ಕೋಕೊ–ಕೋಲಾ (Coco-Cola) ತನ್ನ ಹೊಸ ಸ್ಮಾರ್ಟ್‌ಫೋನ್ (Smartphone) ಅನ್ನು ರಿಯಲ್‌ಮಿ (Realme) ಯ ಕೊಲಾಬರೇಷನ್‌ನೊಂದಿಗೆ ಮಾರುಕಟ್ಟೆಗೆ ತರಲಿದೆ. ಇದನ್ನು ರಿಯಲ್‌ಮಿ 10 ಪ್ರೋ 5G ಸ್ಮಾರ್ಟ್‌ಫೋನ್‌ನ ಆವೃತ್ತಿಯಲ್ಲಿ (Realme 10 Pro 5G Coco-Cola Edition) ಬಿಡುಗಡೆ ಮಾಡಲಿದೆ. ಈಗಾಗಲೇ ರಿಯಲ್‌ಮಿ ಈ ರ್ಟ್‌ಫೋನ್‌ನ ಪ್ರೀ-ಬುಕಿಂಗ್ ಅನ್ನು ಪ್ರಾರಂಭಿಸಿದೆ. ವಿಶೇಷವೆಂದರೆ ಈ ಪ್ರಿ ಬುಕ್ಕಿಂಗ್ ಸಂಪೂರ್ಣ ಫ್ರಿ ಯಾಗಿದೆ. ಅಂದರೆ ಈ ಫೋನ್ ಅನ್ನು ಉಚಿತವಾಗಿ ಬುಕ್ ಮಾಡಬಹುದಾಗಿದೆ. ಜೊತೆಗೆ ರಿಯಲ್‌ಮಿ 10 ಪ್ರೋ 5G ಕೋಕೊ–ಕೋಲಾ ಎಡಿಷನ್ ಮೊಬೈಲ್ ಅನ್ನು ಪ್ರೀ–ಬುಕಿಂಗ್ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಈ ಪ್ರೀ–ಬುಕಿಂಗ್ ಅನ್ನು ಫೆಬ್ರವರಿ 10ನೇ ತಾರೀಖ 00:00 ವರೆಗೆ ಮಾಡಬಹುದಾಗಿದೆ.
ರಿಯಲ್‌ಮಿ ಮೊದಲ 50,000 ಮುಂಗಡ ಬುಕಿಂಗ್ ಗ್ರಾಹಕರಿಗೆ 1000 ಕೂಪನ್‌ಗಳನ್ನು ನೀಡುತ್ತಿದ್ದು ಅವರಿಗೆ 200 ರೂ. ವರೆಗೆ ರಿಯಾಯಿತಿ ನೀಡಲಾಗುವುದು. ಅಂದರೆ 50,000 ದಲ್ಲಿ ಯಾವುದೇ 1000 ಜನರಿಗೆ ಕಂಪನಿಯು ಈ ಕೂಪನ್‌ಗಳನ್ನು ನೀಡುತ್ತದೆ.
ನಂತರ 1 ಲಕ್ಷದ ಮುಂಗಡ ಬುಕಿಂಗ್ ನಲ್ಲಿ 20 ಗ್ರಾಹಕರಿಗೆ W ಬ್ಲೂಟೂತ್ ಸ್ಪೀಕರ್‌ಗಳನ್ನು ನೀಡಲಾಗುತ್ತದೆ. ಅದೇ ರೀತಿ, 1.5 ಲಕ್ಷ ಬುಕಿಂಗ್‌ನಲ್ಲಿ 10 ಗ್ರಾಹಕರಿಗೆ ಮಿಡ್ ಎಂ-10 ಟೂತ್‌ಬ್ರಶ್, 2 ಲಕ್ಷ ಬುಕಿಂಗ್‌ನಲ್ಲಿ 5 ಗ್ರಾಹಕರಿಗೆ ಸ್ಮಾರ್ಟ್‌ವಾಚ್, 2.5 ಲಕ್ಷ ಬುಕಿಂಗ್‌ನಲ್ಲಿ ರಿಯಲ್‌ಮಿ ಕೋಕಾ-ಕೋಲಾ ಫಿಗರ್, ರಿಯಲ್‌ಮಿ 10 ಪ್ರೊ ಕೋಕಾ-ಕೋಲಾ 3 ಲಕ್ಷ ಬುಕಿಂಗ್‌ನಲ್ಲಿ ಒಬ್ಬ ಅದೃಷ್ಟಶಾಲಿ ಗ್ರಾಹಕರಿಗೆ ಎಡಿಷನ್ ಡಿಲಕ್ಸ್ ಬಾಕ್ಸ್ ಸೆಟ್ ಲಭ್ಯವಿರುತ್ತದೆ.
ಇದನ್ನು ಕಂಪನಿಯು ಫೆಬ್ರವರಿ 10ರ ಲಾಂಚಿಂಗ್ ಈವೆಂಟ್‌ನಲ್ಲಿ ಉಡುಗೊರೆಗಳನ್ನು ಘೋಷಿಸಲಿದೆ. ಇದನ್ನು ಆನ್‌ಲೈನ್ ಮಾಧ್ಯಮ ಮೂಲಕ ನೋಬಹುದಾಗಿದೆ.
ರಿಯಲ್‌ಮಿ 10 ಪ್ರೋ 5G ಕೋಕಾ-ಕೋಲಾ ಫೋನ್ ವೈಶಿಷ್ಟ್ಯತೆಗಳು:
ಕೋಕಾ-ಕೋಲಾ ಸ್ಮಾರ್ಟ್‌ಫೋನ್ ಅಂದರೆ ರಿಯಲ್‌ಮಿ 10 ಪ್ರೋ 5G ಫೋನ್ 6.7-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿರಲಿದೆ. ಅದು 120hz ನ ರಿಫ್ರೆಶ್ ದರವನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ 6nm ಸ್ನಾಪ್‌ಡ್ರಾಗನ್ 695 5G SoC ಯಿಂದ ಶಕ್ತಿ ಪಡೆಯಲಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಪ್ರೊಸೆಸ್ಸರ್ ಅನ್ನು ಆಡ್ರಿನೊ A619 GPU ಜೊತೆ ಅಳವಡಿಸಲಾಗಿದೆ. ಈ ಮೊಬೈಲ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 108 ಮೆಗಾಪಿಕ್ಸೆಲ್ ನ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆಟಪ್ ಇರಲಿದೆ.
ಇನ್ನು ಈ ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ. ಮತ್ತು 33W ಸೂಪರ್ VOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ ಹಾಗೂ 50% ಬ್ಯಾಟರಿ ಚಾರ್ಜ್ ಆಗಲು ಇದು ಕೇವಲ 20 ನಿಮಷ ತೆಗೆದುಕೊಳ್ಳಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ : Portronics Harmonics Z5 neckband : ನೆಕ್‌ಬ್ಯಾಂಡ್ ಖರೀದಿಸಬೇಕಾ? ಇಲ್ಲಿದೆ ನೋಡಿ ಹೊಸ ವಿನ್ಯಾಸದ ನೆಕ್‌ಬ್ಯಾಂಡ್
(Realme 10 Pro 5G Coco-Cola Edition launch on February 10 and available for pre booking and get exciting gifts)