Metro station flooded : ನೂತನ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಅಕಾಲಿಕ ಮಳೆ ನೀರು : ಕಾಂಗ್ರೆಸ್‌ನಿಂದ ಟೀಕೆ

ಬೆಂಗಳೂರು : (Metro station flooded) ಕಳೆದ ಎರಡು ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಳೆಯ ಅವಾಂತರಕ್ಕೆ ಎಲ್ಲೆಡೆ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಇದಲ್ಲದೇ ಕೆಲವು ದಿನಗಳ ಹಿಂದಷ್ಟೇ ಮೋದಿಯವರಿಂದ ಉದ್ಘಾಟನೆಗೊಂಡ ಮೆಟ್ರೋ ನಿಲ್ದಾಣಕ್ಕೆ ನೀರು ನುಗಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡ ಕಾಂಗ್ರೆಸ್‌ ಕಾಮಗಾರಿ ಮುಗಿಯುವ ಮುನ್ನವೇ ಉದ್ಘಾಟನೆಗೆ ಹಾತೊರೆಯುವ ಪ್ರಚಾರ ಜೀವಿಗೆ ಜನರ ಹಿತ ಮುಖ್ಯವಲ್ಲ, ಪ್ರಚಾರವೇ ಮುಖ್ಯವೆಂದು ಬಿಜೆಪಿಯನ್ನು ಟೀಕಿಸಿದೆ.

ಹೌದು ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯಾಗುತ್ತಿದೆ. ಮಳೆ ಬಂದ ಹಿನ್ನಲೆಯಲ್ಲಿ ನೀರು ಹೋಗಲು ಜಾಗವಿಲ್ಲದೇ ರಸ್ತೆಗಳು, ಅಂಗಡಿ ಮುಂಗಟ್ಟುಗಳ ಒಳಗೆ ನೀರು ನುಸುಳುತ್ತಿದೆ. ಪ್ರತಿ ಮಳೆಯ ಸಂದರ್ಭದಲ್ಲೂ ಬೆಂಗಳೂರಿಗೆ ಇದೇ ಪರಿಸ್ಥಿತಿ. ಅಂತಯೇ ಈ ಬಾರಿ ಕೂಡ ಅಕಾಲಿಕ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಪ್ರಯಾಣಿಕರು ಹರಸಾಹಸಪಡುವಂತಾಗಿದೆ. ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿರುವ ವೀಡಿಯೋಗಳನ್ನು ಜನಪ್ರಿಯ ನಾಗರಿಕರ ಆಂದೋಲನ ವೈಟ್‌ಫೀಲ್ಡ್ ರೈಸಿಂಗ್ ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ನೀರು ತುಂಬಿದೆ.

ಈ ಟ್ವೀಟ್​ಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಚುನಾವಣೆಗೆ ಮುನ್ನ ತರಾತುರಿಯಲ್ಲಿ ಮೆಟ್ರೋ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ ಅಂತೆಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಇದಕ್ಕೆ ಕಾಂಗ್ರೆಸ್‌ ಟ್ವೀಟ್‌ ಮಾಡಿದ್ದು, ಮೋದಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ ಒಂದು ಸಾಧಾರಣ ಮಳೆಗೆ ಮುಳುಗಿತ್ತು. ಇದೀಗ ಮೆಟ್ರೋ ನಿಲ್ದಾಣ ಒಂದು ಸಣ್ಣ ಮಳೆಗೆ ಮುಳುಗಿದೆ. ಕಾಮಗಾರಿ ಮುಗಿಯುವ ಮೊದಲೇ ಉದ್ಘಾಟನೆಗೆ ಹಾತೊರೆಯುವ ಪ್ರಚಾರ ಜೀವಿಗೆ ಜನರ ಹಿತ ಮುಖ್ಯವಲ್ಲ, ಪ್ರಚಾರವೇ ಮುಖ್ಯ ! ಮೆಟ್ರೋ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದ್ದು40% ಕಮಿಷನ್‌ ಗೆ ಸಾಕ್ಷಿ! ಎಂದು ಟೀಕೆ ಮಾಡಿದೆ.

ಇದಕ್ಕೆ ಪ್ರತಿಯಾಗಿ ಕೆಲವರು ಟ್ವೀಟ್‌ ಮಾಡಿದ್ದು, ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲೆಕ್ಷನ್‌ ಗೆ ಮುಂಚೆ ಸಂಪೂರ್ಣವಾಗಿ ಕಾಮಗಾರಿ ಮುಗಿಯದೇ ಓಕಳಿಪುರದ ಗ್ರೇಡ್‌ ಸೆಪರೇಟರ್‌ ಉದ್ಘಾಟಿಸಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದ್ದು, ಇನ್ನೂರ್ವರು ಕಾಂಗ್ರೆಸ್ ನಿರ್ಮಾಣ ಮಾಡಿದ ಹಲವಾರು ಸೇತುವೆಗಳು, ರಸ್ತೆಗಳು ಅಣೆಕಟ್ಟುಗಳು ಹೇಳ ಹೆಸರಿಲ್ಲದಂತೆ ಮಂಗ ಮಾಯವಾಗಿರುವಾಗ. ಒಂದೇ ದಿನ ನಿರೀಕ್ಷೆಗಿಂತ ಹತ್ತು ಪಟ್ಟು ಮಳೆ ಒಮ್ಮೆಗೆ ಬಂದಾಗ ನೆಲದ ಕೆಳಗೆ ನಿರ್ಮಿಸಿದ ರೈಲ್ವೆ ನಿಲ್ದಾಣಕ್ಕೆ ಅಧಿಕ ನೀರು ನುಗ್ಗುವುದು ಸಹಜವೇ. ಹಾಗೆಂದು ಅದೇನು ವಿಷಯವೇ ಅಲ್ಲ. ಅದರಿಂದ ಜನಕ್ಕೆ ಯಾವ ತೊಂದರೆ ಆಗಿಲ್ಲ ಎಂಬುದಾಗಿ ಬರೆದಿದ್ದಾರೆ. ಇನ್ನೋರ್ವರು ಅನಿರೀಕ್ಷಿತ ಮಳೆಗೆ ಒಂದಷ್ಟು ಸಮಸ್ಯೆಗಳಾಗುವುದು ಅತ್ಯಂತ ಸಹಜ ಎಂದಿದ್ದಾರೆ.

ಇದನ್ನೂ ಓದಿ : Aeronautical Test Range: ಚಿತ್ರದುರ್ಗದಲ್ಲಿ ಆರ್‌ಎಲ್‌ವಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ಇಸ್ರೋ

Metro station flooded: Untimely rain water entered the new metro station: Criticism from Congress

Comments are closed.