ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿ ಶಿಯೋಮಿ (Xiaomi) ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC-2023) ನಲ್ಲಿ ಶಿಯೋಮಿ 13 (Xiaomi 13) ಸರಣಿಯನ್ನು ಬಿಡುಗಡೆ ಮಾಡಿದೆ. ಅದರ ಅಡಿಯಲ್ಲಿ, ಕಂಪನಿಯು ಮಾರುಕಟ್ಟೆಯಲ್ಲಿ ಶಿಯೋಮಿ 13 ಪ್ರೋ (XIAOMI 13 PRO) ಅನ್ನು ಸಹ ಬಿಡುಗಡೆ ಮಾಡಿದೆ. ಅದರ ಮಾರಾಟ ಇಂದಿನಿಂದ ಪ್ರಾರಂಭವಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿ 50 ಮೆಗಾಪಿಕ್ಸೆಲ್ಗಳ 3 ಕ್ಯಾಮೆರಾಗಳಿವೆ. 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 79,999 ರೂಪಾಯಿಗಳು. ಆದರೆ ನೀವು ಈ ಫೋನ್ನಲ್ಲಿ 20,000 ರೂಪಾಯಿಗಳವರೆಗೆ ಉಳಿಸಬಹುದಾಗಿದೆ. ಹೇಗೆ ಗೊತ್ತು ಇಲ್ಲಿದೆ ಓದಿ.
ಶಿಯೋಮಿ 13 ಪ್ರೋ ವೈಶಿಷ್ಟ್ಯಗಳು :
6.7 ಇಂಚಿನ 2K OLED ಡಿಸ್ಪ್ಲೇ ಹೊಂದಿರುವ ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ 120hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಫೋನ್ Snapdragon 8 Gen 2 ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಇದರಲ್ಲಿ ಹಿಂಭಾಗದಲ್ಲಿ LEICA ಯ 50 ಮೆಗಾಪಿಕ್ಸೆಲ್ಗಳ 3 ಕ್ಯಾಮೆರಾಗಳಿವೆ ಮತ್ತು ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಇದರ ಬ್ಯಾಟರಿ ಬಗ್ಗೆ ಹೇಳುವುದಾದರೆ, 120W ವೇಗದ ಚಾರ್ಜಿಂಗ್ ಬೆಂಬಲಿಸುವ 4820 mAh ಬ್ಯಾಟರಿಯೊಂದಿಗೆ ಬರಲಿದೆ. ಕಂಪನಿ ಹೇಳುವ ಪ್ರಕಾರ ಈ ಫೋನ್ 100% ಚಾರ್ಜ್ ಆಗಲು ಕೇವಲ 19 ನಿಮಿಷ ತೆಗೆದುಕೊಳ್ಳಲಿದೆ. ಈ ಫೋನ್ನ ಖರೀದಿಯಲ್ಲಿ ಗ್ರಾಹಕರಿಗೆ 50W ನ ವೈರ್ಲೆಸ್ ಟರ್ಬೋಚಾರ್ಜಿಂಗ್ ದೊರೆಯಲಿದೆ.
ಬೆಲೆ ಮತ್ತು ಲಭ್ಯತೆ :
ಶಿಯೋಮಿ 13 ಪ್ರೋ ಅನ್ನು MI ಅಧಿಕೃತ ವೈಬ್ಸೈಟ್ನಿಂದ ಖರೀದಿಸಬಹುದಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ನ ಬೆಲೆಯನ್ನು 79,999 ರೂ. ಎಂದು ಪಟ್ಟಿಮಾಡಲಾಗಿದೆ. ಆದರೆ, ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ 10,000 ರೂ. ಉಳಿಸಬಹುದು. ಜೊತೆಗೆ ಎಕ್ಸ್ಚೇಂಜ್ ಆಫರ್ನ ಅಡಿಯಲ್ಲಿ 12,000 ರೂ. ಗಳ ರಿಯಾಯಿತಿ ಪಡೆಯಬಹುದಾಗಿದೆ. ಕಂಪನಿಯು ಎಕ್ಸ್ ಚೇಂಜ್ ಆಫರ್ನಲ್ಲಿ 8,000 ರೂಪಾಯಿ ರಿಯಾಯಿತಿ ನೀಡುತ್ತದೆ. ಆದರೆ ರೆಡ್ಮಿ (Redmi) ಮತ್ತು ಶಿಯೋಮಿ (Xiaomi) ಫೋನ್ ಗಳನ್ನು ಮಾತ್ರ ಎಕ್ಸ್ ಚೇಂಜ್ ಮಾಡುವವರಿಗೆ 4,000 ರೂಪಾಯಿಗಳ ಹೆಚ್ಚುವರಿ ಕೂಪನ್ ನೀಡಲಾಗುತ್ತಿದೆ. ಬೇರೆ ಫೋನ್ಗಳ ಎಕ್ಸ್ಚೇಂಜ್ನಲ್ಲಿ ಕೇವಲ 8,000 ರೂ. ರಿಯಾಯಿತಿ ಮಾತ್ರ ಇರಲಿದೆ ಎಂಬುದನ್ನು ಗಮನಿಸಿ. ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದಾಗ ಮಾತ್ರ ವಿನಿಮಯ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಆಫರ್ಗಳ ಲಾಭವನ್ನು ಪಡೆದಾಗ, ಮೊದಲ ದಿನದಲ್ಲಿ 59,999 ರೂಗಳಿಗೆ ಫೋನ್ ಅನ್ನು ಖರೀದಿಸಬಹುದು. ಆದರೆ ಸಾಮಾನ್ಯ ಬಳಕೆದಾರರು ಈ ಫೋನ್ ಅನ್ನು ರೂ 79,999 ಕ್ಕೆ ಖರೀದಿಸಬೇಕಾಗುತ್ತದೆ.
ಮೊದಲ 1000 ಗ್ರಾಹಕರಿಗೆ ಸಿಗಲಿದೆ ಗಿಫ್ಟ್:
ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ ಅನ್ನು ಆರ್ಡರ್ ಮಾಡುವ ಮೊದಲ 1000 ಗ್ರಾಹಕರಿಗೆ ಕಂಪನಿಯು ಉಚಿತ ಶಿಯೋಮಿ 13 ಪ್ರೋ ಮರ್ಚಂಡೈಸ್ ಬಾಕ್ಸ್ ಅನ್ನು ನೀಡುತ್ತದೆ. ಈ ಫೋನ್ ಅನ್ನು ಗ್ರಾಹಕರು ಬ್ಲಾಕ್ ಮತ್ತು ವೈಟ್ ಬಣ್ಣದಲ್ಲಿ ಆರ್ಡರ್ ಮಾಡಬಹುದಾಗಿದೆ.
ಇದನ್ನೂ ಓದಿ : OnePlus 11 R 5G ಸ್ಮಾರ್ಟ್ಫೋನ್ನ ಮಾರಾಟ ಆರಂಭ; ಪಡೆದುಕೊಳ್ಳಿ 9,000 ರೂ.ಗಳ ವರೆಗಿನ ಭರ್ಜರಿ ಆಫರ್
(XIAOMI 13 PRO smartphone early sale starts. Get discount up to 20,000. Know the price, specifications and benefits)