14 ಲಕ್ಷ ಬಿಪಿಎಲ್‌ ಕಾರ್ಡು ರದ್ದು…! ಬಿಪಿಎಲ್‌ನಿಂದ ಎಪಿಎಲ್‌ ಆಗಿ ಪರಿವರ್ತನೆ

ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ  ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಿ ಸಂಪೂರ್ಣ ರದ್ದತಿ ಮಾಡುವ ಬದಲು, ಈ ಕಾರ್ಡ್‌ಗಳಲ್ಲಿ ಹಲವನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗುತ್ತಿದೆ.

BPL TO APL : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯಾದ್ಯಂತ  ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಿದೆ. ಈಗಾಗಲೇ ಅನರ್ಹ ಬಿಪಿಎಲ್‌ ಕಾರ್ಡುಗಳನ್ನು ಎಪಿಎಲ್‌ ಕಾರ್ಡುಗಳನ್ನಾಗಿ ಪರಿವರ್ತನೆ ಮಾಡುತ್ತಿದೆ.  ಇದೀಗ ರಾಜ್ಯ ಸರಕಾರ ಬರೋಬ್ಬರಿ 14 ಲಕ್ಷ ಬಿಪಿಎಲ್‌ ಕಾರ್ಡುಗಳನ್ನು ಎಪಿಎಲ್‌ ಕಾರ್ಡ್‌ ಆಗಿ ಪರಿವರ್ತಿಸಿದೆ.

ಬಿಪಿಎಲ್‌ ಕಾರ್ಡುಗಳ ವಿಚಾರದಲ್ಲಿ ರಾಜ್ಯ ಸರಕಾರ ಕೆಲವೊಂದು ಮಾನದಂಡಗಳನ್ನು ಪ್ರಕಟಿಸಿತ್ತು. ಇದೇ ಮಾರ್ಗಸೂಚಿಯ ಅಡಿಯಲ್ಲಿ ಎಪಿಎಲ್‌ ಕಾರ್ಡುಗಳನ್ನು ಎಪಿಎಲ್‌ ಪರಿವರ್ತಿಸುತ್ತಿದೆ. ಒಂದೊಮ್ಮೆ ಎಪಿಎಲ್‌ ಕಾರ್ಡುಗಳಾಗಿ ಬದಲಾವಣೆ ಆದ್ರೆ, ಅವರು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪಡಿತರ ಪಡೆಯುವ ಅವಕಾಶ ಕಳೆದುಕೊಳ್ಳಲಿದ್ದಾರೆ.

14 ಲಕ್ಷ ಬಿಪಿಎಲ್ ಕಾರ್ಡ್‌ ರದ್ದು..! ಎಪಿಎಲ್‌ ಆಗಿ ಪರಿವರ್ತನೆ

ಸರ್ಕಾರವು ಸುಮಾರು 13.87 ಲಕ್ಷದಿಂದ 15.12 ಲಕ್ಷ ಕಾರ್ಡ್‌ಗಳನ್ನು ಮರುಪರಿಶೀಲನೆಗೆ ಒಳಪಡಿಸಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಕಾರ್ಡ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲಿಗೆ ಎಪಿಎಲ್ (Non-Priority Household) ಕಾರ್ಡ್‌ಗಳಾಗಿ ಬದಲಾಯಿಸಲಾಗುತ್ತಿದೆ. ಇದರಿಂದಾಗಿ ಅವರು ಗುರುತಿನ ಚೀಟಿಯಾಗಿ ಕಾರ್ಡ್ ಬಳಸಬಹುದು, ಆದರೆ ಉಚಿತ ಪಡಿತರ ಸೌಲಭ್ಯ ಲಭ್ಯವಿರುವುದಿಲ್ಲ.

ಪರಿವರ್ತನೆಗೆ ಮಾನದಂಡಗಳೇನು?

ಕರ್ನಾಟಕ ಸರಕಾರ ಪ್ಯಾನ್ (PAN) ಮತ್ತು ಆಧಾರ್ ಡೇಟಾವನ್ನು ಬಿಪಿಎಲ್‌ ರದ್ದತಿಗೆ ಮುಂದಾಗಿದೆ. ಹಾಗಾದ್ರೆ ಬಿಪಿಎಲ್‌ ಕಾರ್ಡು ಹೊಂದಿರಲು ಬೇಕಾದ ಮಾನದಂಡಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಿಗೆ ಬಂಪರ್ ಗಿಫ್ಟ್: ಈಗ ನಿಮ್ಮ ಸಾಲದ EMI ಹೊರೆ ಇಳಿಕೆ

ತಪ್ಪುಗಳಾಗಿದ್ದರೆ ಸರಿಪಡಿಸುವುದು ಹೇಗೆ? (ಏಪ್ರಿಲ್ 2026 ರ ಅಪ್‌ಡೇಟ್)

ಒಂದು ವೇಳೆ ಅರ್ಹ ಬಡ ಕುಟುಂಬದ ಕಾರ್ಡ್ ಆಕಸ್ಮಿಕವಾಗಿ ಎಪಿಎಲ್‌ಗೆ ಬದಲಾಗಿದ್ದರೆ, ಅದನ್ನು ಸರಿಪಡಿಸಲು ಸರ್ಕಾರ ಅವಕಾಶ ನೀಡಿದೆ:

ಇದನ್ನೂ : PAN 2.0 : ಇನ್ಮುಂದೆ ಬದಲಾಗಲಿದೆ ನಿಮ್ಮ ಪಾನ್ ಕಾರ್ಡ್ ರೂಪ; ಏನಿದು ಕೇಂದ್ರದ ಹೊಸ ಯೋಜನೆ ?

Exit mobile version