Google Doodle: ಗೂಗಲ್‌ ಡೂಡಲ್‌ ಮುಖಪುಟದಲ್ಲಿ ಹೊಸ ವರ್ಷಕ್ಕೆ ಹೊಸ ಆಕರ್ಷಣೆ

(Google Doodle) ವಿಶೇಷ ದಿನಗಳನ್ನು ಆಚರಿಸುವ ಉದ್ದೇಶದಿಂದ ಗೂಗಲ್‌ ಡೂಡಲ್‌ ನಲ್ಲಿ ಬದಲಾವಣೆಗಳನ್ನು ತರಲಾಗುತ್ತದೆ ಅಲ್ಲದೇ ಆ ದಿನಕ್ಕೆ ಸಂಬಂಧಿಸಿದಂತೆ ಆಕರ್ಷಕ ಚಿತ್ರಣದೊಂದಿಗೆ ಗೂಗಲ್‌ ಡೂಡಲ್‌ ನ ಮುಖಪುಟದಲ್ಲಿ ಲೋಗೊ ಬದಲಾವಣೆಯಾಗುತ್ತದೆ. ಇದೀಗ ಹೊಸ ವರ್ಷವನ್ನು ಗೌರವಾರ್ಥವಾಗಿ ಬರಮಾಡಿಕೊಳ್ಳುವ ಸಲುವಾಗಿ ನ್ಯೂ ಇಯರ್‌ ಗೂಗಲ್‌ ಡೂಡಲ್‌ ಅನ್ನು ಹೊಸ ಆಕರ್ಷಣೆಯೊಂದಿಗೆ ರಚಿಸಲಾಗಿದೆ.

ಇನ್ನೇನು ಹೊಸ ವರ್ಷಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಈ ಸಲುವಾಗಿ ಈ ಬಾರಿ ಕೂಡ ಹೊಸ ವರ್ಷಾಚರಣೆಗೆ ಗೂಗಲ್‌ ಡೂಡಲ್‌ (Google Doodle) ಲೋಗೊದಲ್ಲಿ ಬದಲಾವಣೆಯಾಗಿದ್ದು, ವಿನ್ಯಾಸ ಬಹಳ ಆಕರ್ಷಕವಾಗಿದೆ ಹಾಗೂ ಅದ್ದೂರಿಯಾಗಿದೆ. ಗೂಗಲ್‌, ಗೂಗಲ್‌ ಡೂಡಲ್‌ ಮುಖಪುಟದಲ್ಲಿ ಬದಲಾವಣೆ ಮಾಡುವ ಮೂಲಕ ಜನತೆಗೆ ಹೊಸ ವರ್ಷದ ಆಚರಣೆಯ ಶುಭಾಶಯಗಳನ್ನು ತಿಳಿಸುತ್ತಿದೆ.

೧೯೯೮ರಲ್ಲಿ ಬರ್ನಿಂಗ್ ಮ್ಯಾನ್ ಫೆಸ್ಟಿವಲ್ನ ಗೌರವಾರ್ಥವಾಗಿ ಮೊದಲ ಗೂಗಲ್ ಡೂಡಲ್ (Google Doodle) ಅನ್ನು ರಚಿಸಲಾಯಿತು. ಆರಂಭದಲ್ಲಿ, ಡೂಡಲ್ಸ್ ಆನಿಮೇಟೆಡ್ ಆಗಿರಲಿಲ್ಲ. ಬದಲಾಗಿ ವಿಷಯವನ್ನು ವಿವರಿಸುವ ಅಥವಾ ರಜಾದಿನದ ಶುಭಾಶಯವನ್ನು ವ್ಯಕ್ತಪಡಿಸುವ ಹೊವೆರ್ ಟೆಕ್ಸ್ಟ್ ನೊಂದಿಗೆ ಸರಳವಾದ ಚಿತ್ರಗಳಲ್ಲಿ ಇದ್ದವು. 2010 ರ ಆರಂಭದ ವೇಳೆಗೆ ಡ್ಯೂಡಲ್ಸ್, ಆವರ್ತನ ಮತ್ತು ಸಂಕೀರ್ಣತೆ ಎರಡರಲ್ಲೂ ಹೆಚ್ಚಾಯಿತು. 2010 ರ ಜನವರಿಯಲ್ಲಿ ಸರ್ ಐಸಾಕ್ ನ್ಯೂಟನ್‌ ಅವರನ್ನು ಗೌರವಿಸುವ ಸಲುವಾಗಿ ಮೊದಲ ಅನಿಮೇಟೆಡ್ ಡೂಡಲ್‌ ಅನ್ನು ಪ್ರಕಟಿಸಲಾಯಿತು.

ರಜಾದಿನಗಳು ಅಥವಾ ಇತರ ಅಚರಣೆಗಳಿಗಾಗಿ ಅನೇಕ ಡೂಡಲ್‌ ಗಳು ವಾರ್ಷಿಕ ಆಧಾರದ ಮೇಲೆ ಪುನರಾವರ್ತಿಸುತ್ತವೆ. ಗೂಗಲ್‌ ಡೂಡಲ್‌ ಲೋಗೊ ಈ ಕೆಳಗಿನ ದಿನಗಳಂದು ತಾತ್ಕಾಲಿಕವಾಗಿ ಬದಲಾವಣೆಗಳನ್ನು ಹೊಂದುತ್ತದೆ.

ಇದನ್ನೂ ಓದಿ : POCO C50 : ಹೊಸ ವರ್ಷದ ಆರಂಭದಲ್ಲೇ ಬಿಡುಗಡೆಯಾಗಲಿದೆ ಪೊಕೊ C50 ಸ್ಮಾರ್ಟ್‌ಫೋನ್‌

ಇದನ್ನೂ ಓದಿ : Twitter Data leak: ಸುಂದರ್ ಪಿಚೈ, ಸಲ್ಮಾನ್ ಖಾನ್ ಸೇರಿ 40 ಕೋಟಿ ಟ್ವಿಟರ್ ಅಕೌಂಟ್ ಹ್ಯಾಕ್.. ದತ್ತಾಂಶ ಮಾರಾಟಕ್ಕೆ..!?

  • ಹೊಸ ವರ್ಷಾಚರಣೆ
  • ಮಾರ್ಟಿನ್‌ ಲೂಥರ್‌ ಕಿಂಗ್‌, ಜೂನಿಯರ್‌ ಡೇ
  • ಯುಗಾದಿ
  • ಪ್ರೇಮಿಗಳ ದಿನ
  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
  • ಸೇಂಟ್‌ ಪ್ಯಾಟ್ರಿಕ್‌ ಡೇ
  • ಭೂಮಿಯ ದಿನ
  • ತಾಯಂದಿರ ದಿನ
  • ತಂದೆಯಂದಿರ ದಿನ
  • ಸ್ವಾತಂತ್ರ್ಯ ದಿನ
  • ಕ್ರಿಸ್ಮಸ್‌
  • ಹೊಸ ವರ್ಷದ ಹಿಂದಿನ ದಿನ

ಇದನ್ನೂ ಓದಿ : Jio Happy New year Plan : ಹೊಸ ವರ್ಷಕ್ಕೆ ಹೊಸ ಪ್ಲಾನ್‌ ಪರಿಚಯಿಸಿದ ಜಿಯೋ; ಅನ್‌ಲಿಮಿಟೆಡ್‌ ಕರೆ, 2.5 GB ಡಾಟಾ…

ಇದನ್ನೂ ಓದಿ : Upcoming 5G Smartphones : 2023 ರಲ್ಲಿ ಬಿಡುಗಡೆಯಾಗಲಿರುವ 5G ಸ್ಮಾರ್ಟ್‌ಫೋನ್‌ಗಳು

(Google Doodle) Now in honor of the New Year, New Year Google Doodle has been created with a new charm.

Comments are closed.