Kannada News Next

entertainment

ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ ಕಿರಿಕ್: ಆಸಿಯಾ ವಾಯ್ಸ್ ಟೋನ್ ಮಿಮಿಕ್ರಿ ಮಾಡಿದ ಸೌಂದರ್ಯಾ

ಬಿಗ್ ಬಾಸ್ ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದ್ದು, ಸ್ಪರ್ಧಿಗಳ ಅಸಲಿ ಬಣ್ಣ ಬಯಲಾಗುವ ಸಮಯ ಬಂದಿದೆ.

By Meghana Pranuth | ಮೇಘನಾ ಪ್ರಣೂತ್‌
Photo: photo creadit: colors kannada

ಬಿಗ್ ಬಾಸ್ ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದ್ದು, ಸ್ಪರ್ಧಿಗಳ ಅಸಲಿ ಬಣ್ಣ ಬಯಲಾಗುವ ಸಮಯ ಬಂದಿದೆ. ಆಟದ ರಭಸ ಹೆಚ್ಚುತ್ತಿದ್ದಂತೆ, ಗಮನ ಸೆಳೆಯಲು ಸ್ಪರ್ಧಿಗಳು ಯಾವ ಹಂತಕ್ಕೂ ಹೋಗುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ.

ಸದಾ ಬೋಲ್ಡ್ ವ್ಯಕ್ತಿತ್ವ ಹಾಗೂ ಖಡಕ್ ಮಾತುಗಳಿಂದಲೇ ಎಲ್ಲರ ಗಮನ ಸೆಳೆದಿದ್ದ ಸೌಂದರ್ಯಾ ಶೆಟ್ಟಿ, ಈ ವಾರ ಮತ್ತೊಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಹೌದು, ಮನೆಯ ಮತ್ತೊಬ್ಬ ಸ್ಪರ್ಧಿ ಆಸಿಯಾ ಅವರ ಮಾತನಾಡುವ ಶೈಲಿ ಮತ್ತು ನಡೆದುಕೊಳ್ಳುವ ರೀತಿಯನ್ನು ಸೌಂದರ್ಯಾ ಶೆಟ್ಟಿ ಇತರ ಸ್ಪರ್ಧಿಗಳ ಮುಂದೆ ಹಾವಭಾವ ಸಹಿತ ನಕಲು ಮಾಡಿ ತೋರಿಸಿದ್ದಾರೆ.

ಆಸಿಯಾರ ಧ್ವನಿಯ ಟೋನ್ (Voice Tone) ಹಾಗೂ ಮುಖದ ಎಕ್ಸ್‌ಪ್ರೆಷನ್‌ಗಳನ್ನು (Expressions) ಅಪಹಾಸ್ಯ ಮಾಡಿದ ರೀತಿಯ ವಿಡಿಯೋ ಈಗ ವೈರಲ್ ಆಗುತ್ತಿದ್ದು, "ಒಬ್ಬರ ವ್ಯಕ್ತಿತ್ವವನ್ನು ಈ ರೀತಿ ಅಣಕಿಸುವುದು ಎಷ್ಟು ಸರಿ?" ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಆರಂಭದಲ್ಲಿ ಸೌಂದರ್ಯಾ ಅವರ ಆಟವನ್ನು ಮೆಚ್ಚಿದ್ದ ಅಭಿಮಾನಿಗಳು ಸಹ, ಈ ರೀತಿಯ ನಡವಳಿಕೆಯಿಂದ ತುಸು ನಿರಾಶೆಗೊಂಡಿದ್ದಾರೆ.