ಕಳೆದ ತಿಂಗಳಷ್ಟೇ ಆಂಡ್ರಾಯ್ಡ್ (Android) ಬಳಕೆದಾರರಿಗಾಗಿ ವಾಟ್ಸಾಪ್ (WhatsApp) ವಾಯ್ಸ್ ನೋಟ್ (Voice Note) ನಂತಹ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಅದರ ಮೂಲಕ ಆಂಡ್ರಾಯ್ಡ್ ಬಳಕೆದಾರರು ಸ್ಟೇಟಸ್ (Status) ನಲ್ಲಿ ವೈಯ್ಸ್ ನೋಟ್ಸ್‌ಗಳನ್ನು ಹಾಕಬಹುದು. ಈ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಸ್ಟೇಟಸ್‌ನಲ್ಲಿ ಧ್ವನಿಯನ್ನು ರೆಕಾರ್ಡ್ (Voice Record) ಮಾಡಬಹುದು ಮತ್ತು ಅಪ್‌ಲೋಡ್ ಮಾಡಬಹುದು ಮತ್ತು ಬಳಕೆದಾರರ ಸಂಪರ್ಕಗಳು ಇದನ್ನು ಆಲಿಸಬಹುದು. ಆದರೆ ಆ ಸಮಯದಲ್ಲಿ, ವಾಟ್ಸ್‌ಅಪ್ iOS (iPhone) ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಿರಲಿಲ್ಲ. ಆದರೆ ಈಗ ಅದು iOS ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಹೊರತಂದಿದೆ. ಈ ಹೊಸ ವೈಶಿಷ್ಟ್ಯ ಬಳಸಲು ಏನು ಮಾಡಬೇಕು ಇಲ್ಲಿದೆ ಓದಿ.
ಈ ಹೊಸ ವೈಶಿಷ್ಟ್ಯಕ್ಕಾಗಿ ಏನು ಮಾಡಬೇಕು ?
iOS ಬಳಕೆದಾರರಿಗೆ ವಾಟ್ಸ್‌ಅಪ್‌ನಲ್ಲಿ ವಾಯ್ಸ್ ಸ್ಟೇಟಸ್ ವೈಶಿಷ್ಟ್ಯವನ್ನು ಅದರ ಹೊಸ ಆವೃತ್ತಿ 23.5.77 ನೊಂದಿಗೆ ಹೊರತರಲಾಗಿದೆ. ‘ವಾಯ್ಸ್ ಸ್ಟೇಟಸ್’ ವೈಶಿಷ್ಟ್ಯವು ಬಳಕೆದಾರರಿಗೆ ವಾಯ್ಸ್ ನೋಟ್ ರೆಕಾರ್ಡ್ ಮಾಡಲು ಮತ್ತು ಅದನ್ನು ಸಂಪರ್ಕದೊಂದಿಗೆ ಹಂಚಿಕೊಳ್ಳಲು ಅನುಮತಿಸುತ್ತದೆ. ನಿಮಗೆ ಇನ್ನೂ ಈ ಅಪ್ಡೇಟ್ ಸ್ವೀಕರಿಸದಿದ್ದರೆ, ಹೊಸ ಅಪ್ಡೇಟ್ ಪಡೆಯಲು, Apple ನ ಆಪ್ ಸ್ಟೋರ್‌ಗೆ ಹೋಗಿ ಮತ್ತು ವಾಟ್ಸ್‌ಅಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. ವಾಟ್ಸ್‌ಅಪ್ ಅನ್ನು ನವೀಕರಿಸಿದ ತಕ್ಷಣ ‘ವಾಯ್ಸ್ ಸ್ಟೇಟಸ್’ ವೈಶಿಷ್ಟ್ಯವನ್ನು ಪಡೆಯುತ್ತೀರಿ. ಈ ವೈಶಿಷ್ಟ್ಯವನ್ನು ಬಳಸಲು ಈ ಕೆಳಗೆ ಹೇಳಿದಂತೆ ಮಾಡಿ.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣ : ಜನವರಿ 2024ಕ್ಕೆ ಲೋಕಾರ್ಪಣೆ
iOS ನ ವಾಟ್ಸ್‌ಅಪ್‌ನಲ್ಲಿ ವಾಯ್ಸ್‌ನೋಟ್ ಸ್ಟೇಟಸ್ ಹಂಚಿಕೊಳ್ಳಲು ಹೀಗೆ ಮಾಡಿ:
- ನಿಮ್ಮ ಐಫೋನ್‌ನಲ್ಲಿ ವಾಟ್ಸ್‌ಅಪ್ ತೆರೆಯಿರಿ.
- ಸ್ಕ್ರೀನ್‌ನ ಕೆಳಭಾಗದಲ್ಲಿರುವ ಸ್ಟೇಟಸ್ ಟ್ಯಾಬ್‌ಗೆ ಹೋಗಿ.
- ಈಗ ಪರದೆಯ ಬಲ ಮೂಲೆಯಲ್ಲಿರುವ ಪೆನ್ಸಿಲ್ ಐಕಾನ್‌ನೊಂದಿಗೆ ಫ್ಲೋಟಿಂಗ್ ಬಟನ್ ಮೇಲೆ ಟ್ಯಾಪ್ ಮಾಡಿ.
- ಈಗ ವಾಯ್ಸ್ ಮೆಸ್ಸೇಜ್ ರೆಕಾರ್ಡ್ ಮಾಡಲು ಪ್ರಾರಂಭಿಸಬಹುದು. ಆದಾಗ್ಯೂ, ಇದಕ್ಕಾಗಿ ಮೈಕ್ರೊಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಮೈಕ್ರೊಫೋನ್ ಐಕಾನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನೀವು 30 ಸೆಕೆಂಡುಗಳವರೆಗೆ ರೆಕಾರ್ಡ್ ಮಾಡಬಹುದು. - ರೆಕಾರ್ಡ್ ಮಾಡಿದ ನಂತರ, ಮೈಕ್ರೊಫೋನ್ ಐಕಾನ್ ಅನ್ನು ಬಿಡಿ.
- ರೆಕಾರ್ಡಿಂಗ್ ಅನ್ನು ನೀವು ಆಲಿಸಿದ ಮತ್ತು ಪರಿಶೀಲಿಸಿದ ನಂತರ, ನಿಮ್ಮ ರೆಕಾರ್ಡಿಂಗ್ ಅನ್ನು ಸ್ಟೇಟಸ್ ಅಪ್ಡೇಟ್ ಮಾಡಲು ಸೆಂಡ್ ಐಕಾನ್ ಅನ್ನು ಟ್ಯಾಪ್ ಮಾಡಿ.
- ಇದಾದ ನಂತರ, ನಿಮ್ಮ ವಾಟ್ಸಾಪ್ ಕಾಂಟ್ಯಾಕ್ಟ್ಸ್ ಗಳಿಗೆ ನಿಮ್ಮ ಧ್ವನಿ ಸಂದೇಶವು ಸ್ಟೇಟಸ್ ಅಪ್ಡೇಟ್ ಆಗಿ ಗೋಚರಿಸುತ್ತದೆ.
ಇದನ್ನೂ ಓದಿ : POCO X5 5G : 48MP ಕ್ಯಾಮೆರಾ, 33W ಫಾಸ್ಟ್ ಚಾರ್ಜಿಂಗ್‌ನ ಪೋಕೋ X5 5G ಸ್ಮಾರ್ಟ್‌ಫೋನ್ ಅನಾವರಣ
(WhatsApp new feature for ios users. How to upload voice notes on status?)