ಸಮರ್ಥ್‌ ಶಾಮನೂರುಗೆ ಕಾಂಗ್ರೆಸ್ ಟಿಕೆಟ್‌.. ಜಮೀರ್‌ ಕಂಡೀಷನ್‌!

ಕೊನೆಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ‘ಕೈ’ ಟಿಕೆಟ್ ಕಗ್ಗಂಟು ಶಮನವಾಗಿದೆ. ಟಿಕೆಟ್​ ವಿಚಾರದಲ್ಲಿ ದೊಡ್ಡ ಪೈಪೋಟಿ ನಡೆದಿತ್ತು. ಇದೀಗ ಎಲ್ಲಾ ಗೊಂದಲಗಳಿಗೂ ಬ್ರೇಕ್​ ಬಿದ್ದಿದೆ. ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಮಣೆ ನೀಡಿದೆ.. ಸಚಿವ ಮಲ್ಲಿಕಾರ್ಜುನ್ ಪುತ್ರ ಸಮರ್ಥ್​ ಶಾಮನೂರು ಅವರಿಗೆ ಕಾಂಗ್ರೆಸ್ ಟೆಕೆಟ್ ಫೈನಲ್ ಮಾಡಿದೆ. ಇದರಿಂದ ಟಿಕೆಟ್‌ಗೆ ಕೊನೆವರೆಗೂ ಪೈಪೋಟಿ ನಡೆಸಿದ್ದ ಮುಸ್ಲಿಂ ಸಮುದಾಯಕ್ಕೆ ಹಿನ್ನಡೆ ಆಗಿದೆ.