಧನ ಹೆಚ್ಚಳ ಮಾಡಲಾಗಿದೆ.
Karnataka Budget 2022 :ಮೀನುಗಾರರಿಗೆ 5 ಸಾವಿರ ಮನೆ ನಿರ್ಮಾಣ
ಮೀನುಗಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ 5 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುತ್ತದೆ.
ಕುರಿಗಾಹಿಗಳಿಗೆ 5 ಲಕ್ಷ ರೂ. ವಿಮಾ ಸೌಲಭ್ಯ
ಕುರಿಗಾಹಿಗಳಿಗೆ 5 ಲಕ್ಷ ರೂ. ವಿಮಾ ಸೌಲಭ್ಯ, ಆರ್ಥಿಕವಾಗಿ ಹಿಂದುಳಿದ ಕುರಿಗಾಹಿಗಳಿಗೆ ವಸತಿ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ. ಗಂಗಾ ಕಲ್ಯಾಣ ಯೋಜನೆಗೆ 111 ಕೋಟಿ ರೂ. ಮೀಸಲು, ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರಿಗೆ ಗೌರವ ಧನ 1 ಸಾವಿರ ರೂ.ಹೆಚ್ಚಳ ಮಾಡಲಾಗಿದೆ.
ಐಟಿಐ ಕಾಲೇಜುಗಳು ಮೇಲ್ಡರ್ಜೆಗೆ
ರಾಜ್ಯದಲ್ಲಿರುವ 30 ಸರಕಾರಿ ಐಟಿಐ ಸರ್ಕಾರಿ ಕಾಲೇಜುಗಳನ್ನು ಮೇಲ್ಡರ್ಜೆ ಏರಿಸಲಾಗುತ್ತದೆ. ಅಲ್ಲದೇ ಗ್ರಾಮೀಣ ಭಾಗದ ಜನರಿಗೆ ಹೃದಯ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತದೆ.
ರಾಜ್ಯದಲ್ಲಿ 7 ವಿಶ್ವವಿದ್ಯಾಲಯ ಸ್ಥಾಪನೆ
ರಾಜ್ಯದಲ್ಲಿ ಹೊಸದಾಗಿ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಹಾಗೂ ಬಾಗಲಕೋಟೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ.
ರಾಜ್ಯದಲ್ಲಿ 5 ಲಕ್ಷ ಹೊಸ ಮನೆ ನಿರ್ಮಾಣ
ರಾಜ್ಯದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಕೂಡ ಮನೆಯನ್ನು ಹೊಂದಬೇಕು ಅನ್ನುವ ಉದ್ದೇಶದಿಂದ ರಾಜ್ಯದಲ್ಲಿ ಸರ್ವರಿಗೂ ಸೂರು ಯೋಜನೆ ಅಡಿ ಹೊಸದಾಗಿ 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಸುಮಾರು 6,612 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ.
Karnataka Budget 2022 : ಮಾಶಾಸನ 800 ರೂಪಾಯಿಗೆ ಏರಿಕೆ
ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರಿಗೆ ಬಿಜೆಪಿ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಈ ಹಿಂದೆ ನೀಡಲಾಗುತ್ತಿರುವ ಮಾಶಾಸನವನ್ನು ೮೦೦ ರೂಪಾಯಿಗೆ ಏರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.
Karnataka Budget 2022 : 27 ಸಾವಿರ ಅತಿಥಿ ಶಿಕ್ಷಕರ ನೇಮಕ
ಶಿಕ್ಷಣಕ್ಕೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು, ಆಯ್ದ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಪ್ರತೀ ವರ್ಷ ಶಿಕ್ಷಕರಿಗೆ ಪುಲೆ ಪ್ರಶಸ್ತಿ ಘೋಷಣೆ, 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಅಲ್ಲಿಯವರೆಗೆ ಪಠ್ಯ ಚಟುವಟಿಕೆಗೆ ತೊಡಕಾಗದ ನಿಟ್ಟಿನಲ್ಲಿ ಕ್ರಮವಹಿಸಲು, ರಾಜ್ಯದಲ್ಲಿ 27 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
Karnataka Budget 2022 : ರೈತರಿಗಾಗಿ ಯಶಸ್ವಿನಿ ಯೋಜನೆ ಮರು ಜಾರಿ
ರೈತರ ಬಹು ವರ್ಷಗಳ ಬೇಡಿಕೆಯಾಗಿರುವ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಲಭಿಸಲಿದೆ. ಇದಕ್ಕಾಗಿ ಯಶಸ್ವಿನಿ ಯೋಜನೆಯ ಮರು ಜಾರಿಗಾಗಿ ರಾಜ್ಯ ಸರ್ಕಾರದಿಂದ 300 ಕೋಟಿ ರೂ ಒದಗಿಸಲಾಗುತ್ತಿದೆ.
ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್ : ಗೌರವಧನ 1 ಸಾವಿರ ರೂ. ಏರಿಕೆ
ಬಜೆಟ್ ನಲ್ಲಿ ಈ ಬಾರಿ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಎಂದಿ ವಿಭಾಗಿಸಲಾಗಿದ್ದು, ಮಹಿಳೆಯರಿಗೆ ವಿಶೇಷ ಯೋಜನೆಯನ್ನು ರೂಪಸಲಾಗಿದೆ. ರಾಜ್ಯದಲ್ಲಿ 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನ 1 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಲ್ಲದೇ ಮಹಿಳಾ ಬಜೆಟ್, ಚಿಣ್ಣರಿಗಾಗಿ ವಿಶೇಷ ಬಜೆಟ್ ಮಂಡನೆ ಮಾಡಲಾಗುತ್ತಿದೆ.
Karnataka Budget 2022 : ರೇಷ್ಮೆ ಬೆಳೆಗಾರರ ಪ್ರೋತ್ಸಹ ಧನ 10 ಸಾವಿರಕ್ಕೆ ಹೆಚ್ಚಳ
ರಾಜ್ಯದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಕೃಷಿ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಹೊಸದಾಗಿ 7 ಹೊಸ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕೃಷಿ ವಿವಿಗಳ ಮೂಲಕ ರೈತರ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಸಂಶೋಧನೆಗೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರೋತ್ಸಾಹ ಧನವನ್ನು10 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ರೈತರ ಅಭಿವೃದ್ಧಿಗಾಗಿ ರೈತ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 500 ಕೋಟಿ ಅನುದಾನ ಮೀಸಲಿಡಲಾಗಿದೆ. ಎರಡನೇ ಕೃಷಿ ನಿರ್ದೇಶನಲಾಯ ಸ್ಥಾಪಿಸಲಾಗಿದೆ. ರಾಜ್ಯದ ಕೆರೆಳಗ ಅಭಿವೃದ್ಧಿಗೆ 500 ಕೋಟಿ ನೀಡಲಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಿನಿ ಆಹಾರ ಪಾರ್ಕ್ ರಾಜ್ಯದ ಎಲ್ಲೆಡೆ ನಿರ್ಮಾಣ ಮಾಡಲಾಗುತ್ತಿದೆ. ತಲಾ ಒಂದು ಸಾವಿರ ಎಕರೆಯಲ್ಲಿ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುತ್ತದೆ. ಸಾವಯವ ಉತ್ಪನ್ನದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. 642 ಕೋಟಿ ರೂ ವೆಚ್ಚದಲ್ಲಿ ಪ್ರಧಾನ ಕೃಷಿ ಸಿಂಚನ ಯೋಜನೆ ಜಾರಿಗೊಳಿಸಲಾಗುತ್ತದೆ. 2ನೇ ಘಟಕ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು. ಕೊಡಗು, ಕೊಪ್ಪಳದಲ್ಲಿ ನೂತನ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ ಎಂದರು.
ಇದನ್ನೂ ಓದಿ : ನವೀನ್ ಸಾವು ಪ್ರಕರಣ : ನೀಟ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
ಇದನ್ನೂ ಓದಿ : ಬಿ.ಕೆ. ಹರಿಪ್ರಸಾದ್‌ಗೆ ತಾಕತ್ತಿದ್ದರೆ ತಾಲೂಕು ಪಂಚಾಯತ್ ಚುನಾವಣೆ ಗೆಲ್ಲಲಿ : ಕೆ.ಎಸ್.ಈಶ್ವರಪ್ಪ ಸವಾಲು
Karnataka Budget 2022 live Updates CM Basavaraj Bommai Presents his Firts Budget
Comments are closed.