ದಿನಭವಿಷ್ಯ : 21 ಜುಲೈ 2026 : ಸಿದ್ಧಿ ಯೋಗ, ಈ ರಾಶಿಯವರಿಗೆ ಅದೃಷ್ಟ : ಹೇಗಿದೆ 12 ರಾಶಿಗಳ ಇಂದಿನ ರಾಶಿಫಲ

ಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ನಿಮ್ಮ ಉದ್ಯೋಗ, ವ್ಯಾಪಾರ, ಪ್ರೇಮ ಜೀವನದ ಮೇಲೆಯೂ ಪರಿಣಾಮ ಬೀರಲಿದೆ. ಮೇಷರಾಶಿಯಿಂದ ಮೀನರಾಶಿಯವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ ಎಂದು ತಿಳಿಯೋಣಾ.

ದಿನಭವಿಷ್ಯ ಇಂದು ಜುಲೈ 21 2026. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಆಕಾಶಮಂಡಲದಲ್ಲಿ ಸಿದ್ಧಿ ಯೋಗ ಹಲವು ರಾಶಿಗಳಿಗೆ ಅನುಕೂಲಕರವಾಗಿ ಇರಲಿದೆ. ಕೆಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ನಿಮ್ಮ ಉದ್ಯೋಗ, ವ್ಯಾಪಾರ, ಪ್ರೇಮ ಜೀವನದ ಮೇಲೆಯೂ ಪರಿಣಾಮ ಬೀರಲಿದೆ. ಮೇಷರಾಶಿಯಿಂದ ಮೀನರಾಶಿಯವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ ಎಂದು ತಿಳಿಯೋಣಾ.

ಮೇಷ ರಾಶಿ (Aries)

ಮೇಷರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನ. ಉದ್ಯೋಗ ಕ್ಷೇತ್ರದಲ್ಲಿ ದೀರ್ಘಕಾಲದ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ದೊರೆಯಲಿದೆ. ಪ್ರೇಮ ಜೀವನವು ಮಧುರತೆಯಿಂದ ಕೂಡಿರಲಿದೆ. ಸಂಗಾತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ಕಚೇರಿಯ ಆಂತರಿಕ ರಾಜಕೀಯದಿಂದ ಸಾಧ್ಯವಾದಷ್ಟು ದೂರವಿರಿ. ಬುಧನ ಪ್ರಭಾವದಿಂದಾಗಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಖರ್ಚುಗಳ ಮೇಲೆ ಸದಾ ನಿಗಾ ಇರಲಿ. ಆರೋಗ್ಯದ ಕಡೆಗೆ ಗಮನ ಹರಿಸುವುದು ಮುಖ್ಯ.

ವೃಷಭ ರಾಶಿ (Taurus)

ನಿಮ್ಮ ಮನೆಯಲ್ಲಿಂದು ಸಂಭ್ರಮದ ವಾತಾವರಣ ಇರಲಿದೆ. ಈ ರಾಶಿಯವರಿಗೆ ಇಂದು ಸಿದ್ಧಿ ಯೋಗದ ಪ್ರಭಾವ ಇರಲಿದೆ. ಇದರಿಂದಾಗಿ ವೃತ್ತಿರಂಗದಲ್ಲಿ ಮುನ್ನೆಡೆಗೆ ಹೊಸ ಅವಕಾಶಗಳು ಒದಗಿ ಬರಲಿವೆ. ಕೆಲಸದ ಸ್ಥಳದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಜೊತೆಗೆ ಶುಭ ವಾರ್ತೆ ಕೇಳಬಹುದು. ಆರ್ಥಿಕ ಸ್ಥಿತಿ ಸ್ಥಿರವಾಗಿದ್ದರೂ, ವಾಹನ ಅಥವಾ ಮನೆಯ ರಿಪೇರಿಗಾಗಿ ಧನ ವ್ಯಯವಾಗುವ ಸಾಧ್ಯತೆ ಇದೆ. ದೀರ್ಘಕಾಲದ ಹೂಡಿಕೆಗಳು ಲಾಭ ತರಲಿವೆ. ಪರಿವಾರದವರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಪ್ರೇಮ ಸಂಬಂಧಗಳಲ್ಲಿ ಹೊಸ ಉತ್ಸಾಹ ಮೂಡಲಿದ್ದು, ಮಾನಸಿಕ ನೆಮ್ಮದಿ ಸಿಗಲಿದೆ.

ಮಿಥುನ ರಾಶಿ (Gemini)

ನಿಮ್ಮ ಪಾಲಿಗೆ ಇಂದು ಲಾಭದಾಯಕವಾದ ದಿನ. ವಿದ್ಯಾರ್ಥಿಗಳಿಗೆ ಮತ್ತು ಸಂಶೋಧನಾ ರಂಗದಲ್ಲಿ ಇರುವವರಿಗೆ ಹೆಚ್ಚಿನ ಕೀರ್ತಿ ಲಭಿಸಲಿದೆ. ಉದ್ಯಮದಲ್ಲಿ ಪರಿಸ್ಥಿತಿಗಳು ನಿಮ್ಮ ಕೈಹಿಡಿಯಲಿದ್ದು, ಧನಲಾಭದ ಯೋಗವಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಕಂಪನಿಗಳಿಂದ ಉದ್ಯೋಗದ ಆಫರ್‌ಗಳು ಬರಲಿದೆ. ಆಸ್ತಿ ಅಥವಾ ಹೊಸ ವಾಹನ ಖರೀದಿಸುವ ನಿಮ್ಮ ಕನಸು ಇಂದು ನನಸಾಗುವ ಸಾಧ್ಯತೆ ಇದೆ. ಸಾಮಾಜಿಕವಾಗಿಯೂ ನಿಮ್ಮ ಗೌರವ ಹೆಚ್ಚಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದ್ದು, ಸಂಗಾತಿಯಿಂದ ಪೂರ್ಣ ಸಹಕಾರ ಸಿಗಲಿದೆ. ಯಾವುದೇ ನಿರ್ಧಾರವನ್ನಾದರೂ ಯೋಚಿಸಿ ತಗೊಳ್ಳಿ.

ಕರ್ಕಾಟಕ ರಾಶಿ (Cancer)

ಹೊಸ ಹುಮ್ಮಸ್ಸಿನಿಂದ ಕೂಡಿರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವ್ಯಾಪಾರ, ಉದ್ಯೋಗದ ವಿಚಾರದಲ್ಲಿ ನಿಮಗೆ ಯಶಸ್ಸು ಖಚಿತ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಪೂರಕವಾದ ತೀರ್ಪು ಬರುವ ಸಾಧ್ಯತೆ ಇದೆ. ಹೊಸ ಆದಾಯದ ಮೂಲಗಳು ನಿಮಗೆ ಗೋಚರಕ್ಕೆ ಬರಲಿದೆ. ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ. ಅತಿಯಾದ ಖರ್ಚುಗಳು ನಿಮ್ಮ ಬಜೆಟ್ ಅನ್ನು ಏರುಪೇರು ಮಾಡಬಹುದು, ಆದ್ದರಿಂದ ಹಣದ ವಿಷಯದಲ್ಲಿ ಜಾಗ್ರತೆ ಇರಲಿ. ಸಾಲ ಕೊಡುವುದನ್ನು ತಪ್ಪಿಸಿ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ಪರಸ್ಪರ ನಂಬಿಕೆ ಹೆಚ್ಚಾಗಲಿದೆ.

ಸಿಂಹ ರಾಶಿ (Leo)

ಹೊಸ ಉದ್ಯಮ ಆರಂಭಕ್ಕೆ ಸೂಕ್ತವಾದ ಸಮಯ. ಸವಾಲುಗಳನ್ನು ಸುಲಭವಾಗಿ ಜಯಿಸುವಿರಿ. ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಹೊಸ ವ್ಯಕ್ತಿಗಳ ಪರಿಚಯದಿಂದ ದೊಡ್ಡಮಟ್ಟದ ಲಾಭವಾಗಲಿದೆ. ಪ್ರೇಮ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯವಿದ್ದರೆ, ಇಂದೇ ಪರಿಹರಿಸಿಕೊಳ್ಳುವುದು ಉತ್ತಮ. ಆರ್ಥಿಕ ವಿಚಾರಗಳಲ್ಲಿ ಯಾವುದೇ ರೀತಿಯ ರಿಸ್ಕ್‌ ತೆಗೆದುಕೊಳ್ಳುವ ಮುನ್ನ ಎಚ್ಚರ ಇರಲಿ. ಹೂಡಿಕೆಗೆ ಮುನ್ನ ಅನುಭವಸ್ಥರ ಸಲಹೆ ಪಡೆಯುವುದು ಉತ್ತಮ. ಕೆಲಸದ ನಡುವೆ ಆರೋಗ್ಯಕ್ಕೂ ಕೊಂಚ ಬಿಡುವು ನೀಡಿ.

ಕನ್ಯಾ ರಾಶಿ (Virgo)

ಕನ್ಯಾರಾಶಿಯವರ ಪಾಲಿಗೆ ಇಂದು ಸಾಧಾರಣವಾಗಿರುವ ದಿನ. ಹಗಲು ಗನಸು ಕಾಣುವುದನ್ನು ಬಿಟ್ಟು ಬಿಡಿ. ವಾಸ್ತವದ ನೆರಳಿನಲ್ಲೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಒತ್ತಡ ಹೆಚ್ಚಾಗಬಹುದು. ಹಣದ ವ್ಯವಹಾರದಲ್ಲಿ ಯಾವುದೇ ಕಾರಣಕ್ಕೂ ಅಪರಿಚಿತರನ್ನು ನಂಬಬೇಡಿ. ವೆಚ್ಚಗಳ ಮೇಲೆ ನಿಯಂತ್ರಣ ಇಡುವುದು ಮುಖ್ಯ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವ್ಯಾಪಾರಿಗಳಿಗೆ ದೊಡ್ಡಮಟ್ಟದ ಲಾಭ ದೊರೆಯಲಿದೆ.

ತುಲಾ ರಾಶಿ (Libra)

ತುಲಾ ರಾಶಿಯವರಿಗೆ ಇಂದು ನೆಮ್ಮದಿಯ ದಿನವಾಗಿರುತ್ತದೆ. ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಕುಟುಂಬ ಮತ್ತು ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸದ ವೈಖರಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗಲಿದೆ. ಸಹೋದ್ಯೋಗಿಗಳ ಸಹಾಯದಿಂದ ಹಳೆಯ ಬಾಕಿ ಕೆಲಸಗಳು ಸುಲಭವಾಗಿ ಮುಕ್ತಾಯಗೊಳ್ಳಲಿವೆ. ಹಳೆಯ ಹೂಡಿಕೆಗಳಿಂದ ನಿರೀಕ್ಷಿತ ಲಾಭ ಕೈಸೇರಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗಲಿದೆ. ಉದ್ಯೋಗ ಬದಲಾವಣೆ ಮಾಡಲು ಬಯಸುವವರಿಗೆ ಶುಭ ಸುದ್ದಿ ಸಿಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ.

ವೃಶ್ಚಿಕ ರಾಶಿ (Scorpio)

ಪ್ರಗತಿಯ ದಿನವಾಗಿದೆ. ನೌಕರಿಯಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಉದ್ಯಮದಲ್ಲಿ ಹಣ ಹೂಡಿಕೆ ಮಾಡಲು ಇಂದಿನ ದಿನ ಪ್ರಶಸ್ತವಾಗಿದೆ, ಆದರೆ ಕಾನೂನು ದಾಖಲೆಗಳನ್ನು ಗರ್ಭಿಣಿಯರು ಮತ್ತು ವಯಸ್ಸಾದವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ನಡೆಯಬಹುದು, ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ವ್ಯಾಪಾರಸ್ಥರಿಗೆ ಹೊಸ ಡೀಲ್ ಕುದುರಿಸಲು ಕಾನೂನು ದಾಖಲೆಗಳನ್ನು ಪರಿಶೀಲಿಸುವುದು ಮುಖ್ಯ.

ಧನಸ್ಸು ರಾಶಿ (Sagittarius)

ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆರ್ಥಿಕವಾಗಿ ಲಾಭದಾಯಕ ದಿನವಾಗಿದ್ದು, ಬರಬೇಕಾಗಿದ್ದ ಹಳೆಯ ಹಣ ಕೈಸೇರಲಿದೆ. ಬುಧಾದಿತ್ಯ ಯೋಗದ ಪ್ರಭಾವದಿಂದ ಸಾಮಾಜಿಕ ವಲಯದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಅಥವಾ ಹೊಸ ಹುದ್ದೆ ಸಿಗುವ ಯೋಗವಿದೆ. ಉದ್ಯಮಿಗಳಿಗೆ ದೂರದ ಪ್ರಯಾಣದಿಂದ ದೊಡ್ಡ ಲಾಭ ಸಿಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲಿದ್ದಾರೆ. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ.

ಮಕರ ರಾಶಿ (Capricorn)

ಇಂದಿನ ದಿನ ನಿಮ್ಮ ಪಾಲಿಗೆ ಮಿಶ್ರ ಫಲ ದೊರೆಯಲಿದೆ. ಮನಸ್ಸಿನಲ್ಲಿ ಬೇಡದ ಆತಂಕ ಅಥವಾ ಗೊಂದಲಗಳು ಉಂಟಾಗಬಹುದು, ಮನಸ್ಸಿನ ಶಾಂತಿಗಾಗಿ ದೇವತಾ ಪ್ರಾರ್ಥನೆ ಮಾಡಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು, ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನವಿಡಿ. ಧನಲಾಭ ಸಾಧಾರಣವಾಗಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸದ್ಯಕ್ಕೆ ಯಾರಿಗೂ ಸಾಲ ನೀಡಬೇಡಿ. ಕುಟುಂಬದ ಹಿರಿಯರ ಮಾರ್ಗದರ್ಶನದಿಂದ ನಿಮ್ಮ ದೊಡ್ಡ ಸಮಸ್ಯೆಯೊಂದು ಬಗೆಹರಿಯಲಿದೆ. ಆರೋಗ್ಯದ ದೃಷ್ಟಿಯಿಂದ ಸರಿಯಾದ ಸಮಯಕ್ಕೆ ಊಟ ಮಾಡುವುದನ್ನು ರೂಢಿಸಿಕೊಳ್ಳಿ.

ಕುಂಭ ರಾಶಿ (Aquarius)

ದಿನವಿಡೀ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ವಿಪರೀತ ಕೆಲಸದ ಕಾರಣದಿಂದಾಗಿ ದೈಹಿಕವಾಗಿ ಆಯಾಸ ಮತ್ತು ತಲೆನೋವು ಕಾಡಬಹುದು, ವಿಶ್ರಾಂತಿ ತೆಗೆದುಕೊಳ್ಳಿ. ಹೊಸ ವ್ಯಾಪಾರ ಆರಂಭಿಸಲು ಇಂದಿನ ದಿನ ಸೂಕ್ತವಲ್ಲ, ಹೂಡಿಕೆಯನ್ನು ಸದ್ಯಕ್ಕೆ ಮುಂದೂಡಿ. ಆರ್ಥಿಕ ವೆಚ್ಚಗಳು ಹೆಚ್ಚಾಗಲಿವೆ. ವೃತ್ತಿ ರಂಗದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾದರೂ, ಕೊನೆಗೆ ಗೆಲುವು ನಿಮ್ಮದೇ ಆಗಲಿದೆ. ಸಂಗಾತಿಯೊಂದಿಗೆ ಸೌಮ್ಯವಾಗಿ ಮಾತನಾಡಿ, ಜಗಳಗಳಿಂದ ದೂರವಿರಿ. ತಾಳ್ಮೆಯಿಂದ ವರ್ತಿಸಿದರೆ ದಿನವು ಸುಗಮವಾಗಿ ಸಾಗಲಿದೆ.

ಮೀನ ರಾಶಿ (Pisces)

ಅತ್ಯಂತ ಆನಂದದಾಯಕ ದಿನವಾಗಿರಲಿದೆ. ನಿಮ್ಮ ಆರೋಗ್ಯದಲ್ಲಿ ದಿನವಿಡೀ ಉತ್ತಮ ಚೈತನ್ಯ ಇರಲಿದೆ. ಆಫೀಸ್‌ನಲ್ಲಿ ಬಾಸ್‌ನಿಂದ ಮೆಚ್ಚುಗೆ ಮತ್ತು ಬಡ್ತಿಯ ಸೂಚನೆಗಳು ಸಿಗಲಿವೆ. ರಿಯಲ್ ಎಸ್ಟೇಟ್ ಅಥವಾ ಭೂಮಿ ವ್ಯವಹಾರ ಮಾಡುವವರಿಗೆ ಭರ್ಜರಿ ಲಾಭ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳ ಯೋಜನೆ ರೂಪಿಸುವಿರಿ. ಅವಿವಾಹಿತರಿಗೆ ಕಲ್ಯಾಣ ಯೋಗ ಕೂಡಿ ಬರಲಿದೆ. ಈ ಹಿಂದೆ ನೀವು ಮಾಡಿದ ಹಣಕಾಸಿನ ಉಳಿತಾಯಗಳು ಇಂದು ನಿಮ್ಮ ಸಂಕಷ್ಟಕ್ಕೆ ನೆರವಾಗಲಿವೆ.ನಿಮ್ಮ ಮನದ ಆಸೆಗಳು ಈಡೇರುವ ದಿನವಿದು.

daily horoscope 21 july 2026 rashi bhavishya kannada

Exit mobile version