SSLC Result 2026 : ಇಂಟರ್‌ನೆಟ್‌ ಇಲ್ವಾ? ಚಿಂತೆ ಬೇಡ ! ಮೊಬೈಲ್‌ನಲ್ಲಿ ಕೇವಲ ಒಂದು SMS ಮೂಲಕ SSLC ರಿಸಲ್ಟ್ ಚೆಕ್‌ ಮಾಡಿ

ಇಂಟರ್‌ನೆಟ್‌ ಅಥವಾ ಸ್ಮಾರ್ಟ್‌ಫೋನ್‌ ಇಲ್ಲದಿದ್ದರೂ ಕೇವಲ ಒಂದು ಎಸ್‌ಎಂಎಸ್‌ (SMS) ಮೂಲಕ ನಿಮ್ಮ ಅಂಕಗಳನ್ನು ಪಡೆಯಬಹುದು.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಲಿದೆ. ಸುಮಾರು 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸುವ ಕಾರಣಕ್ಕೆ ಸರ್ವರ್‌ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ವೇಳೆಯಲ್ಲಿ ಇಂಟರ್‌ನೆಟ್‌ ಕೂಡ ಕೈಕೊಡಬಹುದು. ಹಾಗಂತ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗದೆ ಮೊಬೈಲ್‌ ಮೂಲಕವೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಿಸಬಹುದಾಗದೆ.

ಪರೀಕ್ಷಾ ಮಂಡಳಿ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದು, ವೆಬ್‌ಸೈಟ್‌, ಡಿಜಿಲಾಕರ್‌ ಮೂಲಕವೂ ಫಲಿತಾಂಶ ವೀಕ್ಷಿಸಲು ಅವಕಾಶವಿದೆ. ಒಂದೊಮ್ಮೆ ಇಂಟರ್‌ನೆಟ್‌ ಅಥವಾ ಸ್ಮಾರ್ಟ್‌ಫೋನ್‌ ಇಲ್ಲದಿದ್ದರೂ ಕೇವಲ ಒಂದು ಎಸ್‌ಎಂಎಸ್‌ (SMS) ಮೂಲಕ ನಿಮ್ಮ ಅಂಕಗಳನ್ನು ಪಡೆಯಬಹುದು.

SSLC Result 2026 : SMS ಮೂಲಕ ಫಲಿತಾಂಶ ಪಡೆಯುವುದು ಹೇಗೆ ?

ವೆಬ್‌ಸೈಟ್ ಓಪನ್ ಆಗದಿದ್ದರೆ ಅಥವಾ ನಿಮ್ಮ ಬಳಿ ಡೇಟಾ ಬ್ಯಾಲೆನ್ಸ್ ಇಲ್ಲದಿದ್ದರೆ ಈ ಸರಳ ಹಂತಗಳನ್ನು ಅನುಸರಿಸಿ:

Also Read : SSLC 2026 ಪ್ರಕಟ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

SSLC Result 2026 : ಡಿಜಿಲಾಕರ್ (DigiLocker) ನಲ್ಲೂ ಫಲಿತಾಂಶ ಲಭ್ಯ

ಒಂದು ವೇಳೆ ನೀವು ಇಂಟರ್‌ನೆಟ್ ಸಂಪರ್ಕ ಹೊಂದಿದ್ದರೆ ಮತ್ತು ವೆಬ್‌ಸೈಟ್ ಲೋಡ್ ಆಗದಿದ್ದರೆ, ಡಿಜಿಲಾಕರ್ ಆಪ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದು. ಒಮ್ಮೆ ನಿಮ್ಮ ಅಂಕಪಟ್ಟಿ ಇಲ್ಲಿ ಅಪ್‌ಲೋಡ್ ಆದ ಮೇಲೆ, ಅದನ್ನು ನೀವು ಆಫ್‌ಲೈನ್‌ನಲ್ಲೂ ನೋಡಲು ಸೇವ್ ಮಾಡಿಕೊಳ್ಳಬಹುದು. ಇದು ಅಧಿಕೃತ ದಾಖಲೆಯಾಗಿದ್ದು, ಮುಂದಿನ ಪ್ರವೇಶ ಪ್ರಕ್ರಿಯೆಗಳಿಗೂ ಬಳಸಬಹುದು.

SSLC Result 2026 : ಮತ್ತೆಲ್ಲಿ ಫಲಿತಾಂಶ ಸಿಗಲಿದೆ ?

ಫಲಿತಾಂಶದ ದಿನದಂದು ಸರ್ವರ್ ಕಾರಣದಿಂದ ಮೆಸೇಜ್ ಬರಲು ಅಥವಾ ಪೇಜ್ ಲೋಡ್ ಆಗಲು ಕೆಲವು ನಿಮಿಷಗಳ ವಿಳಂಬವಾಗಬಹುದು. ಇಂತಹ ಸಮಯದಲ್ಲಿ ತಾಳ್ಮೆಯಿಂದ ಇರುವುದು ಮುಖ್ಯ. ಈ ಬಾರಿ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ.

Exit mobile version