Rajamouli And Mahesh Babu : ಮಹೇಶ್ ಬಾಬು ಸಿನಿಮಾಗೆ ಕಥೆ ಮಾಡಲು ಒಂದು ವರ್ಷಬೇಕು! ಗಾಳಿಸುದ್ದಿಗೆ ಬ್ರೆಕ್‌ ಹಾಕಿದ ರಾಜಮೌಳಿ

ದೇಶದಾದ್ಯಂತ ಆರ್ ಆರ್ ಆರ್(RRR) ಸಿನಿಮಾದ ಗೆಲುವಿನ ಅಲೆ ಅಪ್ಪಳಿಸುತ್ತಿರುವಾಗಲೇ ನಿರ್ದೇಶಕ ರಾಜಮೌಳಿ(Rajamouli And Mahesh Babu)ಯ ಮುಂದಿನ ಸಿನಿಮಾ ಯಾವುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಈ ಬಗ್ಗೆ ರಾಜಮೌಳಿ ತಲೆಕೆಡಿಸಿಕೊಂಡಿದ್ದಾರೋ ಇಲ್ಲವೋ. ಆದರೆ, ಸಿನಿಮಾ ಪಂಡಿತರ ನಿದ್ದೆಗೆಟ್ಟಿರುವುದಂತು ಸತ್ಯ. ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಅವರ ಜೊತೆಗೆ. ಅದರ ಬಜೆಟ್ 800 ಕೋಟಿ ಅನ್ನೋ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆರ್ ಆರ್ ಆರ್ ಸಿನಿಮಾ ಬಿಡುಗಡೆ ನಂತರ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವ ವಿಚಾರವಾಗಿ ರಾಜಮೌಳಿ ಅವರೇ ಹೇಳಿಕೊಂಡಿದ್ದರು. ಆದರೆ, ಆರ್ ಆರ್ ಆರ್ ಸಿನಿಮಾ ಬಿಡುಗಡೆ ಮೂರು ಸಲು ಮುಂದೂಡಿದ್ದರಿಂದ, ಪ್ರಿನ್ಸ್ 6 ತಿಂಗಳುಗಳ ಕಾಲ ಕಾದು, ಈಗ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

ಆರ್ ಆರ್ ಆರ್ ಕೊಟ್ಟ ಬಹುದೊಡ್ಡ ಯಶಸ್ಸಿನ ನಂತರ ಇಬ್ಬರೂ ಸಿನಿಮಾ ಮಾಡುತ್ತಾರೆಯೇ ಅನ್ನೋದನ್ನು ರಾಜಮೌಳಿ ಅಥವಾ ಮಹೇಶ್ ಬಾಬು ಅವರೇ ಹೇಳಬೇಕು. ಈ ಮಧ್ಯೆ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ನೀಡಿರುವ ಸಂದರ್ಶನದಲ್ಲಿ, ಬಹುಬಜೆಟ್ ಸಿನಿಮಾ ಮಹೇಶ್ ಬಾಬು ಅವರಿಗೆ ಸೆಟ್ಟೇರಲಿದೆ. ಬಾಂಡ್ ಶೈಲಿಯ ಸಿನಿಮಾ ಅದಾಗಿರಲಿದೆ ಎಂದು ಹೇಳಿಕೆ ಕೊಟ್ಟಿರುವುದು ಗಾಳಿ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಇವೆಲ್ಲ ಏನೇ ಇರಲಿ, ಮಹೇಶ್ ಬಾಬು ಮತ್ತು ರಾಜಮೌಳಿ ಹೊಸ ಸಿನಿಮಾ ಬಗ್ಗೆ ಎದ್ದಿರುವ ಊಹಪೋಹಕ್ಕೆ ಸ್ವತಃ ರಾಜಮೌಳಿಯವರೇ ಸ್ಪಷ್ಟನೆ ನೀಡಿ,
ಮಹೇಶ್ ಬಾಬು ಅವರ ಸಿನಿಮಾಕ್ಕೆ ಸ್ಕ್ರಿಪ್ಟ್ ಸಿದ್ಧವಾಗಿದೆ ಅನ್ನೋದನ್ನು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: Kamal Hassan : ಕಮಲ್ ಸಿನಿಮಾ ಮುಗೀತು! ನಾಯಕಿ ಯಾರು ಅನ್ನೋದು ಗುಪ್ತ್ ಗುಪ್ತ್…

‘ಈ ಬಗ್ಗೆ ತಲೆಯಲ್ಲಿ ಒಂದಷ್ಟು ಯೋಚನೆಗಳಿರುವುದ ಸತ್ಯ. ಅವಕ್ಕೆಲ್ಲ ಒಂದು ರೂಪ ಬರುವುದಕ್ಕೆ 3 ತಿಂಗಳಾದರು ಬೇಕು. ಆನಂತರ ಕೂತು, ಅದನ್ನು ಸ್ಕ್ಪ್ರಿಪ್ಟ್ ರೂಪದಲ್ಲಿ ಇಳಿಸಲು 3 ತಿಂಗಳು ಅಂದರೆ ಕನಿಷ್ಠ 6 ತಿಂಗಳಾದರು ಬೇಕೇಬೇಕು. ಇದು ಒಂದು ವರ್ಷ ಎಳೆದುಕೊಂಡು ಹೋಗಬಹುದು’ ಎಂದು ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಾಜಮೌಳಿ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ಕಥೆಯನ್ನು ಹೇಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹೀಗಾಗಿ, ಮಹೇಶ್ ಬಾಬು ಅವರಿಗೆ ಎಂಥ ಕತೆಯನ್ನು ಸಿದ್ಧ ಮಾಡಿದ್ದಾರೆ ಅನ್ನೋದನ್ನೆಲ್ಲಾ ಅಧಿಕೃತವಾಗಿ ಅವರೇ ಘೋಷಣೆ ಮಾಡುವ ಸಾಧ್ಯತೆಗಳು ಇವೆ. ಈ ಮಧ್ಯೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಸಿನಿಮಾದಲ್ಲಿ ತೊಡಗಿಕೊಂಡಿರುವ ಮಹೇಶ್ ಬಾಬು, ಕೆಲ ತಿಂಗಳುಗಳಲ್ಲಿ ತ್ರಿವಿಕ್ರಮ್ ಅವರ ಸಿನಿಮಾ ಪೂರ್ತಿಯಾಗುತ್ತದೆ. ಆನಂತರ, ನಾನು ರಾಜಮೌಳಿ ಅವರ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಒಟ್ಟಾರೆ, ರಾಜಮೌಳಿ ಮಹೇಶ್ ಬಾಬು ಅವರಿಗೆ ಸಿನಿಮಾ ಮಾಡೋದು ಗಾಳಿಸುದ್ದಿಯಲ್ಲ. ಆದರೆ, ಯಾವಾಗ ಮಾಡುತ್ತಾರೆ, ಕಥೆ ಏನು ಅನ್ನೋದು ಮಾತ್ರ ಗಾಳಿಸುದ್ದಿ.

ಇದನ್ನೂ ಓದಿ: Aamir Khan : ಕಳೆದ ವರ್ಷ ಚಿತ್ರರಂಗ ತೊರೆಯುವ ತೀರ್ಮಾನ ಮಾಡಿದ್ದೆ! ಮನದಾಳದ ಮಾತು ಬಿಚ್ಚಿಟ್ಟ ಬಾಲಿವುಡ್‌ ನಟ ಅಮೀರ್‌ ಖಾನ್‌

(Rajamouli And Mahesh Babu a year need for a new movie Rajamouli revealed)

Comments are closed.