Kannada News Next

entertainment

ಬಣ್ಣದ ಲೋಕಕ್ಕೆ ಅನಂತ್ ನಾಗ್ ಗುಡ್‌ಬೈ.. ಅಸಲಿ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯ ಸಂಭ್ರಮದಲ್ಲಿ ಇರುವ ನಟ ಅನಂತ್ ನಾಗ್ ಅವರು ಸಿನಿಪ್ರೇಮಿಗಳಿಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌
Anant Nag

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯ ಸಂಭ್ರಮದಲ್ಲಿ ಇರುವ ಕರುನಾಡಿನ ಹಿರಿಯ ಮೇರು ನಟ ಅನಂತ್ ನಾಗ್, ಸಿನಿಪ್ರೇಮಿಗಳಿಗೆ ಒಂದು ಆಘಾತಕಾರಿ ಸುದ್ದಿಯನ್ನು ನೀಡಿದ್ದಾರೆ. ಇನ್ನು ಮುಂದೆ ತಾವೆಂದೂ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಶಸ್ತಿ ಬಂದ ಖುಷಿಯ ಜೊತೆಗೆ ಇಂದಿನ ಸಿನಿಮಾ ರಂಗದ ಬದಲಾದ ಧೋರಣೆ ಹಾಗೂ ಕಥೆಗಳ ಕಳಪೆ ಗುಣಮಟ್ಟದ ಬಗ್ಗೆ ಅನಂತ್ ನಾಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಕಥೆ ಮತ್ತು ವಿಷಯ ಆಧಾರಿತ ಸಿನಿಮಾಗಳಿಗಿಂತ ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಹಾಗೂ ಹಣಕ್ಕೆ ಮಾತ್ರ ಅತಿಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಒಪ್ಪಿಕೊಂಡ ಕೊನೆಯ ಐದೂ ಸಿನಿಮಾಗಳು ಸೋತವು. ಆ ಕ್ಷಣವೇ ನನಗೆ ಅನಿಸಿತು - ಇಷ್ಟಕ್ಕೇ ಸಾಕು, ಇದನ್ನೆಲ್ಲಾ ಬಿಟ್ಟುಬಿಡಬೇಕು. ನಾನು ಇನ್ಮುಂದೆ ನಟಿಸಬಾರದು ಎಂದು ನಿರ್ಧರಿಸಿದೆ" ಎಂದು ತಮ್ಮ ನಿವೃತ್ತಿಯ ಹಿಂದಿನ ಕಹಿ ಅನುಭವವನ್ನು ಹಿರಿಯ ನಟ ಬಿಚ್ಚಿಟ್ಟಿದ್ದಾರೆ.

ಅನಂತ್ ನಾಗ್ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ಎಲ್ಲಾ ಊಹಾಪೋಹಗಳನ್ನು ಅವರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಪ್ರಸ್ತುತ ಪೀಳಿಗೆಯ ಸಮಕಾಲೀನ ನಿರ್ದೇಶಕರ ಜೊತೆ ಕೆಲಸ ಮಾಡುವ ಆಸಕ್ತಿ ತಮಗಿಲ್ಲ ಎಂದೂ ಅವರು ಖಡಕ್ ಆಗಿ ನುಡಿದಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸಹಜ ಅಭಿನಯದಿಂದ ಕೋಟ್ಯಂತರ ಕನ್ನಡಿಗರ ಹಾಗೂ ಭಾರತೀಯರ ಮನ ಗೆದ್ದಿರುವ ಅನಂತ್ ನಾಗ್ ಅವರ ಈ ದಿಢೀರ್ ನಿವೃತ್ತಿ ನಿರ್ಧಾರವು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಹಾಗೂ ಬೇಸರವನ್ನುಂಟು ಮಾಡಿದೆ.