Coastal News

Beltangadi Auto accident: ಸೇತುವೆ ಗೋಡೆಗೆ ಆಟೋ ರಿಕ್ಷಾ ಢಿಕ್ಕಿ: 1.2 ವರ್ಷದ ಮಗು ಸಾವು, ಮೂವರಿಗೆ ಗಾಯ

Published by
Arpitha Naik | ಅರ್ಪಿತಾ ನಾಯ್ಕ್‌

ಬೆಳ್ತಂಗಡಿ: (Beltangadi Auto accident) ಸೇತುವೆಯ ಗೋಡೆಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಒಂದು ವರ್ಷದ ಪುಟ್ಟ ಮಗು ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿಯಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ನಿಟ್ಟೆಯ ಸಂತೋಷ್ ಮತ್ತು ಗೀತಾ ದಂಪತಿಯ ಮಗು ಅಥರ್ವ (1.2 ವರ್ಷ) ಘಟನೆಯಲ್ಲಿ ಮೃತಪಟ್ಟ ಬಾಲಕ.

ಗೀತಾ ಅವರು ಪಡಂಗಡಿಯಲ್ಲಿರುವ ತನ್ನ ತಾಯಿಯ ಮನೆಗೆ ಭೇಟಿ ನೀಡಿದ್ದರು ಮತ್ತು ಶಂಬೂರಿನ ತನ್ನ ಸಹೋದರಿಯ ಮನೆಯಿಂದ ತಾಯಿ ರತ್ನಾ ಅವರೊಂದಿಗೆ ಆಟೋದಲ್ಲಿ ಹಿಂದಿರುಗುತ್ತಿದ್ದಾಗ ಆಟೋ ಸೇತುವೆಯ ಗೋಡೆಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಗು ಅಥರ್ವ ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ಇನ್ನೂ ಘಟನೆಯಲ್ಲಿ ಗೀತಾ, ಅವರ ತಾಯಿ ರತ್ನಾ ಹಾಗೂ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ. ಇದೀಗ ಆಟೋ ಚಲಾಯಿಸುತ್ತಿದ್ದ ಚಾಲಕನ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ್ದು, ಆತನ ವಿರುದ್ಧ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಮಗುವನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ : Bengaluru rape and murder: 3.5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ: ತಾಯಿಯ ಪ್ರಿಯಕರನಿಂದಲೇ ನೀಚ ಕೃತ್ಯ

3.5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ: ತಾಯಿಯ ಪ್ರಿಯಕರನಿಂದಲೇ ಕೃತ್ಯ

ಬೆಂಗಳೂರು: ಮೂರುವರೆ ವರ್ಷದ ಬಾಲಕಿ ಮೇಲೆ ತಾಯಿಯ ಪ್ರಿಯಕರನೇ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ದುರಂತ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Rape by father: 13 ವರ್ಷದ ಬಾಲಕಿ ಮೇಲೆ ತಂದೆಯಿಂದಲೇ ಅತ್ಯಾಚಾರ: ದೂರು ದಾಖಲು

ಇದನ್ನೂ ಓದಿ : Dhanbad Fire Accident : ಬಹುಮಹಡಿ ಕಟ್ಟಡದಲ್ಲಿ ಅಗ್ನಿದುರಂತ : ಮಕ್ಕಳು ಸೇರಿ 14 ಮಂದಿ ಸಾವು

Beltangadi Auto accident: Auto rickshaw hits bridge wall: 1.2 year old child killed, 3 injured

This post was last modified on ಫೆಬ್ರವರಿ 1, 2023 10:44 ಫೂರ್ವಾಹ್ನ

Share