ಕರ್ನಾಟಕ ಸರ್ಕಾರದ ಚಿಟ್‌ ಫಂಡ್‌ ಎಂಎಸ್‌ಐಎಲ್;‌ ಹಣ ಹೂಡಿಕೆಗೆ ಸರ್ಕಾರದಿಂದ ಭರ್ಜರಿ ಪ್ಲಾನ್

ಖಾಸಗಿ ಚಿಟ್ ಫಂಡ್‌ಗಳಲ್ಲಿ ಹಣ ಹೂಡಿ ವಂಚನೆಗೆ ಒಳಗಾಗುವ ಭೀತಿಯಲ್ಲಿರುವ ಜನರಿಗೆ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ (MSIL) ಸುರಕ್ಷಿತ ಪರ್ಯಾಯವಾಗಿದೆ. “ಎಂಎಸ್‌ಐಎಲ್ ಚಿಟ್ ಫಂಡ್‌ನಲ್ಲಿ ಜನರ ಹೂಡಿಕೆ ನೂರಕ್ಕೆ ನೂರರಷ್ಟು ಸುರಕ್ಷಿತವಾಗಿದ್ದು, ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಇಲ್ಲಿ ಹೂಡಿಕೆ ಮಾಡಬಹುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಡಿಜಿಟಲ್ ಕ್ರಾಂತಿ – ಹೊಸ ಮೊಬೈಲ್ ಆ್ಯಪ್: ಗ್ರಾಹಕರಿಗೆ ಪಾರದರ್ಶಕತೆ ಮತ್ತು ಸುಲಭ ಪ್ರವೇಶ ನೀಡಲು ಎಂಎಸ್‌ಐಎಲ್ ಹೊಸ ಸಾಫ್ಟ್‌ವೇರ್ ಮತ್ತು ಆ್ಯಪ್ ಬಿಡುಗಡೆ ಮಾಡಿದೆ. ಇನ್ಮುಂದೆ ಗ್ರಾಹಕರು:

10,000 ಕೋಟಿ ರೂ. ವಹಿವಾಟಿನ ಗುರಿ:
ನೆರೆಯ ಕೇರಳ ರಾಜ್ಯದಲ್ಲಿ ವಾರ್ಷಿಕ 47,000 ಕೋಟಿ ರೂ.ಗಳ ಚಿಟ್ ಫಂಡ್ ವಹಿವಾಟು ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ಪ್ರಸ್ತುತ ಕೇವಲ 500 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ 10,000 ಕೋಟಿ ರೂ. ಗೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಕೇರಳದ ಚಿಟ್ ಫಂಡ್ ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ.

ರೈತರಿಗೆ ಗುಡ್‌ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆ

ಉದ್ಯೋಗಾವಕಾಶ ಮತ್ತು ವಿಸ್ತರಣೆ:

ಗ್ಯಾರಂಟಿ ಉಳಿತಾಯಕ್ಕೆ ವೇದಿಕೆ: ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಉಳಿಸುವ ಹಣವನ್ನು ಎಂಎಸ್‌ಐಎಲ್ ಚಿಟ್ ಫಂಡ್‌ನಲ್ಲಿ ಹೂಡಿಕೆ ಮಾಡುವಂತೆ ಸಿಎಂ ಕರೆ ನೀಡಿದ್ದಾರೆ. ಇಲ್ಲಿ ಲಾಭಕ್ಕಿಂತಲೂ ಹಣದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ, ಆರೋಗ್ಯ, ಮದುವೆ ಮತ್ತು ಮನೆ ನಿರ್ಮಾಣದಂತಹ ಉದ್ದೇಶಗಳಿಗೆ ಈ ಉಳಿತಾಯದ ಹಣ ಸಹಕಾರಿಯಾಗಲಿದೆ.

ಎಂಎಸ್‌ಐಎಲ್ ಆರ್ಥಿಕ ಸಾಧನೆ: ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ ಅವರ ಮಾಹಿತಿ ಪ್ರಕಾರ, ಸಂಸ್ಥೆಯು 2024–25ರಲ್ಲಿ 3,882 ಕೋಟಿ ರೂ. ವಹಿವಾಟು ನಡೆಸಿದ್ದು, 122 ಕೋಟಿ ರೂ. ಗಳಿಗೂ ಹೆಚ್ಚು ಲಾಭ ಗಳಿಸಿದೆ.

ಸಲಹೆ: ಖಾಸಗಿ ಲೇವಾದೇವಿದಾರರು ಅಥವಾ ಮೈಕ್ರೋಫೈನಾನ್ಸ್ ಕಂಪನಿಗಳ ಸಾಲದ ಸುಳಿಗೆ ಬೀಳದಂತೆ ಜನರನ್ನು ರಕ್ಷಿಸಲು ಸರ್ಕಾರವು ‘ಸಣ್ಣ ಮತ್ತು ಅತಿಸಣ್ಣ ಸಾಲ ಸುಗ್ರೀವಾಜ್ಞೆ 2025’ ಅನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.

Exit mobile version