ಸಮರ್ಥ್ ಶಾಮನೂರುಗೆ ಕಾಂಗ್ರೆಸ್ ಟಿಕೆಟ್.. ಜಮೀರ್ ಕಂಡೀಷನ್!
ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶಾಕ್
ಕೊನೆಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ‘ಕೈ’ ಟಿಕೆಟ್ ಕಗ್ಗಂಟು ಶಮನವಾಗಿದೆ. ಟಿಕೆಟ್ ವಿಚಾರದಲ್ಲಿ ದೊಡ್ಡ ಪೈಪೋಟಿ ನಡೆದಿತ್ತು. ಇದೀಗ ಎಲ್ಲಾ ಗೊಂದಲಗಳಿಗೂ ಬ್ರೇಕ್ ಬಿದ್ದಿದೆ. ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಮಣೆ ನೀಡಿದೆ.. ಸಚಿವ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಅವರಿಗೆ ಕಾಂಗ್ರೆಸ್ ಟೆಕೆಟ್ ಫೈನಲ್ ಮಾಡಿದೆ. ಇದರಿಂದ ಟಿಕೆಟ್‌ಗೆ ಕೊನೆವರೆಗೂ ಪೈಪೋಟಿ ನಡೆಸಿದ್ದ ಮುಸ್ಲಿಂ ಸಮುದಾಯಕ್ಕೆ ಹಿನ್ನಡೆ ಆಗಿದೆ.
ಸಮರ್ಥ್‌ಗೆ ಟಿಕೆಟ್, ಜಮೀರ್ ಷರತ್ತು
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ ಮುಸ್ಲಿಂ ಸಮುದಾಯ ಪಟ್ಟು ಹಿಡಿದಿತ್ತು.. ತಮ್ಮ ಸಮುದಾಯಕ್ಕೆ ಈ ಬಾರಿ ಟಿಕೆಟ್ ಕೊಡಲೇಬೇಕು ಎಂದು ಜಮೀರ್ ಅಹಮದ್ ಪಟ್ಟು ಹಿಡಿದಿದ್ರು. ಸಿಎಂ ಸಿದ್ದರಾಮಯ್ಯ ಮುಂದೆ
ಟಿಕೆಟ್‌ಗೆ ಬೇಡಿಕೆ ಇಟ್ಟಿದ್ರು.. ಇದ್ರಿಂದ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಕಾಂಗ್ರೆಸ್‌ಗೆ ತಲೆನೋವಾಗಿತ್ತು. ಅಂತಿಮವಾಗಿ ಸುರ್ಜೇವಾಲ ಸಭೆ ನಡೆಸಿ ಹೈಕಮಾಂಡ್‌ಗೆ ಸಮರ್ಥ್ ಹೆಸರು ಶಿಪಾರಸ್ಸು ಮಾಡಿದ್ದಾರೆ. ಅದರನ್ವಯ
ಕಾಂಗ್ರೆಸ್ ಹೈಕಮಾಂಡ್ ಸಮರ್ಥ್‌ಗೆ ಟಿಕೆಟ್ ಕೊಟ್ಟಿದೆ. ಸಮರ್ಥ್‌ಗೆ ಟಿಕೆಟ್ ಕೊಡಲು ಸಚಿವ ಜಮೀರ್ ಅಹಮದ್ ಖಾನ್ ಹೈಕಮಾಂಡ್ ಮುಂದೆ ಕೆಲ ಷರತ್ತುಗಳನ್ನ ಇಟ್ಟಿದ್ದಾರೆ ಎನ್ನಲಾಗಿದೆ.
ಸಮರ್ಥ್ ಸೋತ್ರೆ ಮುಂದೆ ಅವಕಾಶ ಕೊಡಬೇಕು. 2028ಕ್ಕೆ ಅಲ್ಪಸಂಖ್ಯಾತರಿಗೇ ಅವಕಾಶ ನೀಡಬೇಕು . ರಾಜ್ಯಸಭೆ, ಪರಿಷತ್ ಚುನಾವಣೆಯಲ್ಲಿ ಪರಿಗಣಿಸಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಬೇಕು.
ಪಕ್ಷಕ್ಕೆ ನಿಷ್ಠೆ ತೋರಿದ್ದೇವೆ.. ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಮರ್ಥ್‌ಗೆ ಟಿಕೆಟ್, ಜಮೀರ್‌ಗೆ ಟಾಸ್ಕ್
ಜಮೀರ್ ಷರತ್ತುಗಳಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು ಕೆಲ ಟಾಸ್ಕ್‌ಗಳನ್ನೂ ಕೊಟ್ಟಿದೆಯಂತೆ. ಉಪಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಸಮರ್ಥ್ ಪರವಾಗಿ ಕೆಲಸ ಮಾಡಬೇಕು.
ಮುಸ್ಲಿಂ ಮತಗಳು ಚದುರದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಮತಗಳು ಇಬ್ಭಾಗ ಆಗಬಾರದು. ಸಮುದಾಯದ ಅಸಮಾಧಾನಿತ ನಾಯಕರನ್ನ ಮನವೊಲಿಸುವ
ಜವಾಬ್ದಾರಿ ಜಮೀರ್‌ಗೆ ಕೊಟ್ಟಿದ್ದಾರಂತೆ. ಸಚಿವ ಜಮೀರ್ ಹೈಕಮಾಂಡ್ ಟಾಸ್ಕ್‌ನಾ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:
https://kannada.newsnext.live/breaking/congress-ticket-final-for-samarth-shamanur-umesh-meti/
ದಾವಣಗೆರೆ ದಕ್ಷಿಣ
ಮತದಾರರು
ಒಟ್ಟು – 2,31,683
ಪುರುಷ – 1,13,645
ಮಹಿಳೆ – 1,17,986
ತೃತೀಯ ಲಿಂಗಿಗಳು – 43
ದಾವಣಗೆರೆ ದಕ್ಷಿಣ
ಜಾತಿ ಲೆಕ್ಕಾಚಾರ
ಲಿಂಗಾಯತ – 37,845
ಮುಸ್ಲಿಂ – 64,246
ಕುರುಬ – 16,854
SC – 29,106
ST – 31,729
ಮರಾಠ – 14,868
ಉಪ್ಪಾರ – 8,352
ಜೈನ – – 5,386
ಇತರೆ – 23,300
ಅಂತಿಮವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಸಮರ್ಥ್ ಶಾಮನೂರು ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮಧ್ಯೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಜಿಎಂ ಸಿದ್ದೇಶ್ವರ್ ಬೆಂಬಲರಾಗಿರೋ ಶ್ರೀನಿವಾಸ್‌ಗೆ ಶಾಮನೂರು ಕುಟುಂಬದ ಕುಡಿ, ಯುವನಾಯಕ ಸಮರ್ಥ್ ಠಕ್ಕರ್ ಕೊಟ್ಟು ಗೆಲುವಿನ ನಗೆ ಬೀರ್ತಾರಾ? ಎಂಬುದು ಕುತೂಹಲ ಮೂಡಿಸಿದೆ.



