Kannada News Next

astrology

ಶುಕ್ರ ಬದಲಾವಣೆ: ಮುಂದಿನ 24 ಗಂಟೆಯಲ್ಲಿ ಈ 3 ರಾಶಿ ಜೀವನದಲ್ಲಿ ಅಗ್ನಿಪರೀಕ್ಷೆ ಶುರು

ಶುಕ್ರ ಗ್ರಹದ ಬದಲಾವಣೆಯಿಂದಾಗಿ ಮುಂಬರುವ 24 ಗಂಟೆಗಳಲ್ಲಿ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದ್ದು, ಇವರ ಜೀವನದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗಲಿವೆ.

By Meghana Pranuth | ಮೇಘನಾ ಪ್ರಣೂತ್‌
RashiBhavishya

ಸೌಂದರ್ಯ, ಪ್ರೀತಿ ಹಾಗೂ ಭೋಗ-ಭಾಗ್ಯಗಳ ಕಾರಕನಾದ ಶುಕ್ರನ ಸಂಚಾರ ಮತ್ತು ಸ್ಥಾನ ಬದಲಾವಣೆಯು ಎಲ್ಲಾ ಹನ್ನೆರಡು ರಾಶಿಗಳ ಮೇಲೂ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರುತ್ತದೆ. ಪ್ರಸ್ತುತ ಗ್ರಹಗತಿಗಳ ಪ್ರಕಾರ, ಮುಂದಿನ 24 ಗಂಟೆಗಳು ಕೆಲವು ರಾಶಿಯವರಿಗೆ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಮುಗ್ಗಟ್ಟುಗಳನ್ನು ತಂದಿಡಬಹುದು. ಈ ಕೆಳಗಿನ 3 ರಾಶಿಗಳು ವಿಶೇಷ ಎಚ್ಚರಿಕೆ ವಹಿಸುವುದು ಅನಿವಾರ್ಯ..

ವೃಷಭ ರಾಶಿ (Taurus)

ವೃಷಭ ರಾಶಿ

ಅನಿರೀಕ್ಷಿತ ಧನಹಾನಿ ಅಥವಾ ಕೈಗೆ ಬಂದ ಹಣ ಕೈ ತಪ್ಪಿ ಹೋಗುವ ಸಾಧ್ಯತೆಯಿದೆ. ಸಾಲದ ಸುಳಿಗೆ ಸಿಲುಕಿಕೊಳ್ಳುವ ಆತಂಕವಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಅಥವಾ ಅತಿಯಾದ ಆಯಾಸ ನಿಮ್ಮನ್ನು ಕಾಡಬಹುದು. ಆಹಾರ ಕ್ರಮದ ಬಗ್ಗೆ ಕಾಳಜಿ ಇರಲಿ. ಕಚೇರಿಯಲ್ಲಿ ಮೇಲಾಧಿಕಾರಿಗಳ ಜತೆ ಮಾತನಾಡುವಾಗ ಎಚ್ಚರವಿರಲಿ. ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗದೆ ನಿರಾಶೆಯಾಗಬಹುದು.

ಮಿಥುನ ರಾಶಿ (Gemini)

ಮಿಥುನ ರಾಶಿ

ಕುಟುಂಬದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪಗಳು ಉಂಟಾಗಿ, ಮನೆಯ ನೆಮ್ಮದಿ ಸ್ವಲ್ಪ ಮಟ್ಟಿಗೆ ಹೈರಾಣಾಗಬಹುದು. ಅನಗತ್ಯ ಯೋಚನೆಗಳು ಮತ್ತು ಭವಿಷ್ಯದ ಬಗ್ಗೆ ಅತಿಯಾದ ಭಯ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಪಾಲುದಾರಿಕೆ ವ್ಯಾಪಾರ ಮಾಡುತ್ತಿದ್ದರೆ, ಸಂಗಾತಿಗಳ ಜೊತೆ ಭಿನ್ನಾಭಿಪ್ರಾಯ ಮೂಡಬಹುದು. ಯಾವುದೇ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎರಡು ಬಾರಿ ಯೋಚಿಸಿ.

ಕನ್ಯಾ ರಾಶಿ (Virgo)

_ಕನ್ಯಾ ರಾಶಿ (Virgo) kodi

ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗಲಿದ್ದು, ಬಜೆಟ್ ತಲೆಕೆಳಗಾಗಲಿದೆ. ಆತುರದಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ನಿಮ್ಮ ಕೋಪ ಮತ್ತು ಕಟುವಾದ ಮಾತುಗಳು ಹತ್ತಿರದವರನ್ನೇ ದೂರ ಮಾಡುವ ಸಾಧ್ಯತೆಯಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಗೆಳೆಯರ ಬಳಿ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಈ ಅವಧಿಯಲ್ಲಿ ದೂರ ಪ್ರಯಾಣ ಮಾಡುವುದನ್ನು ಆದಷ್ಟು ಮುಂದೂಡುವುದು ಒಳ್ಳೆಯದು. ಪ್ರಯಾಣದ ವೇಳೆ ಬೆಲೆಬಾಳುವ ವಸ್ತುಗಳು ಕಳೆದುಹೋಗುವ ಸಂಭವವಿದೆ.

ಪರಿಹಾರ

ಈ ಕಠಿಣ ಅವಧಿಯನ್ನು ಎದುರಿಸಲು ಪ್ರತಿದಿನ ಬೆಳಿಗ್ಗೆ ಲಕ್ಷ್ಮಿ ದೇವಿಯ ಆರಾಧನೆ ಮಾಡುವುದು, ನಿರ್ಗತಿಕರಿಗೆ ಅಥವಾ ಹಸುವಿಗೆ ಆಹಾರ ನೀಡುವುದು ಹಾಗೂ ಶಿವನನ್ನು ಪ್ರಾರ್ಥಿಸುವುದು ಶುಕ್ರನ ಅಶುಭ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.