ಕರ್ನಾಟಕ ಬ್ಯಾಂಕ್ ನೇಮಕಾತಿ 2025: ಪದವಿಧರರಿಗೆ ಉದ್ಯೋಗ, ರೂ. 82920 ವೇತನ

ಕರ್ನಾಟಕ ಬ್ಯಾಂಕ್ ನೇಮಕಾತಿ 2025 (Karnataka Bank Recruitment 2025) : ಭಾರತದ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿ 75 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಉದ್ಯೋಗ ಗಿಟ್ಟಿಸಿಕೊಳ್ಳುವ ಅಭ್ಯರ್ಥಿಗಳು ಮಾಸಿಕ 82920 ರೂ. ವೇತನ ಪಡೆಯಲಿದ್ದಾರೆ.

ಕರ್ನಾಟಕ ಬ್ಯಾಂಕ್‌ ವರ್ಷಂಪ್ರತಿ ಹೊಸ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುತ್ತಿದೆ. ಇದೀಗ ಈ ಬಾರಿಯೂ ಸುಮಾರು 75 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಲು ಬ್ಯಾಂಕ್‌ ಅವಕಾಶ ಕಲ್ಪಿಸಿದೆ.

Karnataka Bank Recruitment 2025 : ಕರ್ನಾಟಕ ಬ್ಯಾಂಕ್ ನೇಮಕಾತಿ 2025

ಚಾರ್ಟರ್ಡ್ ಅಕೌಂಟೆಂಟ್: ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್‌ಗಳು (CA) ಆಗಿರಬೇಕು ಮತ್ತು ಮೊದಲ ಮೂರು ಪ್ರಯತ್ನಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 2024 ಮತ್ತು 2025 ರ ಬ್ಯಾಚ್‌ನ ಅಭ್ಯರ್ಥಿಗಳು ಮಾತ್ರ ಅರ್ಹರು. ಕಾನೂನು ಅಧಿಕಾರಿ – ಅಭ್ಯರ್ಥಿಗಳು ಟೈರ್ -1 ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿ (LLM) ಹೊಂದಿರಬೇಕು.

ತಜ್ಞ ಅಧಿಕಾರಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಟೈರ್ -1 ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 70% ಅಂಕಗಳೊಂದಿಗೆ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ (MBA) ಪಡೆದಿರಬೇಕು.

ಐಟಿ ಸ್ಪೆಷಲಿಸ್ಟ್ : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಟೈರ್ -1 ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಐಟಿಯಲ್ಲಿ ಬಿಇ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಮಾಸ್ಟರ್ (MCA) ಅಥವಾ ತಂತ್ರಜ್ಞಾನದಲ್ಲಿ ಮಾಸ್ಟರ್ (M.Tech) ಪದವಿ ಪಡೆದಿರಬೇಕು.

ಭಾರತ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್‌ 1924ರಲ್ಲಿ ಮಂಗಳೂರಲ್ಲಿ ಸ್ಥಾಪನೆ ಆಗಿತ್ತು. ಕರ್ನಾಟಕ ಬ್ಯಾಂಕ್‌, ಶೃಂಗೇರಿ ಶಾರದಾ ಬ್ಯಾಂಕ್‌ ಲಿಮಿಟೆಡ್‌, ಬ್ಯಾಂಕ್‌ ಆಫ್‌ ಕರ್ನಾಟಕ ಹಾಗೂ ಚಿತ್ರದುರ್ಗ ಬ್ಯಾಂಕ್‌ ಲಿಮಿಟೆಡ್‌ ಜೊತೆಗೆ ವಿಲೀನವಾಗಿತ್ತು. ಕಳೆದ 9 ದಶಕಗಳಿಂದಲೂ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ನೀಡುವ ಮೂಲಕ ಭಾರತದಾದ್ಯಂತ ತನ್ನ ಬ್ಯಾಂಕಿಂಗ್‌ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಸದ್ಯ 22 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 842 ಶಾಖೆಗಳನ್ನು ಹೊಂದಿದೆ.

Karnataka Bank Recruitment 2025 salary Rs 82920 in Kannada News

Exit mobile version