ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ ರಕ್ಷಣೆ : 20 ಗಂಟೆಗಳ ಕಾರ್ಯಾಚರಣೆ ಸಕ್ಸಸ್‌, ಕೊನೆಗೂ ಫಲಿಸಿತು ಫಲ

 Sathvik Rescued from Borewell : ವಿಜಯಪುರ : ಕೊನೆಗೂ ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ. ಸತತ 20 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಫಲಕೊಟ್ಟಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಗೆ ಬಿದ್ದಿದ್ದ ಮಗು 2 ವರ್ಷದ ಮಗು ಸಾತ್ವಿಕ್‌ ಕೊನೆಗೂ ಬದುಕಿ ಬಂದಿದ್ದಾನೆ.

Sathvik Rescued from Borewell : ವಿಜಯಪುರ : ಕೊನೆಗೂ ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ. ಸತತ 20 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಫಲಕೊಟ್ಟಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಗೆ ಬಿದ್ದಿದ್ದ ಮಗು 2 ವರ್ಷದ ಮಗು ಸಾತ್ವಿಕ್‌ ಕೊನೆಗೂ ಬದುಕಿ ಬಂದಿದ್ದಾನೆ. ಇದರಿಂದ ಮಗುವಿನ ತಂದೆ ಸತೀಶ್‌ ಹಾಗೂ ತಾಯಿ ಪೂಜಾ ಆನಂದ ಬಾಷ್ಪ ಸುರಿಸಿದ್ದಾರೆ. ರಕ್ಷಣಾ ಸಿಬ್ಬಂಧಿಯ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.

Karnataka News Kannada Vijayapura 2 Year Old Boy Rescued from Borewell
Image Credit to Original Source

ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡದ ಸಿಬ್ಬಂದಿಗಳು ಸತತ 20 ಗಂಟೆಗಳ ಕಾಲ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆಯನ್ನು ನಡೆಸಿದ್ದರು. ಪೋಷಕರ ಜೊತೆಗೆ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗಳು ಸಾಥ್‌ ನೀಡಿದ್ದರ. ಕೊಳವೆ ಬಾವಿಯಿಂದ ಮಗು ಹೊರಗೆ ಬರುತ್ತಿದ್ದಂತೆಯೇ ಮಗುವನ್ನು ಅಂಬ್ಯಲೆನ್ಸ್‌ ಮೂಲಕ ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಎಂಬವರು ಕೊಳವೆ ಬಾವಿ  ಕೊರೆಯಿಸಿದ್ದರು. ಸುಮಾರು 500 ಅಡಿ ಆಳದ ವರೆಗೆ ಬಾವಿ ಕೊರೆಯಿಸಿದ್ದರೂ ಕೂಡ ನೀರು ಬಂದಿರಲಿಲ್ಲ. ಆದರೆ ಬಾವಿಯನ್ನು ಮುಚ್ಚಿರಲಿಲ್ಲ, ಕೊಳವೆ ಬಾವಿಯ ಬಳಿಗೆ ತೆರಳಿದ್ದ ಶಂಕರಪ್ಪ ಮುಜಗೊಂಡ ಅವರ ಮೊಮ್ಮಗ ಕೊಳವೆ ಬಾವಿಗೆ ಬಿದ್ದಿದ್ದಾನೆ.

ಇದನ್ನೂ ಓದಿ : ಹೊಸ ರೂಲ್ಸ್‌ ! ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಮಾರ್ಚ್‌ 25 ಡೆಡ್‌ಲೈನ್‌ : ತಪ್ಪದೇ ಈ ಕೆಲಸ ಮಾಡಿ ಮುಗಿಸಿ

ಸಾತ್ವಿಕ ಕೊಳವೆ ಬಾವಿಯಲ್ಲಿ ಸುಮಾರು 15 ರಿಂದ 20 ಅಡಿ ಆಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಬಂದ ಸಿಬ್ಬಂದಿಗಳು ಕೂಡಲೇ ಆಕ್ಸಿಜನ್‌ ವ್ಯವಸ್ಥೆಯನ್ನು ಮಾಡಿದ್ದರು. ಘಟನೆಯ ಬೆನ್ನಲ್ಲೇ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶವೇ ಮಗು ಬದುಕಿ ಬರುವಂತೆ ಪ್ರಾರ್ಥಿಸಿತ್ತು. ಕೊನೆಗೂ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ.

Karnataka News Kannada Vijayapura 2 Year Old Boy Rescued from Borewell
Image Credit to Original Source

ಮಾಧ್ಯಮಗಳ ಜೊತೆ ಮಾತನಾಡಿರುವ ಸಾತ್ವಿಕ್‌ ತಂದೆ ಸತೀಶ್‌ ಅವರು ಮಗು ಬದುಕಿ ಬಂದಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರು ಮಗುವಿನ ಆರೋಗ್ಯವನ್ನು ತಪಾಸಣೆ ನಡೆಸಿದ್ದು, ಆರೋಗ್ಯವಾಗಿದ್ದಾನೆ. ಮಗುವಿಗಾಗಿ ಪ್ರಾರ್ಥನೆ ಮಾಡಿರುವ ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ್ದರು.

ಇದನ್ನೂ ಓದಿ : ಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !

ಕರ್ನಾಟಕ ರಾಜ್ಯದಲ್ಲಿ ಕೊಳವೆ ಬಾವಿಗೆ ಮಗು ಬಿದ್ದಿರುವ ಪ್ರಕರಣ ಇದೇ ಮೊದಲೇನಲ್ಲ. ಅದ್ರಲ್ಲೂ ವಿಜಯ ಪುರ ಜಿಲ್ಲೆಯಲ್ಲಿ ೨೦೦೮ ರಿಂದ ೨೦೧೪ರ ವರೆಗೆ ಸಾಕಷ್ಟು ಕೊಳಗೆ ಬಾವಿ ಪ್ರಕರಣ ಸಂಭವಿಸಿವೆ.

ಇದನ್ನೂ ಓದಿ : ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

Karnataka News Kannada Vijayapura 2 Year Old Boy Sathvik Rescued from Borewell

Comments are closed.