Kannada News Next

education

ದಸರಾ ರಜೆಯಲ್ಲಿ ಬದಲಾವಣೆ : ಶಾಲಾ ಮಕ್ಕಳಿಗೆ ಭರ್ಜರಿ ಗುಡ್‌ನ್ಯೂಸ್‌

ನವರಾತ್ರಿಯ ಕಾಲದಲ್ಲಿ ಸಾಮಾನ್ಯವಾಗಿ ದಸರಾ ರಜೆ ನೀಡುವುದು ವಾಡಿಕೆ. ಸಾಮಾನ್ಯವಾಗಿ ದಸರಾ ರಜೆ 1 ತಿಂಗಳು ಹಾಗೂ ಬೇಸಿಗೆ ರಜೆ 2 ತಿಂಗಳು ನೀಡಲಾಗುತ್ತಿತ್ತು.

By Arun Gundmi | ಅರುಣ್‌ ಗುಂಡ್ಮಿ Editor-in-Chief
dasara holiday update Karnataka schools extended

ಬೆಂಗಳೂರು : ಕರ್ನಾಟಕದಲ್ಲಿ ಶಾಲೆಗಳು ಆರಂಭಗೊಂಡು ಅರ್ಧ ಶೈಕ್ಷಣಿಕ ವರ್ಷವೇ ಕಳೆದಿದೆ. ರಾಜ್ಯದಾದ್ಯಂತ ಮಧ್ಯವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದ್ದು, ದಸರಾ ರಜೆಗೆ ದಿನಗಣನೆ ಶುರುವಾಗಿದೆ. ನಡುವಲ್ಲೇ ಈ ಬಾರಿ ದಸರಾ ರಜೆಯಲ್ಲಿ ಬಾರೀ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ.

ನವರಾತ್ರಿಯ ಕಾಲದಲ್ಲಿ ಸಾಮಾನ್ಯವಾಗಿ ದಸರಾ ರಜೆ ನೀಡುವುದು ವಾಡಿಕೆ. ಸಾಮಾನ್ಯವಾಗಿ ದಸರಾ ರಜೆ 1 ತಿಂಗಳು ಹಾಗೂ ಬೇಸಿಗೆ ರಜೆ 2 ತಿಂಗಳು ನೀಡಲಾಗುತ್ತಿತ್ತು. ಆದರೆ ಕೊರೊನಾ ಕಾಲಘಟ್ಟದ ನಂತರದಲ್ಲಿ ದಸರಾ ರಜೆ ಕತ್ತರಿ ಬಿದ್ದಿದೆ. ಕಳೆದ 2024ರಲ್ಲಿ 17 ದಿನ, 2025ರಲ್ಲಿ 18 ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು.

2026ರ ಸಾಲಿನ ದಸರಾ ರಜೆಯು ಅಕ್ಟೋಬರ್‌ 3ರಿಂದ ಆರಂಭಗೊಂಡು ಅಕ್ಟೋಬರ್‌ 21ಕ್ಕೆ ಕೊನೆಯಾಗಲಿದೆ. ಅಕ್ಟೋಬರ್‌ 22ರಂದು ಕರ್ನಾಟಕದಲ್ಲಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಆರಂಭಗೊಳ್ಳಲಿವೆ. ಆದರೆ ಅಲ್ಪಸಂಖ್ಯಾತ ಶಾಲೆಗಳು ಕ್ರಿಸ್‌ಮಸ್‌ ಅವಧಿಯಲ್ಲಿ ರಜೆ ನೀಡುವ ಹಿನ್ನೆಲೆಯಲ್ಲಿ ದಸರಾ ರಜೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಿವೆ.

ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಎರಡು ದಿನಗಳ ಕಾಲ ಹೆಚ್ಚುವರಿ ರಜೆ ಸಿಗಲಿದೆ. ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸರಕಾರಿ ರಜೆ ಇರಲಿದೆ. ಅಲ್ಲದೇ ಈ ಬಾರಿ ಒಟ್ಟು 19 ದಿನಗಳ ಕಾಲ ಶಾಲೆಗಳಿಗೆ ರಜೆ ಇರೋದ್ರಿಂದ 20 ದಿನಗಳ ಕಾಲ ಮತ್ತು ದಸರಾ ರಜೆಯನ್ನು ಅನುಭವಿಸಬಹುದಾಗಿದೆ.

ವಿಜಯ ದಶಮಿ ಮರುದಿನ ಶಾಲಾರಂಭ

ಕಳೆದ ಎರಡು ವರ್ಷಗಳಲ್ಲಿ ನವರಾತ್ರಿ ಬಹುಬೇಗನೇ ಆರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ದಸರೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅಕ್ಟೋಬರ್‌ 21ರಂದು ವಿಜಯ ದಶಮಿ ನಡೆಯಿದೆ. ವಿಜಯದಶಮಿಯ ಮರು ದಿನ ಶಾಲೆಗಳು ಪುನರರಾರಂಭಗೊಳ್ಳಲಿವೆ.

ಈ ಬಾರಿ ನವರಾತ್ರಿ ಆರಂಭಕ್ಕೂ ಮೊದಲೇ ರಜೆ ಸಿಕ್ಕಿರುವ ಕಾರಣದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರವಾಸದ ಜೊತೆ ಜೊತೆಗೆ ದಸರಾವನ್ನು ಕಣ್ತುಂಬಿಕೊಳ್ಳಲು ಕೂಡ ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಈ ಬಾರಿಯ ದಸರಾ ರಜೆ ವಿದ್ಯಾರ್ಥಿಗಳಿಗೆ ಡಬಲ್‌ ಖುಷಿಯನ್ನು ತಂದುಕೊಟ್ಟಿದೆ.