ಸಿಂಹ ರಾಶಿಗೆ ಶುಕ್ರ ಗ್ರಹ ಸಂಚಾರ : ಕೇತುವಿನ ಜೊತೆ ಸೇರಿ ಈ 3 ರಾಶಿಗಳ ಜೀವನದಲ್ಲಿ ಭಾರಿ ಬದಲಾವಣೆ

ಕೇತು ಮತ್ತು ಶುಕ್ರನ ಸಂಯೋಗವು ಎಲ್ಲ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ ಕೆಲವು ರಾಶಿಯ ಮೇಲೆ ಇದರ ಪ್ರಭಾವ ಹೆಚ್ಚಾಗಿ ಇರಲಿದೆ. ಆ ರಾಶಿಗಳು ಯಾವುವು? ಇಲ್ಲಿದೆ ಓದಿ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಧನ, ಸಮೃದ್ಧಿ, ಐಶ್ವರ್ಯ ಹಾಗೂ ಪ್ರೇಮದ ಕಾರಕನೆಂದು ಗುರುತಿಸಲಾಗಿದೆ. ಜಾತಕದಲ್ಲಿ ಶುಕ್ರ ಗ್ರಹ ಪ್ರಬಲವಾಗಿದ್ದರೆ ಅಂತಹವರಿಗೆ ಜೀವನದಲ್ಲಿ ಯಾವುದೇ ಕೊರತೆ ಕಾಣಿಸುವುದಿಲ್ಲ. ಸುಖ–ಸಮೃದ್ಧಿಯ ಬದುಕು ಅವರದ್ದಾಗಿರುತ್ತದೆ ಎನ್ನಲಾಗಿದೆ. ಈ ಕಾರಣದಿಂದಲೇ ಶುಕ್ರ ಗ್ರಹದ ಸಂಚಾರವು ಬಹಳ ಮಹತ್ವಪೂರ್ಣವಾಗಿದೆ ಎನ್ನಲಾಗಿದೆ. ಜ್ಯೋತಿಷ್ಯ ಮಂಡಲದ ಎಲ್ಲ ರಾಶಿಗಳು ನಿರ್ದಿಷ್ಟ ಸಮಯದಲ್ಲಿ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಸಾಗುತ್ತವೆ. ಇದಕ್ಕೆ ಗ್ರಹ ಪರಿವರ್ತನ ಅಥವಾ ಗ್ರಹ ಸಂಕ್ರಮಣ ಎಂದು ಕರೆಯುತ್ತಾರೆ.

ಪ್ರತಿಯೊಂದು ಗ್ರಹವು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುತ್ತಿರುತ್ತವೆ. ಅದೇ ರೀತಿ ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಸಾಗಲಿದೆ. ಸಿಂಹ ರಾಶಿಯಲ್ಲಿ ಈಗಾಗಲೇ ಕೇತು ಗ್ರಹ ಸಂಚರಿಸುತ್ತಿದ್ದು, ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದಾನೆ. ಕೇತು ಮತ್ತು ಶುಕ್ರನ ಸಂಯೋಗವು ಎಲ್ಲ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ ಕೆಲವು ರಾಶಿಯ ಮೇಲೆ ಇದರ ಪ್ರಭಾವ ಹೆಚ್ಚಾಗಿ ಇರಲಿದೆ. ಆ ರಾಶಿಗಳು ಯಾವುವು? ಇಲ್ಲಿದೆ ಓದಿ.

ವೃಷಭ ರಾಶಿ

ಶುಕ್ರ ಮತ್ತು ಕೇತುವಿನ ಸಂಯೋಗವು ವೃಷಭ ರಾಶಿಯವರಿಗೆ ಅನುಕೂಲಕರ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಹೊಸ ಆದಾಯದ ಮೂಲಗಳು ಹೊರಹೊಮ್ಮುತ್ತವೆ. ವ್ಯವಹಾರದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಲೇ ಇರುತ್ತವೆ. ಈ ಸಮಯದಲ್ಲಿ ನಿಮಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಒಟ್ಟಾರೆಯಾಗಿ, ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ವೈಯಕ್ತಿಕ ಜೀವನವು ಅತ್ಯುತ್ತಮವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯ ಬೆಂಬಲವನ್ನು ಸಹ ಪಡೆಯುತ್ತೀರಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಉತ್ತಮ ಅವಕಾಶಗಳು ಒದಗಿಬರಲಿದೆ. ಲಾಭದಾಯಕ ದಾರಿ ನಿಮಗೆ ಸಿಗುತ್ತದೆ. ಅನಿರೀಕ್ಷಿತ ಲಾಭ ನಿಮಗೆ ಸಿಗಲಿದೆ. ಮಾನಸಿಕವಾಗಿ ಗಟ್ಟಿಯಾಗಿರುತ್ತೀರಿ. ವೈವಾಹಿಕ ಜೀವನವು ನಿಮಗೆ ಸಕಾರಾತ್ಮಕ ಕ್ಷಣಗಳನ್ನು ತರುತ್ತದೆ. ನಿಮ್ಮ ಆರ್ಥಿಕ ಯೋಜನೆ ಯಶಸ್ವಿಯಾಗುತ್ತದೆ.

ಇದನ್ನೂ ಓದಿ: ವಾಸ್ತು ಶಾಸ್ತ್ರದ ಎಚ್ಚರಿಕೆ: ಸಂಜೆ 6ರ ನಂತರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಗ್ಯಾರಂಟಿ!

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ, ಶುಕ್ರ ಮತ್ತು ಕೇತುವಿನ ಸಂಯೋಗವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಪ್ರೇಮ ಜೀವನವೂ ಸಂತೋಷವಾಗಿರಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ ಮತ್ತು ಹೂಡಿಕೆಗಳನ್ನು ಸಹ ಮಾಡುತ್ತೀರಿ. ಆದ್ದರಿಂದ, ಕೇತು ಮತ್ತು ಶುಕ್ರ ನಿಮ್ಮ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ.

Exit mobile version