ಏಕೆ ಭಾನುವಾರವೇ ರಜೆ? ಭಾನುವಾರದ ರಜೆಯ ಹಿಂದಿರುವ ಇತಿಹಾಸ ಮತ್ತು ಹೋರಾಟ

ಪ್ರತೀ ವಾರದ ಕೊನೆಯಲ್ಲಿ ಬರುವ ಭಾನುವಾರ ಎಂದರೆ ಬಹುತೇಕ ಎಲ್ಲರಿಗೂ ಸಂತೋಷ. ಕಚೇರಿಗಳು, ಶಾಲೆಗಳು, ಬ್ಯಾಂಕುಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಇದು ಸಾಪ್ತಾಹಿಕ ರಜೆ. ಆದರೆ, ಏಕೆ ಇತರ ದಿನಗಳ ಬದಲು ರವಿವಾರವನ್ನೇ ರಜಾದಿನವನ್ನಾಗಿ ಘೋಷಿಸಲಾಗಿದೆ? ಇದರ ಹಿಂದೆ ಧಾರ್ಮಿಕ ಮತ್ತು ಕಾರ್ಮಿಕ ಹೋರಾಟದ ಒಂದು ಸುದೀರ್ಘ ಇತಿಹಾಸವೇ ಇದೆ.

ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಕ್ರೈಸ್ತ ಧರ್ಮದ ಪ್ರಭಾವ
ರವಿವಾರವನ್ನು ವಾರದ ರಜೆಯನ್ನಾಗಿ ಆಚರಿಸುವ ಪದ್ಧತಿಯು ಮೊದಲು ಪಾಶ್ಚಿಮಾತ್ಯ ದೇಶಗಳಿಂದ, ವಿಶೇಷವಾಗಿ ಕ್ರೈಸ್ತ ಧರ್ಮದಿಂದ ಬಂದಿದೆ. ಕ್ರೈಸ್ತ ಸಂಪ್ರದಾಯದಲ್ಲಿ, ಭಾನುವಾರವನ್ನು ‘ದೇವರ ದಿನ’ (Lord’s Day) ಎಂದು ಪರಿಗಣಿಸಲಾಗುತ್ತದೆ. ಬೈಬಲ್ ಪ್ರಕಾರ, ದೇವರು ಆರು ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿ ಏಳನೇ ದಿನದಂದು ವಿಶ್ರಾಂತಿ ತೆಗೆದುಕೊಂಡನು.

ಕ್ರಿ.ಶ. 321 ರಲ್ಲಿ, ರೋಮನ್ ಸಾಮ್ರಾಜ್ಯದ ಮೊದಲ ಕ್ರೈಸ್ತ ಚಕ್ರವರ್ತಿಯಾದ ಕಾನ್‌ಸ್ಟಂಟೈನ್ I ಭಾನುವಾರವನ್ನು ವಿಶ್ರಾಂತಿಯ ದಿನವೆಂದು (Day of Rest) ಘೋಷಿಸಿದನು. ಈ ದಿನ ಜನರು ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಯಿತು. ನಂತರ, ಬ್ರಿಟಿಷರ ವಸಾಹತುಶಾಹಿ ಆಡಳಿತವು ವಿಶ್ವದಾದ್ಯಂತ ವಿಸ್ತರಿಸಿದಾಗ, ಅವರ ಧಾರ್ಮಿಕ ಆಚರಣೆಯಾದ ಭಾನುವಾರದ ರಜೆಯ ಸಂಪ್ರದಾಯವು ಭಾರತ ಸೇರಿದಂತೆ ಅನೇಕ ದೇಶಗಳ ಅಧಿಕೃತ ವ್ಯವಸ್ಥೆಯ ಭಾಗವಾಯಿತು.

ಭಾರತದಲ್ಲಿ ರವಿವಾರ ರಜೆ:

ಕಾರ್ಮಿಕರ ಹೋರಾಟದ ಫಲ
ಬ್ರಿಟಿಷರ ಆಡಳಿತ ಭಾರತದಲ್ಲಿದ್ದಾಗ, ಅವರ ಕ್ರೈಸ್ತ ಅಧಿಕಾರಿಗಳು ಭಾನುವಾರದಂದು ಚರ್ಚ್‌ಗೆ ಹೋಗಲು ರಜೆ ತೆಗೆದುಕೊಳ್ಳುತ್ತಿದ್ದರು. ಆದರೆ, ಭಾರತೀಯ ಕಾರ್ಮಿಕರಿಗೆ ಮತ್ತು ಜನಸಾಮಾನ್ಯರಿಗೆ ಯಾವುದೇ ಸಾಪ್ತಾಹಿಕ ರಜೆ ಇರಲಿಲ್ಲ. ಕಾರ್ಖಾನೆಗಳು ಮತ್ತು ಗಿರಣಿಗಳಲ್ಲಿ ವಾರದ ಏಳೂ ದಿನಗಳ ಕಾಲ ಭಾರತೀಯರು ಕಷ್ಟಪಟ್ಟು ದುಡಿಯಬೇಕಿತ್ತು.
ಈ ಅನ್ಯಾಯವನ್ನು ಕಂಡ ಭಾರತೀಯ ಕಾರ್ಮಿಕ ನಾಯಕ ನಾರಾಯಣ ಮೇಘಾಜಿ ಲೋಖಂಡೆ ಅವರು 1880 ರ ದಶಕದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದರು.

ಆರು ದಿನ ದುಡಿದ ನಂತರ ಕಾರ್ಮಿಕರು ವಿಶ್ರಾಂತಿ ಪಡೆಯಲು, ಕುಟುಂಬದವರೊಂದಿಗೆ ಸಮಯ ಕಳೆಯಲು ಮತ್ತು ತಮ್ಮ ತಮ್ಮ ಧರ್ಮದ ದೇವರ ಪೂಜೆ ಮಾಡಲು ಒಂದು ದಿನದ ರಜೆ ನೀಡಬೇಕೆಂದು ಅವರು ಬ್ರಿಟಿಷ್ ಸರ್ಕಾರದ ಮುಂದೆ ಪ್ರಬಲ ಬೇಡಿಕೆ ಮಂಡಿಸಿದರು.
ಕಾರ್ಮಿಕರ ಪರವಾಗಿ ಲೋಖಂಡೆ ಅವರು ಏಳು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದರು.

ಅಂತಿಮವಾಗಿ, ಅವರ ಹೋರಾಟದ ಫಲವಾಗಿ ಬ್ರಿಟಿಷ್ ಸರ್ಕಾರವು ಜೂನ್ 10, 1890 ರಂದು ಭಾರತೀಯ ಗಿರಣಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಭಾನುವಾರವನ್ನು ಅಧಿಕೃತ ರಜಾದಿನ ಎಂದು ಘೋಷಿಸಿತು.

ಇಂದಿನ ದಿನಗಳಲ್ಲಿ ರವಿವಾರ ರಜೆಯ ಮಹತ್ವ

ರವಿವಾರದ ರಜೆಯು ಕೇವಲ ಒಂದು ಧಾರ್ಮಿಕ ಅಥವಾ ಐತಿಹಾಸಿಕ ಪದ್ಧತಿಯಾಗಿ ಉಳಿದಿಲ್ಲ. ಆಧುನಿಕ ಸಮಾಜದಲ್ಲಿ ಇದು ಅತ್ಯಂತ ಮುಖ್ಯವಾದ ಸಾಮಾಜಿಕ ಮತ್ತು ಆರ್ಥಿಕ ಅಗತ್ಯವಾಗಿದೆ:

Exit mobile version