ಟ್ರಂಪ್ ತಣ್ಣಗಾದರೂ ಸುಮ್ಮನಿರದ ಇರಾನ್ : ಅಮೆರಿಕ ರಕ್ಷಣಾ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸುವ ಕಾನೂನು ಜಾರಿಗೆ ಅಧ್ಯಕ್ಷ ಕರೆ

0

ಟೆಹ್ರಾನ್: ಅಮೆರಿಕದ ರಕ್ಷಣಾ ಇಲಾಖೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿ ಕಪ್ಪುಪಟ್ಟಿಗೆ ಸೇರಿಸುವಂತಾಗುವ ಕಾನೂನು ಜಾರಿಗೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಸೋಮವಾರ ಆದೇಶವೊಂದನ್ನು ಹೊರಡಿಸಿದ್ದಾರೆ. ಇರಾನ್ ಸಂಸತ್ ಈಗಾಲೇ ಅಂಗೀಕರಿಸಿರುವ ಕಾನೂನು ಅನ್ನು ಇರಾನ್ ನ ಸಂಬಂಧಿತ ಸಂಸ್ಥೆಗಳು ಅಂಗೀಕರಿಸಬೇಕು ಎಂದು ರೌಹಾನಿ ಕರೆ ನೀಡಿದ್ದಾರೆ.
ಅಮೆರಿಕದ ರಕ್ಷಣಾ ಸಚಿವಾಲಯದ ಎಲ್ಲ ಸದಸ್ಯರು, ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಕಂಪೆನಿಗಳು ಮತ್ತು ಇಸ್ಲಾಮಿಕ್ ರೆವಲ್ಯೂಷನ್ ಗಾಡ್ರ್ಸ್ ಕೋರ್ ನ ಕುಡ್ಸ್ ನ ಮಾಜಿ ಕಾಮಾಂಡರ್ ಖಾಸೆಮ್ ಸೊಲೆಮಾನಿ ಹತ್ಯೆಗೆ ಸಂಚು ರೂಪಿಸಿದ ಅಮೆರಿಕದ ಕಮಾಂಡರ್ ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ನಿರ್ಣಯದ ಪರ ಜನವರಿ 7ರಂದು ಇರಾನ್ ಸಂಸತ್ ನಲ್ಲಿ ಮತ ಹಾಕಲಾಗಿತ್ತು.
ಇರಾನ್ ನ ಪರಮೋಚ್ಛ ಶಾಸಕಾತ್ಮಕ ಸಂಸ್ಥೆಯಾದ ಗಾರ್ಡಿಯನ್ ಕೌನ್ಸಿಲ್ ಆಫ್ ಕಾನ್ಸಿಟಿಟ್ಯೂಷನ್ ಈ ಕಾನೂನು ಜಾರಿಗೊಳಿಸಿತ್ತು. ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಪಡೆಗಳನ್ನು ವಿದೇಶಿ ಭಯೋತ್ಪಾದಕ ಸಂಘಟನೆ&rsquo ಎಂದು 2019ರ ಏಪ್ರಿಲ್ ನಲ್ಲಿ ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿ ಪ್ರಕಟಿಸಿತ್ತು.

Leave A Reply

Your email address will not be published.