ರೈಲು ಟಿಕೆಟ್ ದರ ಏರಿಕೆ; ಡಿಸೆಂಬರ್ 26ರಿಂದಲೇ ಜಾರಿ!

ಭಾರತೀಯ ರೈಲ್ವೆಯು ತನ್ನ ಪ್ರಯಾಣ ದರ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿದ್ದು (Fare Rationalisation), ದೂರದ ಪ್ರಯಾಣದ ಟಿಕೆಟ್ ದರಗಳನ್ನು ಹೆಚ್ಚಿಸಿದೆ. ಮುಖ್ಯವಾಗಿ ಎಸಿ ಅಲ್ಲದ (Non-AC) ಬೋಗಿಗಳಲ್ಲಿ ಪ್ರತಿ 500 ಕಿಲೋಮೀಟರ್ ಪ್ರಯಾಣಕ್ಕೆ ಸುಮಾರು 10 ರೂಪಾಯಿಗಳಷ್ಟು ದರ ಏರಿಕೆಯಾಗಲಿದೆ.

ದರ ಏರಿಕೆಯ ಮುಖ್ಯಾಂಶಗಳು:

ದರ ಏರಿಕೆಗೆ ಕಾರಣವೇನು?

ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಇಲಾಖೆಯ ಒಟ್ಟು ಕಾರ್ಯಾಚರಣಾ ವೆಚ್ಚವು 2.63 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದರಲ್ಲಿ ಸಿಬ್ಬಂದಿ ವೇತನಕ್ಕೆ 1.15 ಲಕ್ಷ ಕೋಟಿ ರೂ. ಮತ್ತು ಪೆನ್ಷನ್‌ಗಾಗಿ 60,000 ಕೋಟಿ ರೂ. ವೆಚ್ಚವಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸಲು ಮತ್ತು ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ರೈಲ್ವೆ ತಿಳಿಸಿದೆ. ಈ ಪರಿಷ್ಕರಣೆಯಿಂದ ರೈಲ್ವೆ ಇಲಾಖೆಗೆ ಈ ವರ್ಷ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕರ್ನಾಟಕದ ತುಮಕೂರಿನ ಈ ʼವಿಶ್ವವಿದ್ಯಾಲಯʼ ನಕಲಿ! ವಿದ್ಯಾರ್ಥಿಗಳ ಪದವಿ ಅಮಾನ್ಯ

ಪ್ರಯಾಣಿಕರು ಗಮನಿಸಬೇಕಾದ್ದೇನು?

ಈ ಹೊಸ ದರಗಳು 2025ರ ಡಿಸೆಂಬರ್ 26ರಿಂದ ಜಾರಿಗೆ ಬರಲಿವೆ. ಆದರೆ, ಈ ದಿನಾಂಕಕ್ಕಿಂತ ಮೊದಲು ಬುಕ್ ಮಾಡಲಾದ ಟಿಕೆಟ್‌ಗಳಿಗೆ ಯಾವುದೇ ಹಳೆಯ ದರವೇ ಅನ್ವಯವಾಗಲಿದ್ದು, ಹೆಚ್ಚುವರಿ ಹಣ ನೀಡುವ ಅಗತ್ಯವಿರುವುದಿಲ್ಲ. ಹಬ್ಬದ ಸೀಸನ್ ಮುಗಿದ ಬೆನ್ನಲ್ಲೇ ಈ ದರ ಏರಿಕೆ ಜಾರಿಯಾಗುತ್ತಿರುವುದು ದೂರದ ಊರುಗಳಿಗೆ ಪ್ರಯಾಣಿಸುವ ಸಾಮಾನ್ಯ ಜನರಿಗೆ ತುಸು ಬಿಸಿ ಮುಟ್ಟಿಸಿದೆ.

Exit mobile version