15 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ 5G ಸ್ಮಾರ್ಟ್ ಪೋನ್
ಅತ್ಯಂತ ಕಡಿಮೆ ಬೆಲೆಯ 5G ಸ್ಮಾರ್ಟ್ ಪೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದ್ರಲ್ಲೂ 15,000ರೂ. ಕ್ಕಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್ ಪೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಯಾಮ್ಸಸಂಗ್ (Samsung), ಐಕೋ (iCoo), ಪೋಕೋ (Poco), ರೆಡ್‌ಮೀ (Redmi) ಸೇರಿದಂತೆ ಹಲವು ಬ್ರ್ಯಾಂಡ್ ಮೊಬೈಲ್‌ಗಳು ಗ್ರಾಹಕರಿಗೆ ಲಭ್ಯವಿದೆ. Samsung Galaxy M14 5G Redmi 12 5G iQoo Z6 Lite 5G POCO M6 Pro 5G price
ಭಾರತದಲ್ಲೀಗ 5G ಶಕೆ ಆರಂಭವಾಗಿದೆ. ಈಗಾಗಲೇ 5G ಸ್ಮಾರ್ಟ್ ಪೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಜೊತೆಗೆ ಟೆಲಿಕಾಂ ಕಂಪೆನಿಗಳು ಕೂಡ 5G ಫ್ಲ್ಯಾನ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿವೆ. ಆದರೆ 5G ಸ್ಮಾರ್ಟ್ ಪೋನ್ ಕೊಳ್ಳುವಾಗ ಯಾವ ಮೊಬೈಲ್ ಪೋನ್ ಖರೀದಿ ಮಾಡಬೇಕು ಅನ್ನೋ ಮಾಹಿತಿ ನಿಮಗೆ ಚೆನ್ನಾಗಿ ಇರಲೇ ಬೇಕು.
ಇನ್ನು ಅತ್ಯಂತ ಕಡಿಮೆ ಬೆಲೆಯ 5G ಸ್ಮಾರ್ಟ್ ಪೋನ್‌ಗಳು (Low Price Mobile Phone) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದ್ರಲ್ಲೂ 15,000ರೂ. ಕ್ಕಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್ ಪೋನ್‌ಗಳು (Smart Phones) ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಯಾಮ್ಸಸಂಗ್ (Samsung), ಐಕೋ (iQoo), ಪೋಕೋ (Poco), ರೆಡ್‌ಮೀ (Redmi) ಸೇರಿದಂತೆ ಹಲವು ಬ್ರ್ಯಾಂಡ್ ಮೊಬೈಲ್‌ಗಳು ಗ್ರಾಹಕರಿಗೆ ಲಭ್ಯವಿದೆ. ಹಾಗಾದ್ರೆ ಯಾವ ಪೋನ್ ಖರೀದಿ ಮಾಡಬೇಕು. ಅನ್ನುವ ಮಾಹಿತಿ ಇಲ್ಲಿದೆ.
ಕಡಿಮೆ ಬೆಲೆಯ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು :
ಸ್ಮಾರ್ಟ್‌ಪೋನ್ ಕ್ಷೇತ್ರ ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸ್ಮಾರ್ಟ್ ಪೋನ್ ಬಳಕೆ ಮಾಡುವಷ್ಟರ ಮಟ್ಟಿಗೆ ಮೊಬೈಲ್ ಪೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ.
ಇದನ್ನೂ ಓದಿ : ಜಿಯೋ ಹೊಸ ಡೇಟಾ ಪ್ಲ್ಯಾನ್ : ಕೇವಲ 210 ರೂ.ಕ್ಕೆ ನಿತ್ಯವೂ 1GB ಡೇಟಾ , 28 ದಿನಗಳ ವ್ಯಾಲಿಡಿಟಿ
ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ಆಧಾರದ ಮೇಲೆಯೇ ಮೊಬೈಲ್ ಬೆಲೆಯಲ್ಲಿಯೂ ವ್ಯತ್ಯಾಸಗಳಾಗುತ್ತಿವೆ. ಆದರೆ ಕಡಿಮೆ ಬಜೆಟ್ ನಲ್ಲಿ ಹೆಚ್ಚು ಫೀಚರ್ ಗಳಿರುವ ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗಿರುವವರಿಗೆ ನಾವು ಕೆಲವೊಂದು ಪೋನ್‌ಗಳ ಕುರಿತು ಮಾಹಿತಿಯನ್ನು ನೀಡುತ್ತೇವೆ. ಪ್ರಮುಖವಾಗಿ ದೇಶದ ಬಹುತೇಕ ಕಡೆಗಳಲ್ಲಿ 5G ಸಂಪರ್ಕ ಲಭ್ಯವಿದೆ.
ಪೋಟೋ ವಿಡಿಯೋಗಳು ಹೆಚ್ಚು ಆಕರ್ಷಕವಾಗಿ ಇರಬೇಕು ಅನ್ನೋ ಕಾರಣಕ್ಕೆ ಎಲ್ಲಾ ಸ್ಮಾರ್ಟ್ ಪೋನ್‌ಗಳಲ್ಲಿ HD, ಅಲ್ಟ್ರಾ ಹೆಚ್ ಡಿ ಡಿಸ್ಪ್ಲೇಗಳನ್ನು ಅಳವಡಿಸಲಾಗುತ್ತಿದೆ. 5ಜಿ ಮೊಬೈಲ್‌ಗಳು ಬಲು ದುಬಾರಿ ಎನಿಸಿಕೊಂಡಿದ್ದರೂ ಕೂಡ ಕೇವಲ 15 ಸಾವಿರ ರೂಪಾಯಿ ಬಜೆಟ್‌ನಲ್ಲಿಯೂ 5G ಸ್ಮಾರ್ಟ್ ಫೋನ್ ಖರೀದಿಸಬಹುದಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy M14 5G ) :
ಸ್ಯಾಮ್‌ಸಂಗ್ ಕಂಪೆನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಈ ಸ್ಮಾರ್ಟ್ ಪೋನ್ ಬೆಲೆ 12,649 ರೂ. ನಿಂದ ಆರಂಭಗೊಳ್ಳುತ್ತಿದೆ. ಅದ್ರಲ್ಲೂ ಆನ್‌ಲೈನ್ ಖರೀದಿ ಮಾಡುವವರಿಗೆ ಇನ್ನಷ್ಟು ಆಫರ್ ಗಳು ಕೂಡ ಲಭ್ಯವಿದೆ. 5nm ಪ್ರೊಸೆಸರ್, 6000 mAh, 50MP ಟ್ರಿಪಲ್ ಕ್ಯಾಮೆರಾ, 16.72cm FHD+ಡಿಸ್ಪ್ಲೇ ಒಳಗೊಂಡಿದೆ. ಜೊತೆಗೆ ವಾಯ್ಸ್ ಪೋಕಸ್, ನಾಲ್ಕು ವರ್ಷಗಳ ಸೆಕ್ಯುರಿಟಿ ಆಯ್ಕೆಯ ಜೊತೆಗೆ ಎರಡು ಬಾರಿಯ ಓಎಸ್ ಅಪ್ ಗ್ರೇಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರೆಡ್ ಮೀ (Redmi 12 5G) ಸ್ಮಾರ್ಟ್‌ಫೋನ್ :
ಇನ್ನು ಚೀನಾ ಮೂಲದ ಖ್ಯಾತ ಮೊಬೈಲ್ ಕಂಪೆನಿಯಾಗಿರುವ ರೆಡ್ ಮೀ 5G ಮೊಬೈಲ್ ಅನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿದೆ. ರೆಡ್ ಮೀ (Redmi 12 5G) ಮೊಬೈಲ್ ಬೆಲೆ 15 ಸಾವಿರ. ಆದರೆ ಅಮೇಜಾನ್ ಇದೇ ಮೊಬೈಲ್‌ನ್ನು ಕೇವಲ 11,999 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಈ ಮೊಬೈಲ್‌ನಲ್ಲಿ 50MP ಕ್ಯಾಮೆರಾ, 5000 mAh ಬ್ಯಾಟರಿ ಸಾಮರ್ಥ್ಯ, 16 ರಿಂದ 256GB ವರೆಗೆ ಹೆಚ್ಚಿಸುವ RAM ಆಯ್ಕೆಯ ಜೊತೆಗೆ ಗೊರಿಲ್ಲಾ ಗ್ಲಾಸ್ ಒಳಗೊಂಡಿದೆ. 4nm ಸ್ನಾಪ್‌ಡ್ರಾಗನ್ 4 Gen 2 ನೊಂದಿಗೆ ಭಾರತದಲ್ಲಿನ ಮೊದಲ ಮೊಬೈಲ್ ಆಗಿದ್ದು, 17.2cm ಡಿಸ್ಪ್ಲೇ ಲಭ್ಯವಿದೆ.
ಇದನ್ನೂ ಓದಿ : Xiaomi Redmi Note 13 Pro :ಅತ್ಯಂತ ಕಡಿಮೆ ಬೆಲೆಗೆ 200 MP ಕ್ಯಾಮರಾ ಪೋನ್ : Iphone ಮೀರಿಸುತ್ತೆ ರೆಡ್‌ಮೀ 13 ಪ್ರೋ
ಐಕ್ಯೂ (iQoo Z6 Lite 5G )
ಸ್ಯಾಮ್‌ಸಂಗ್ ರೆಡ್ ಮೀ ಮಾತ್ರವಲ್ಲ ಐಕ್ಯೂ ಕಂಪೆನಿ ಈಗಾಗಲೇ ಅತ್ಯಂತ ಸ್ಟೈಲಿಶ್ ಆಗಿರುವ ಸ್ಮಾರ್ಟ್‌ಪೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಐಕ್ಯೂ ಕಂಪೆನಿಯ iQoo Z6 Lite 5G ಬೆಲೆ 13,999 ರೂಪಾಯಿಯಿಂದ ಆರಂಭಗೊಳ್ಳುತ್ತದೆ. 6GB+128GB RAM 8GB+128GB RAM ಸಂಗ್ರಹಣೆಯ ಸಾಮರ್ಥ್ಯದ ಜೊತೆಗೆ 50MP ಕ್ಯಾಮೆರಾ, ಆಂಡ್ರಾಯ್ಡ್ 12 ಫನ್ ಟಚ್ ಓಎಸ್ ಒಳಗೊಂಡಿದೆ.
ಪ್ರಪಂಚದ ಮೊದಲ Snapdragon 4 Gen 1 ಅನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್ ಪೋನ್ ನಲ್ಲಿನ RAM ಅನ್ನು 12GB ವರೆಗೆ ಹೆಚ್ಚಿಸಬಹುದಾಗಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.
ಇದನ್ನೂ ಓದಿ : Vivo Smartphones : ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲು ರೆಡಿಯಾಯ್ತು ವಿವೋ V29E : ಏನಿದರ ವೈಶಿಷ್ಟ್ಯತೆ
ಪೋಕೋ ( POCO M6 Pro 5G )
ರೆಡ್ ಮೀ ಕಂಪೆನಿ ಕೆಲವೊಂದು ಮೊಬೈಲ್ ಗಳನ್ನು ಪೋಕೋ ಹೆಸರಲ್ಲಿ ರಿ ಬ್ರ್ಯಾಂಡ್ ಮಾಡುತ್ತಿದೆ. ಇದೀಗ ಪೋಕೋ ಕೂಡ 5G ಸ್ಮಾರ್ಟ್ ಪೋನ್ ಪರಿಚಯಿಸಿದೆ. ಈ ಪೋನ್‌ನ ಬೆಲೆ 10,999 ರೂ.ನಿಂದ ಆರಂಭಗೊಳ್ಳುತ್ತಿದೆ. Qualcomm Snapdragon 4 Gen 2 Processor, 4GB+64GB RAM+Storage ಒಳಗೊಂಡಿದೆ.
ಆದರೆ 6GGB+128GB RAM+ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಪೋನ್ ಬೆಲೆ12,999 ರಿಂದ ಆರಂಭವಾಗುತ್ತದೆ. ಇನ್ನು ಪೋಕೋ ಕಂಪೆನಿಯ ಈ ಫೋನ್ 50MP+2MP ಬ್ಯಾಕ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಒಳಗೊಂಡಿದೆ.
5G Mobile Phones Under 15000rs in india POCO samsung Redmi IQoo. Samsung Galaxy M14 5G Redmi 12 5G iQoo Z6 Lite 5G POCO M6 Pro 5G price
Comments are closed.